ಉಡುಪಿ: 77 ವರದಿಗಳು ನೆಗೆಟಿವ್
Team Udayavani, May 7, 2020, 5:56 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಕೋವಿಡ್- 19 ಸೋಂಕು ಲಕ್ಷಣದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬುಧವಾರ 63 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಉಸಿರಾಟದ ಸಮಸ್ಯೆ ಇರುವ 5, ಜ್ವರದ 11, ಹಾಟ್‌ಸ್ಪಾಟ್ ಸಂಪರ್ಕದ 47 ಮಂದಿಯಿದ್ದಾರೆ. ಈ ಹಿಂದೆ ಕಳುಹಿಸಿದ್ದ 77 ವರದಿಗಳು ನೆಗೆಟಿವ್ ಬಂದಿವೆ. 111 ಮಂದಿಯ ವರದಿ ಬರಲು ಬಾಕಿಯಿದೆ.
ಬುಧವಾರ ಒಟ್ಟು 112 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. 28 ಮಂದಿ 28 ದಿನಗಳ ನಿಗಾವಣೆ, 31 ಮಂದಿ 14 ದಿನಗಳ ನಿಗಾವಣೆ ಪೂರೈಸಿದ್ದಾರೆ. ಉಸಿರಾಟದ ಸಮಸ್ಯೆಯುಳ್ಳ ಐದು ಮಂದಿ ಪುರುಷರು, ಇಬ್ಬರು ಮಹಿಳೆಯರು, ಕೋವಿಡ್ ಸೋಂಕು ಸಂಪರ್ಕದ ಓರ್ವ ಪುರುಷ, ಜ್ವರ ಲಕ್ಷಣದ ಓರ್ವ ಪುರುಷ, ಇಬ್ಬರು ಮಹಿಳೆಯರು ಸಹಿತ ಒಟ್ಟು 11 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. 8 ಮಂದಿ ಐಸೊಲೇಶನ್ ವಾರ್ಡ್‌ನಿಂದ ಬಿಡುಗಡೆಯಾಗಿದ್ದಾರೆ.
ಬೆಳಗಾವಿಯಿಂದ ಬಂದವರ ವರದಿ ನೆಗೆಟಿವ್
ಬೆಳಗಾವಿಯಿಂದ ಉಡುಪಿ ಜಿಲ್ಲೆಗೆ ಆಗಮಿಸಿದ್ದ 10 ಮಂದಿಯ ವರದಿಯೂ ನೆಗೆಟಿವ್ ಬಂದಿದೆ. ಮಂಗಳವಾರ ಐವರು, ಬುಧವಾರ ಐವರ ವರದಿ ನೆಗೆಟಿವ್ ಬಂದಿದೆ. ಈ ಪೈಕಿ ಒಬ್ಬರು ಕುಂದಾಪುರದ ಖಾಸಗಿ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ನಲ್ಲಿ, ಉಳಿದ 9 ಮಂದಿ ಕುಂದಾಪುರ, ಉಡುಪಿಯ ಬಿಸಿಎಂ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಬಗ್ಗೆ ಗುರುವಾರ ತೀರ್ಮಾನವಾಗಲಿದೆ.
2ನೇ ಬಾರಿ ನೆಗೆಟಿವ್
ಮಂಡ್ಯದಿಂದ ಬಂದ ಕೋವಿಡ್-19 ಸೋಂಕು ಲಕ್ಷಣದ ವ್ಯಕ್ತಿಯ ಸಂಪರ್ಕಕ್ಕೊಳಪಟ್ಟಿದ್ದ ತೆಕ್ಕಟ್ಟೆ ಪೆಟ್ರೋಲ್ ಬಂಕ್, ಸಾಸ್ತಾನ ಟೋಲ್ ಗೇಟ್‌ನ ಎಲ್ಲ 18 ಮಂದಿ ಸಿಬಂದಿಯ ವರದಿಯೂ ಎರಡನೇ ಬಾರಿಗೆ ನೆಗೆಟಿವ್ ಬಂದಿದೆ. ಮಂಗಳವಾರ 10 ವರದಿಗಳು ನೆಗೆಟಿವ್ ಬಂದಿದ್ದರೆ ಬುಧವಾರ 8 ವರದಿಗಳು ನೆಗೆಟಿವ್ ಬಂದಿವೆ.
ಬಾದಾಮಿ ಯುವತಿಗೆ ಸೋಂಕು
ಉಡುಪಿ ಸಂಪರ್ಕದಿಂದ ಅಲ್ಲ
ಉಡುಪಿಯಿಂದ ಬಾದಾಮಿಗೆ ತೆರಳಿದ 18ರ ಯುವತಿಯಲ್ಲಿ ಕೋವಿಡ್- 19 ಪಾಸಿಟಿನ್ ಕಂಡುಬಂದಿದೆ. ನಿಟ್ಟೆಯಲ್ಲಿ ಓದುತ್ತಿದ್ದ ಆಕೆ ರಜೆಯ ಕಾರಣ ಮಾರ್ಚ್ 14ರಂದು ಊರಿಗೆ ತೆರಳಿರುವುದಾಗಿ ಬಾಗಲ ಕೋಟೆ ಜಿಲ್ಲಾಧಿಕಾರಿ, ಎಸ್ಪಿ ಅವರು ಮಾಹಿತಿ ನೀಡಿದ್ದಾರೆ. ಹಾಗಾಗಿ ಆಕೆಗೆ ಉಡುಪಿಯ ಯಾವುದೇ ಸಂಪರ್ಕದಿಂದ ಕೋವಿಡ್- 19 ಪಾಸಿಟಿವ್ ಬರುವ ಸಾಧ್ಯತೆ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಅಲ್ಲಿ ಮೇ 2ರಂದು ಪಾಸಿಟಿವ್ ಬಂದ 23ರ ಹರೆಯದ ಗರ್ಭಿಣಿಯ ಸಂಪರ್ಕಕ್ಕೆ ಮೊದಲೇ ಬಂದಿದ್ದ ಈ ಯುವತಿಯಲ್ಲಿ ಬುಧವಾರ ಪಾಸಿಟಿವ್ ಕಂಡುಬಂದಿದೆ. ಬಾದಾಮಿಯಲ್ಲಿ ಬುಧವಾರ ಕಂಡುಬಂದ ಒಟ್ಟು 13 ಪ್ರಕರಣಗಳಲ್ಲಿ 12 ಮಂದಿ ಈ ಗರ್ಭಿಣಿಯ ಸಂಪರ್ಕಕ್ಕೆ ಬಂದವರಾಗಿದ್ದಾರೆ ಎಂದು ಉಡುಪಿ ಡಿಎಚ್‌ಒ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದರು.
ಏರ್‌ಲಿಫ್ಟ್: 112 ಮಂದಿ ನೋಂದಣಿ
ಉಡುಪಿ: ಕೋವಿಡ್- 19 ಸೋಂಕು ಲಕ್ಷಣದಿಂದ ವಿವಿಧ ದೇಶಗಳಲ್ಲಿ ಸಿಲುಕಿರುವ ಜಿಲ್ಲೆಯ 112 ಮಂದಿ ಭಾರತಕ್ಕೆ ಮರಳಿ ಬರಲು ಹೆಸರು ನೋಂದಾಯಿಸಿಕೊಂಡಿದ್ದಾರೆ.ಉಡುಪಿ ಜಿಲ್ಲೆಗೆ ಕಾರವಾರ ಬಂದರು, ಮಂಗಳೂರು ಬಂದರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಗಮಿಸಲಿದ್ದಾರೆ.
ವಿದೇಶದಿಂದ ಬರುವ ಭಾರತೀಯರನ್ನು ತಪಾಸಣೆ ಮಾಡಿ ಎ, ಬಿ, ಸಿ, ಡಿ ಹೀಗೆ ವಿವಿಧ ಗ್ರೇಡ್‌ಗಳಲ್ಲಿ ವಿಭಾಗಿಸಿ ಅದರ ಪ್ರಕಾರ ಕ್ವಾರಂಟೈನ್ ನಡೆಸಲಾಗುತ್ತದೆ. ಎ ಕ್ಯೆಟಗರಿಯಲ್ಲಿ ಕೋವಿಡ್-19 ಸೋಂಕು, ಬಿ ಕೆಟಗರಿಯಲ್ಲಿ ಸರಕಾರಿ ಕ್ವಾರಂಟೈನ್ ಮತ್ತು ಲೋ ರಿಸ್ಕ್ , ಹೈ ರಿಸ್ಕ್ ಹೀಗೆ ಕೆಟಗರಿ ಮೂಲಕ ವಿಂಗಡಿಸಲಾಗುತ್ತದೆ. ಎ ಗ್ರೇಡ್‌ನಲ್ಲಿ ಕಂಡು ಬರುವ ಸೋಂಕಿತರನ್ನು ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ. ಸರಕಾರದ ಸೂಚನೆಯಂತೆ ಕ್ವಾರಂಟೈನ್ ಸಹಿತ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ವಿದೇಶದಿಂದ ಜಿಲ್ಲೆಗೆ ಆಗಮಿಸುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.