Udupi; ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಶಾಖೆ: ಯಶ್‌ಪಾಲ್
ಮಹಾಲಕ್ಷ್ಮೀ ಬ್ಯಾಂಕಿನ 45ನೇ ವಾರ್ಷಿಕ ಮಹಾಸಭೆ
Team Udayavani, Sep 10, 2023, 12:22 AM IST
ಉಡುಪಿ: ಉಡುಪಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ 45ನೇ ವಾರ್ಷಿಕ ಮಹಾಸಭೆಯು ಶನಿವಾರ ಬ್ಯಾಂಕಿನ ಅಧ್ಯಕ್ಷರಾಗಿರುವ ಶಾಸಕ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆಯಲ್ಲಿ ಪುರಭವನದಲ್ಲಿ ಜರಗಿತು.
ಮಹಾಲಕ್ಷ್ಮೀ ಬ್ಯಾಂಕ್ ನಿರಂತರ 14 ವರ್ಷಗಳಿಂದ ಅತಿ ಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಯಗಳಲ್ಲಿ ಕಾರ್ಯಕ್ಷೇತ್ರ ಹೊಂದಿದ್ದು, ಶೀಘ್ರದಲ್ಲಿಯೇ ಬೆಂಗಳೂರಿನಲ್ಲೂ ಶಾಖೆಯನ್ನು ಆರಂಭಿಸುವ ಯೋಜನೆ ಇದೆ ಎಂದು ಯಶ್‌ಪಾಲ್ ಹೇಳಿದರು.
ಶೇ. 15 ಡಿವಿಡೆಂಡ್
ವರದಿ ವರ್ಷದಲ್ಲಿ ಆದಾಯ ತೆರಿಗೆಗೆ ಹಾಗೂ ನಿಯಮದಂತೆ ಇತರ ಸಲುವಳಿಗಳಿಗೆ ಅನುವು ಮಾಡುವ ಮೊದಲು 15.24 ಕೋ.ರೂ. ವ್ಯಾವಹಾರಿಕ ಲಾಭ ಗಳಿಸಿದ್ದು, ಅನುವು ಮಾಡಿದ ಅನಂತರ 5.92 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2022-23ನೇ ವರ್ಷಾಂತ್ಯಕ್ಕೆ ಠೇವಣಿಯು 473 ಕೋ.ರೂ., ಸಾಲ ಮತ್ತು ಮುಂಗಡವು 338 ಕೋ.ರೂ.ಗೆ ತಲುಪಿದ್ದು ಒಟ್ಟು ವಹಿವಾಟು 9,463 ಕೋ.ರೂ., ದುಡಿಯುವ ಬಂಡವಾಳವು ರೂ. 552 ಕೋ.ರೂ. ಗೆ ಏರಿಕೆಯಾಗಿದೆ. ಬ್ಯಾಂಕ್ “ಎ’ ದರ್ಜೆಯಲ್ಲಿ ವರ್ಗೀಕೃತವಾಗಿದ್ದು, ಸದಸ್ಯರಿಗೆ ಶೇ. 15 ಡಿವಿಡೆಂಡ್ ಘೋಷಿಸಿದೆ ಎಂದರು.
ಸಮ್ಮಾನ
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಅಂತಾರಾಷ್ಟ್ರೀಯ ದೇಹದಾಡ್ಯìಪಟು ನಿತ್ಯಾನಂದ ಕೋಟ್ಯಾನ್, ಶೈಕ್ಷಣಿಕ ಕ್ಷೇತ್ರದ ಸಾಧಕಿ ರಕ್ಷಿತಾ ಜೆ., ವಯೋನಿವೃತ್ತಿ ಹೊಂದಿದ ಬ್ಯಾಂಕಿನ ಸಿಬಂದಿಗಳಾದ ಪ್ರಭಾಕರ ಸಾಲ್ಯಾನ್, ನರೇಂದ್ರ ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮೀನುಗಾರ ಮುಖಂಡರಾದ ಸಾಧು ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ, ರಾಮಚಂದ್ರ ಕುಂದರ್, ಸತೀಶ್ ಕುಂದರ್, ಶಿವಪ್ಪ ಕಾಂಚನ್, ಗುಂಡು ಅಮೀನ್, ಮೋಹನ್ ಬೆಂಗ್ರೆ, ರತ್ನಾಕರ ಸಾಲ್ಯಾನ್, ಬೇಬಿ ಸಾಲ್ಯಾನ್, ಉಷಾರಾಣಿ, ರತ್ನಾಕರ ಸಾಲ್ಯಾನ್, ಬ್ಯಾಂಕಿನ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ನಿರ್ದೇಶಕರಾದ ಶಶಿಕಾಂತ ಬಿ. ಕೋಟ್ಯಾನ್, ಶೋಭೇಂದ್ರ ಸಸಿಹಿತ್ಲು, ಕೆ. ಸಂಜೀವ ಶ್ರೀಯಾನ್, ರಾಮ ನಾಯ್ಕ ಎಚ್., ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ಸುರೇಶ್ ಬಿ. ಕರ್ಕೇರ, ಶಿವರಾಮ ಕುಂದರ್, ವನಜಾ ಜೆ. ಪುತ್ರನ್, ವನಜಾ ಎಚ್. ಕಿದಿಯೂರು, ಸದಾನಂದ ಬಳ್ಕೂರು, ಮನೋಜ್ ಎಸ್. ಕರ್ಕೇರ, ವೃತ್ತಿಪರ ನಿರ್ದೇಶಕ ಮಂಜುನಾಥ ಎಸ್. ಕೆ., ಬ್ಯಾಂಕಿನ ವ್ಯವಸ್ಥಾಪನ ನಿರ್ದೇಶಕ ಜಗದೀಶ್ ಮೊಗವೀರ ಉಪಸ್ಥಿತರಿದ್ದರು.
ಲಕ್ಷ ಗ್ರಾಹಕರು, ಸಾವಿರ ಕೋಟಿ ರೂ. ಠೇವಣಿ
ಮಹಾಲಕ್ಷ್ಮೀ ಬ್ಯಾಂಕ್ ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ ಮುಂದಿನ 5 ವರ್ಷಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ 1 ಲಕ್ಷ ಗ್ರಾಹಕರೊನ್ನೊಳಗೊಂಡು 1000 ಕೋ. ರೂ. ಠೇವಣಿ ಸಂಗ್ರಹಣೆಯ ಗುರಿ ಹೊಂದಿದೆ ಎಂದು ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.