Udupi: ವ್ಯಕ್ತಿತ್ವ ವಿಕಸನಕ್ಕೆ ಪ್ರಾಚೀನ ಕ್ರೀಡೆಗಳು ಪೂರಕ: ಪುತ್ತಿಗೆ ಶ್ರೀ

ಶ್ರೀಕೃಷ್ಣ ಮಾಸೋತ್ಸವ "ಕ್ರೀಡೋತ್ಸವ' ಉದ್ಘಾಟನೆ

Team Udayavani, Aug 18, 2024, 8:52 PM IST

Udupi: ವ್ಯಕ್ತಿತ್ವ ವಿಕಸನಕ್ಕೆ ಪ್ರಾಚೀನ ಕ್ರೀಡೆಗಳು ಪೂರಕ: ಪುತ್ತಿಗೆ ಶ್ರೀ

ಉಡುಪಿ: ಶ್ರೀಕೃಷ್ಣನಿಗೆ ಪ್ರಿಯವಾದ ಲೀಲೆಯೊಂದಿಗೆ ಹಿಂದಿನಿಂದಲೂ ನಡೆದು ಬಂದ ಜಾನಪದ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಬಾರಿ ವಿಶೇಷವಾಗಿ ಕ್ರೀಡೋತ್ಸವವನ್ನು ಆಚರಿಸಲಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಪ್ರಾಚೀನ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

ಪರ್ಯಾಯ ಶ್ರೀಕೃಷ್ಣ ಮಠ, ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿರುವ ಶ್ರೀಕೃಷ್ಣ ಮಾಸೋತ್ಸವದ “ಕ್ರೀಡೋತ್ಸವ’ವನ್ನು ಕನಕ ಗೋಪುರದ ಮುಂಭಾಗದಲ್ಲಿ ರವಿವಾರ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕ್ರೀಡಾ ಜ್ಯೋತಿ ಬೆಳಗಿಸಿದ ಶಾಸಕ ಯಶ್‌ಪಾಲ್‌ ಎ. ಸುವರ್ಣ ಮಾತನಾಡಿ, ಸಾಂಪ್ರದಾಯಿಕ ಕ್ರೀಡೆಗಳ ಉಳಿವಿಗೆ ವಿಶೇಷ ಒತ್ತು ನೀಡುವ ಮೂಲಕ ಸನಾತನ ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದರು.

ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಹಿಂದಿನ ಕ್ರೀಡೆಗಳು ಉಳಿಯಬೇಕಾದರೆ ಪ್ರತಿಯೊಬ್ಬರೂ ಕ್ರೀಡಾಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದರು.

ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಹುಬ್ಬಳ್ಳಿಯ ಶ್ರೀಕಾಂತ ಕೆಮ್ತೂರು, ಕೋಶಾಧಿಕಾರಿ ರಂಜನ್‌ ಕಲ್ಕೂರ, ಶ್ರೀ ಮಠದ ದಿವಾನ ನಾಗರಾಜ ಆಚಾರ್ಯ, ಮ್ಯಾನೇಜರ್‌ ವಿಷ್ಣುಮೂರ್ತಿ ಉಪಾಧ್ಯಾಯ, ರಮೇಶ್‌ ಭಟ್‌ ಕೆ., ರವೀಂದ್ರ ಆಚಾರ್ಯ, ಮಹಿತೋಷ್‌ ಆಚಾರ್ಯ, ರಾಮಚಂದ್ರ ಉಪಾಧ್ಯಾಯ, ಸಂಚಾಲಕ ಈಶ್ವರ ಚಿಟ್ಪಾಡಿ, ಸ್ವಾಗತ ಸಮಿತಿ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

“ಮಿಮಿಕ್ರಿಯೋತ್ಸವ’ವೂ ನಡೆಯಲಿ

ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ, ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಲಾದ ಲೀಲೋತ್ಸವದೊಂದಿಗೆ ಕ್ರೀಡೋತ್ಸವ, ಲಡ್ಡೋತ್ಸವ, ಭಾಗವತೋತ್ಸವಾದಿಗಳನ್ನು ಆಚರಿಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣ. ಶ್ರೀಕೃಷ್ಣ ಬಾಲ್ಯದಲ್ಲಿ ಪ್ರಾಣಿ, ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡುತ್ತಿರುವ ನೆಲೆಯಲ್ಲಿ ಮುಂದಿನ ವರ್ಷ “ಮಿಮಿಕ್ರಿಯೋತ್ಸವ’ವೂ ನಡೆಯಲಿ ಎಂದು ಆಶಿಯ ವ್ಯಕ್ತಪಡಿದರು.

ಸಾಂಪ್ರದಾಯಿಕ ಕ್ರೀಡೆಗಳು

ಶ್ರೀಕೃಷ್ಣ ಜ್ಯೋತಿಯನ್ನು ಬೆಳಗಿಸಿದ ಅನಂತರ ರಥಬೀದಿಯಲ್ಲಿ ಒಂದು ಸುತ್ತು ಮೆರವಣಿಗೆ ನಡೆಸಲಾಯಿತು. ಮುಖ್ಯವಾಗಿ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವುದು, ಸೊಪ್ಪಿನ ಆಟ, ಜುಬಿಲಿ, ಸೈಕಲ್‌ ಚಲಾಯಿಸುವುದು, ಬಂಡಿ ಓಟ, ಟೊಂಕ ಆಟ, ಗೋಣಿಚೀಲ ಓಟ, ವಿಶಲ್‌ ಚೇರ್‌, ತಟ್ಟೆ ಓಟ/ನಡಿಗೆ, ಬೆಲ್ಚೆಂಡು, ಹಗ್ಗ ಗಂಟು ಹಾಕುವಿಕೆ, ಸ್ಲೋ ಸೈಕಲ್‌ ರೇಸ್‌, ಕಾಳುಗಳ ವಿಂಗಡಿಸುವಿಕೆ, ದೇವರ ನಾಮದಿಂದ ಆಟ ಹೀಗೆ ಹತ್ತು ಹಲವು ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಗಳಲ್ಲಿ ಮಕ್ಕಳು, ವಯಸ್ಕರು, ಮಹಿಳೆಯರು, ಸಾರ್ವಜನಿಕರು ಭಾಗವಹಿಸಿದ್ದರು.

ಚಿತ್ರ: ಆಸ್ಟ್ರೋ ಮೋಹನ್

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.