Udupi: ಶಂಕರಪುರ ಪೇಟೆಯ ಸಮೀಪ ಜನವಸತಿ ಪ್ರದೇಶಕ್ಕೆ ಚಿರತೆ ಲಗ್ಗೆ
Team Udayavani, Dec 14, 2024, 7:15 AM IST
ಕಟಪಾಡಿ: ಚಿರತೆಯೊಂದು ಶಂಕರಪುರ ಪೇಟೆಯ ಸಮೀಪದ ಮನೆಯಂಗಳಕ್ಕೆ ನುಗ್ಗಿ ಮನೆಯ ನಾಲ್ಕು ವರ್ಷದ ಪರ್ಶಿಯನ್ ಬೆಕ್ಕನ್ನು ಹೊತ್ತೂಯ್ದ ಘಟನೆ ಡಿ. 11ರ ರಾತ್ರಿ ನಡೆದಿದೆ. ಡಿ. 12ರಂದು ಬೆಳಗ್ಗೆ ನೋಡಿದಾಗ ಬೆಕ್ಕು ಕಾಣೆಯಾಗಿದ್ದನ್ನು ಗಮನಿಸಿದ ಮನೆಯವರು ಸಾಕಷ್ಟು ಹುಡುಕಾಡಿದ್ದರು. ಕೊನೆಗೆ ಸಿಸಿ ಕೆಮರಾ ಫುಟೇಜ್ ಪರಿಶೀಲನೆ ನಡೆಸಿದಾಗ ಚಿರತೆಯ ದಾಳಿ ಬಯಲಿಗೆ ಬಂದಿದೆ.
ಶಂಕರಪುರ ಪೇಟೆಯ ಸಮೀಪದ ಹಿತ್ಲುಹೌಸ್‌ನ ಮಾರ್ಗರೆಟ್ ಜುಡಿತ್ ಡಿ’ಸೋಜಾ ಅವರ ಮನೆಯಲ್ಲಿ ಘಟನೆ ನಡೆದಿದೆ. ಸಿಸಿ ಕೆಮರಾ ಫುಟೇಜ್ ಪ್ರಕಾರ, ಡಿ. 12ರ ರಾತ್ರಿ 1.25 ಗಂಟೆ ಹೊತ್ತಿಗೆ ಈ ಚಿರತೆ ಜನವಸತಿ ಪ್ರದೇಶಕ್ಕೆ ಬಂದಿದೆ. ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದ ಅದು ರಾತ್ರಿ 3 ಗಂಟೆಯ ಹೊತ್ತಿಗೆ ಬೆಕ್ಕನ್ನು ಹಿಡಿದು ತಿಂದು ಕಾಲ್ಕಿತ್ತಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ.
ಪಂಜಿಮಾರು ಭಾಗದಲ್ಲಿ ಈಗಾಗಲೇ ಚಿರತೆಯನ್ನು ಹಿಡಿಯಲು ಬೋನು ಇರಿಸಲಾಗಿದೆ ಎಂದು ಅರಣ್ಯ ಇಲಾಖೆಯ ಮಂಜುನಾಥ್ ನಾಯ್ಕ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲೆವೂರು-ಮಣಿಪಾಲ ರಸ್ತೆ: ಟಿಪ್ಪರ್- ಬೈಕ್ ನಡುವೆ ಢಿಕ್ಕಿ; ಓರ್ವ ಸಾವು, ಮತ್ತೊಬ್ಬ ಗಂಭೀರ
Navy: ಪಶ್ಚಿಮ ಕಮಾಂಡ್‌ನ ಮೆಡಿಕಲ್ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ
Udupi: ಸಿಎಸ್‌ಆರ್ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ
Manipal Kasturba Hospital: ಶಿಶುವಿನ ಯಕೃತ್ ಗೆಡ್ಡೆ ಶಸ್ತ್ರಚಿಕಿತ್ಸೆ: ಕೆಎಂಸಿ ಸಾಧನೆ
Manipal: ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿದ್ರೆ ಉನ್ನತ ಸ್ಥಾನ ಲಭ್ಯ: ಡಾ| ಸುಧಾಕರ ಶೆಟ್ಟಿ
MUST WATCH
ಹೊಸ ಸೇರ್ಪಡೆ
Allu Arjun: ಒಂದು ರಾತ್ರಿ ಕಳೆದು ಬೆಳ್ಳಂಬೆಳಗ್ಗೆ ಜೈಲಿನಿಂದ ಹೊರಬಂದ ಪುಷ್ಪರಾಜ್…
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?
B.C.Road: ಪರ್ಲಿಯಾ: ತಂಡಗಳ ಹೊಡೆದಾಟ; ದೂರು ದಾಖಲು
Udupi: ಶಂಕರಪುರ ಪೇಟೆಯ ಸಮೀಪ ಜನವಸತಿ ಪ್ರದೇಶಕ್ಕೆ ಚಿರತೆ ಲಗ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.