ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.


Team Udayavani, Apr 25, 2024, 1:33 AM IST

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತು ಕಾಂಗ್ರೆಸ್‌ ಅಭ್ಯರ್ಥಿ ಹೊಂದಿರುವ ದೂರದೃಷ್ಟಿ, ಸಮಸ್ಯೆಗಳ ಪರಿಹಾರಕ್ಕೆ ಅವರಲ್ಲಿರುವ ಯೋಚನೆ, ಯೋಜನೆಗಳನ್ನು “ಉದಯವಾಣಿ’ಯೊಂದಿಗೆ ತೆರೆದಿಟ್ಟಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗೆ ಬಗ್ಗೆ ನಿಮ್ಮ ಕನಸು ಹೇಗಿದೆ?
ಈ ಕ್ಷೇತ್ರ ವ್ಯಾಪ್ತಿಯಲ್ಲಿ ಕರಾವಳಿ, ಮಲೆನಾಡು, ಬಯಲುಸೀಮೆ ಹೀಗೆ ಮೂರು ವಿಭಾಗ ಬರುತ್ತದೆ. ಕರಾವಳಿಯಲ್ಲಿ ಮೀನುಗಾರರ, ರೈತರ ಸಮಸ್ಯೆ ಆದ್ಯತೆ ನೀಡುವ ಜತೆಗೆ ಬಯಲುಸೀಮೆ ಮತ್ತು ಮಲೆನಾಡಿನಲ್ಲಿ ಕಾಪಿ, ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವುದು ಆಗಬೇಕು. ಕೃಷಿ ಭೂಮಿಗೆ ಉಪ್ಪುನೀರು ಹರಿಯುವುದನ್ನು ತಡೆ ಯಲು ಚೆಕ್‌ಡ್ಯಾಮ್‌ಗಳು ಆಗಬೇಕು. ಅಡಿಕೆ ಕಳ್ಳ ಸಾಗಾಟ ಮತ್ತು ಕಾಳಸಂತೆಯಲ್ಲಿ ಮಾರಾಟ ಆಗುವುದು ಸಂಪೂರ್ಣವಾಗಿ ನಿಲ್ಲಬೇಕು. ಮೀನುಗಾರಿಕೆ, ಕೃಷಿ, ತೋಟಗಾರಿಕೆ, ಹೈನುಗಾರಿಕೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

ಕ್ಷೇತ್ರದಲ್ಲಿ ಆದ್ಯತೆ ಮೇರೆಗೆ ಆಗಬೇಕಿರುವುದು ಏನೇನು?
ಕರಾವಳಿಯಲ್ಲಿ ಮೀನು ಸಹಿತ ಸಮುದ್ರದ ಉತ್ಪನ್ನಗಳನ್ನು ರಕ್ಷಿಸಿಡಲು ಹಾಗೂ ಮಲೆನಾಡು ಭಾಗದಲ್ಲಿ ತರಕಾರಿ ಗಳನ್ನು ಸಂಕ್ಷಿಸಿಡಲು ಪ್ರತ್ಯೇಕವಾಗಿ ಕೋಲ್ಡ್‌ ಚೈನ್‌ ಘಟಕ ರೂಪಿಸಬೇಕು. ನಾನು ಸಂಸದನಾಗಿದ್ದಾಗ ಕೆಲವು ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿಸಿದ್ದೆ. ಪ್ರಮುಖವಾಗಿ ಮಲ್ಪೆ-ತೀರ್ಥಹಳ್ಳಿ, ಕಡೂರು-ಚಿಕ್ಕಮಗಳೂರು-ಮೂಡಿಗೆರೆ-ಬಿಸಿರೋಡು, ತುಮಕೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ವೇಗ ಸಿಗುವುದು ಮಾತ್ರವಲ್ಲ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಚಿಕ್ಕಮಗಳೂರಿನಲ್ಲಿ ರೈಲ್ವೇ ಸಂಪರ್ಕ ಅಗತ್ಯವಾಗಿ ವಿಸ್ತರಣೆಯಾಗಬೇಕು ಮತ್ತು ಹೆಚ್ಚು ರೈಲು ಬೆಂಗಳೂರು ಭಾಗದಿಂದ ಬರಬೇಕು. ಚಿಕ್ಕಮಗಳೂರಿಗೆ ಬಂದ ರೈಲು ಹಾಸನ, ಸಕಲೇಶಪುರದವರೆಗೂ ವಿಸ್ತರಣೆಯಾಗಬೇಕು. ಇದರಿಂದ ಕಾಪಿ ಸಹಿತ ವಿವಿಧ ಉತ್ಪನ್ನವನ್ನು ಮಂಗಳೂರು, ಚೆನ್ನೈ ಮೂಲಕ ವಿದೇಶಕ್ಕೆ ರಫ್ತು ಮಾಡಲು ಸಹಕಾರಿ ಯಾಗಲಿದೆ.

ಭೌಗೋಳಿಕವಾಗಿ ಭಿನ್ನವಾಗಿರುವ ಕ್ಷೇತ್ರವಿದು ಹೇಗೆ ನಿಭಾಯಿಸುವಿರಿ?
ಸಂಸದನಾಗಿ ಕೆಲಸ ಮಾಡಿದ್ದರಿಂದ ಈ ಕ್ಷೇತ್ರದ ವ್ಯಾಪ್ತಿಯ ಸಂಪೂರ್ಣ ಅರಿವಿದೆ. ವಿವಿಧ ಸಮಸ್ಯೆ ನಿವಾರಣೆ ಒಂದು ಭಾಗವಾದರೆ, ಅಭಿವೃದ್ಧಿ ಇನ್ನೊಂದು ಭಾಗ. ಆರೋಗ್ಯ, ಶಿಕ್ಷಣ ಹಾಗೂ ಪ್ರವಾಸೋದ್ಯಮ ವಲಯದಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಜನರೊಂದಿಗೆ ಇದ್ದು ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ.

ಸಂಸದರಾದರೆ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸುವಿರಿ?
2012ರಲ್ಲಿ ಸಂಸದನಾಗಿ ಆಯ್ಕೆ ಯಾದಾಗ 20 ತಿಂಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು. ಆಗ ಪ್ರತಿ ಪಂಚಾಯತಿ ಭೇಟಿ ನೀಡಿದ್ದೇನೆ. ಅಂದು ಸಮಸ್ಯೆಗಳನ್ನು ಅರಿತು ಪರಿಹಾರ ನೀಡಿದ್ದರಿಂದಲೇ ಇಂದಿಗೂ ಜನರು ಅದನ್ನು ಸ್ಮರಿಸುತ್ತಾರೆ. ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು, ಭೂ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳುವುದು, ಅಳಿವೆ ಮತ್ತು ಬಂದರಿನ ಡ್ರಜ್ಜಿಂಗ್‌ ಹಾಗೂ ಬ್ರೇಕ್‌ ವಾಟರ್‌ ಯೋಜನೆಗಳಿಗೆ ಒತ್ತು ನೀಡಲಾಗುವುದು, ಕ್ಷೇತ್ರದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ, ಮಲೆನಾಡು ಭಾಗದಲ್ಲಿ ಕೃಷಿಗೆ ಪೂಕರವಾಗಿ ವಿಶೇಷ ಕಾರೀಡಾರ್‌ ಸ್ಥಾಪನೆ ಮಾಡುವುದು ಹೀಗೆ ಎಲ್ಲ ಕ್ಷೇತ್ರದ ಅಭಿವೃದ್ಧಿಯ ಕಲ್ಪನೆ ಸ್ಪಷ್ಟವಾಗಿದೆ.

ಚುನಾವಣೆಯಲ್ಲಿ ಯಾವ ವಿಷಯ ಮುಂದಿಟ್ಟುಕೊಂಡು ಮತ ಕೇಳಿದಿರಿ?
ಈ ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮುಂದೆ ಮಾಡಲಿರುವ ಅಭಿವೃದ್ಧಿ ಕಾರ್ಯದ ಸ್ಪಷ್ಟತೆಯನ್ನು ಜನತೆಗೆ ನೀಡಿ ಆ ಮೂಲಕ ಓಟು ಕೇಳಿದ್ದೇನೆ.

ಟಾಪ್ ನ್ಯೂಸ್

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

Cap-Brijesh-Chowta

Putturu: ವಿದೇಶಗಳಿಂದ ಅಡಿಕೆ ಆಮದು ಪರಿಣಾಮ ಅಧ್ಯಯನ: ಸಂಸದ ಕ್ಯಾ.ಬ್ರಿಜೇಶ್‌ ಚೌಟ

kunita-bhajane

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

1-weqewewqe

Yakshagana;ಇನ್ನೂ ನೂರಾರು ಸುಶ್ರಾವ್ಯ ರಾಗಗಳ ಅಳವಡಿಕೆ ಸಾಧ್ಯ: ವಿದ್ವಾನ್‌ ಗಣಪತಿ ಭಟ್‌

Comet

Comet of the Century: ಅಕ್ಟೋಬರ್‌ನಲ್ಲಿ ಧೂಮಕೇತುಗಳ ಮೆರವಣಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kunita-bhajane

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ

Udupi-DC-Meeting

Udupi: ಅಕ್ರಮ ಮೀನುಗಾರಿಕೆ ಬೋಟುಗಳಿಗೆ ಗರಿಷ್ಠ ದಂಡ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

Kota-poojary

Social Media Fake Account: ಸಂಸದ ಕೋಟ ಶ್ರೀನಿವಾಸ ಪೂಜಾರಿ ಖಾತೆ ನಕಲಿ: ದೂರು

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

11

Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು 

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

Cap-Brijesh-Chowta

Putturu: ವಿದೇಶಗಳಿಂದ ಅಡಿಕೆ ಆಮದು ಪರಿಣಾಮ ಅಧ್ಯಯನ: ಸಂಸದ ಕ್ಯಾ.ಬ್ರಿಜೇಶ್‌ ಚೌಟ

kunita-bhajane

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.