![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jul 26, 2024, 12:31 AM IST
ಉಡುಪಿ: ಬಾವಿ ಕೆಲಸಕ್ಕೆ ಬಳಸಿದ್ದ ಕ್ರೇನ್ ಬಾಡಿಗೆಯ ಹಣದ ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಜಿಲ್ಲೆಯ ಪಾಂಗಾಳ ಸುಧೀಂದ್ರ ಎಸ್. ಶೆಟ್ಟಿ ಅವರು ಕ್ರೇನ್‌ಗಳನ್ನು ಬಾವಿ ಕೆಲಸಗಳಿಗೆ ಬಾಡಿಗೆ ನೀಡುತ್ತಿದ್ದು, ಬಾಬುರಾಜ್ ಎನ್ನುವವರಿಗೆ ಕ್ರೇನ್‌ಗಳನ್ನು ಬಾಡಿಗೆಯ ಆಧಾರದಲ್ಲಿ ನೀಡಿದ್ದು, ಆ ಸಂಬಂಧಿತ ಬಾಕಿ ಇರುವ 1 ಲಕ್ಷ ರೂ. ಚೆಕ್ ನೀಡಿದ್ದರು.
ಈ ಚೆಕ್ ಬ್ಯಾಂಕ್‌ಗೆ ನೀಡಿದ್ದ ಸಂದರ್ಭದಲ್ಲಿ ಸಂಬಂಧಿಸಿದ ಖಾತೆಯಲ್ಲಿ ಸಾಕಷ್ಟು ಹಣಲ್ಲವೆಂದು ಚೆಕ್ ಅಮಾನ್ಯಗೊಂಡಿದ್ದು, ಆ ಬಗ್ಗೆ ಉಡುಪಿ ನಾಲ್ಕನೇ ಹೆಚ್ಚುವರಿ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಆರೋಪಿ ಬಾಬುರಾಜ್‌ಗೆ ಕೋರ್ಟ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ದೂರುದಾರರು ಪೂರಕ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಬಾಬುರಾಜ್ ಅವರನ್ನು ಉಡುಪಿಯ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಶ್ವೇತಾಕ್ಷಿ ಅವರು ದೋಷಮುಕ್ತಗೊಳಿಸಿ ಬಿಡುಗಡೆಗೆ ಆದೇಶಿಸಿದ್ದಾರೆ. ಆರೋಪಿ ಪರ ಚೇರ್ಕಾಡಿ ಅಖೀಲ್ ಬಿ. ಹೆಗ್ಡೆ ವಾದ ಮಂಡಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.