ತಾಳೆ ಮರದಲ್ಲಿ ಎರಡು ಗಂಟೆಗಳ ಕಾಲ ಮೂರ್ಛೆ ತಪ್ಪಿದರೂ ಬದುಕುಳಿದ ಶೇಂದಿ ವ್ಯಾಪಾರಿ !
ಪವಾಡ ಸದೃಶವಾಗಿ ಪಾರಾದ ಶೇಂದಿ ವ್ಯಾಪಾರಿ
Team Udayavani, Jul 15, 2020, 3:41 PM IST
ಬೆಳ್ಮಣ್: ಸುಮಾರು 20 ವರ್ಷಗಳಿಂದ ಶೇಂದಿ ವ್ಯಾಪಾರ ಮಾಡುತಿದ್ದ ವ್ಯಕ್ತಿಯೊಬ್ಬರು ತಾಳೆ ಮರದಲ್ಲಿ ಮೂರ್ಛೆ ಕಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ಮರದ ದಂಡುಗಳ ನಡುವೆ ಸಿಲುಕಿ ಕೊನೆಗೂ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಮಂಗಳವಾರ ಕಡಂದಲೆಯಲ್ಲಿ ನಡೆದಿದೆ.
ಕಡಂದಲೆ ಕಲ್ಲೋಳಿಯ ಸಂತೋಷ್ ಎಂಬಾತ ಎಂದಿನಂತೆ ಬೆಳಿಗ್ಗೆ 6.30ರ ಹೊತ್ತಿಗೆ ತಾಳೆ ಮರವೇರಿದವರು ಯಾವುದೋ ಕಾರಣದಿಂದ ಮೂರ್ಛೆ ತಪ್ಪಿದ್ದಾರೆ ಪರಿಣಾಮ 8.30ರವರೆಗೆ ತಾಳೆ ಮರದ ದಂಡುಗಳ ನಡುವೆ ಸಿಲುಕಿದ್ದರು. ಮರದ ಪಕ್ಕದಲ್ಲೇ ದಾರಿಯಲ್ಲಿ ಹೋಗುವವರು ಇವರನ್ನು ಕಂಡರೂ ಆ ವ್ಯಕ್ತಿಯನ್ನು ರಕ್ಷಿಸುವ ಗೋಜಿಗೆ ಹೋಗಿರಲಿಲ್ಲ,
ಆ ಸಂದರ್ಭ ಸಂಕಲಕರಿಯ ಪೊರ್ಲು ಲಂಚ್ ಹೋಮ್ ಮಾಲಕರಾದ ಸುಧಾಕರ್ ಸಾಲ್ಯಾನ್ ಅವರು ಶೇಂದಿ ತರಲು ಎಂದಿನಂತೆ ತಮ್ಮ ಕಾರಿನಲ್ಲಿ ಬಂದಿದ್ದಾರೆ ಆಗ ಜನ ಸೇರಿದ್ದನ್ನು ಕಂಡ ಅವರು ವಿಷಯ ತಿಳಿದು ಕೂಡಲೇ ಆಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ಅಷ್ಟೋತ್ತಿಗಾಗಲೇ ಸುಧಾಕರ್ ಅವರು ತಾಳೆ ಮರವೇರುವ ಅದೇ ಊರಿನ ಯುವಕರಾದ ನಾರಾಯಣ, ದಿನೇಶ್ ಹಾಗೂ ಅಶೋಕ್ ಅವರನ್ನು ಕರೆಸಿ ಮರಕ್ಕೆ ಹತ್ತಿಸಿ ವ್ಯಕ್ತಿಯನ್ನು ಬದುಕಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟರಲ್ಲೇ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ವ್ಯಕ್ತಿಯನ್ನು ಮರದಿಂದ ಹಗ್ಗದ ಮೂಲಕ ಕೆಳಗಿಳಿಸಿದ್ದಾರೆ.
ಆಸ್ಪತ್ರೆಗೆ ಸೇರಿಸುವ ಮುನ್ನವೇ ಎಚ್ಚೆತ್ತ ಸಂತೋಷ
ಇನ್ನೇನು ತಾಳೆ ಮರದಿಂದ ಕೆಳೆಗಿಳಿಸಿದ ಸಂತೋಷ್ ನನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸುಧಾಕರ್ ಅವರ ಕಾರಿನಲ್ಲಿ ಕೂರಿಸಿ ಹೊರಡುವ ಹೊತ್ತಿಗೆ ಮೂರ್ಛೆ ತಪ್ಪಿದ ಸಂತೋಷ್ ಎಚ್ಚರಗೊಂಡಿದ್ದಾನೆ.
ಸಂತೋಷನ ಜೀವವುಳಿಸಿದ ಸುಧಾಕರ ಸಾಲ್ಯಾನ್, ಅಶೋಕ, ದಿನೇಶ, ನಾರಾಯಣ ಹಾಗೂ ಅಗ್ನಿಶಾಮಕದಳದವರ ಸಾಹಸ ಪ್ರಸಂಸೆಗೆ ಪಾತ್ರವಾಗಿದೆ.
ಕಳೆದೆರಡು ವರ್ಷಗಳ ಹಿಂದೆ ಶೇಂದಿ ವ್ಯಾಪಾರ ನಡೆಸುತ್ತಿದ್ದ ಸಂತೋಷನ ಅಣ್ಣ ಅಣ್ಣಿ ಪೂಜಾರಿ ಎಂಬಾತನೂ ತಾಳೆ ಮರದಲ್ಲೇ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.