ಉಡುಪಿ ನಗರ ಬಿಜೆಪಿ: ಮಲ್ಪೆಯಲ್ಲಿ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನ
ಬೀಚ್ ಸ್ವಚ್ಛತಾ ಕಾರ್ಯಕ್ರಮ ಮಲ್ಪೆ ಸೀವಾಕ್‌ನಲ್ಲಿ ನಡೆಯಿತು.
Team Udayavani, Oct 4, 2021, 10:31 AM IST
ಉಡುಪಿ: ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನದ ಪ್ರಯುಕ್ತ “ಸ್ವಚ್ಛ ಭಾರತ-ಸ್ವಚ್ಛ ಉಡುಪಿ’ ಧ್ಯೇಯದಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಮಲ್ಪೆ ಸೀವಾಕ್‌ನಲ್ಲಿ ಶನಿವಾರ ನಡೆಯಿತು.
ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಅಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ “ಸ್ವಚ್ಛ ಭಾರತ-ಸ್ವಚ್ಛ ಉಡುಪಿ’ ಧ್ಯೇಯದಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಮಲ್ಪೆ ಸೀವಾಕ್‌ನಲ್ಲಿ ನಡೆಯಿತು. ಅಭಿಯಾನದ ಪ್ರಯುಕ್ತ ಮಲ್ಪೆ ಬೀಚ್‌ನಲ್ಲಿ ತೆರೆಯಲಾದ ಮೋದಿ ಚಾಯ್ ಸ್ಟಾಲ್‌ನಲ್ಲಿ ಸುಮಾರು 1,500 ಮಂದಿ ಸಾರ್ವಜನಿಕರಿಗೆ ಚಹಾ ವಿತರಿಸಲಾಯಿತು.
ಅತಿಥಿಗಳು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದ ಬೃಹತ್ ಜಾಥಾದ ಮೂಲಕ ಬೀಚ್ ಭಾಗಕ್ಕೆ ತೆರಳಿ ಸಂಜೆ 6.30ರ ತನಕ ಸ್ವಚ್ಛತೆ ಮಾಡಲಾಯಿತು. ನೆರೆದ ಸುಮಾರು 1,500 ಮಂದಿ ಕಾರ್ಯಕರ್ತರಿಗೆ ಟಿ-ಶರ್ಟ್ ಮತ್ತು ಟೋಪಿಯನ್ನು ವಿತರಿಸಲಾಯಿತು. ಬೀಚ್ ಭಾಗದಲ್ಲಿ ಸಂಗ್ರಹಿಸಲ್ಪಟ್ಟ ಸುಮಾರು 2 ಲಾರಿಯಷ್ಟು ಪ್ಲಾಸ್ಟಿಕ್, ಬಾಟಲಿ, ಕಸಕಡ್ಡಿ ಸೇರಿದಂತೆ ಇತರ ತ್ಯಾಜ್ಯಗಳನ್ನು ಅಲೆವೂರಿನ ಕರ್ವಾಲಿನಲ್ಲಿರುವ ಡಂಪಿಂಗ್ ಯಾರ್ಡ್‌ಗೆ ಸಾಗಿಸಲಾಯಿತು.
ಶಾಸಕ ಕೆ. ರಘುಪತಿ ಭಟ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಿಭಾಗ ಪ್ರಭಾರಿ ಕಿದಿಯೂರು ಉದಯ ಕುಮಾರ್ ಶೆಟ್ಟಿ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಸಂಚಾಲಕ ವೆಂಕಟರಮಣ ಕಿದಿಯೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಸದಸ್ಯೆ ಎಡ್ಲಿನ್ ಕರ್ಕಡ,ನಾಮನಿರ್ದೇಶಿತ ಸದಸ್ಯ ವಿಜಯ ಕುಂದರ್, ಪಕ್ಷದ ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ನಿರೂಪಿಸಿದರು. ನಗರಸಭೆ ಸದಸ್ಯ ಮಂಜುನಾಥ ಮಣಿಪಾಲ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.