ಉಡುಪಿ ಜಿಲ್ಲೆ: ಎಲ್ಲ ಸಂಪರ್ಕಿತರ ವರದಿ ನೆಗೆಟಿವ್
Team Udayavani, May 14, 2020, 11:45 AM IST
ಉಡುಪಿ: ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕಕ್ಕೆ ಬಂದ 17 ಜನರ ಮತ್ತು ಕಾರ್ಕಳದಲ್ಲಿ ಸಿಮೆಂಟ್ ಅನ್‌ಲೋಡ್ ಮಾಡಿ ಹೋದ ಚಾಲಕನ ಸಂಪರ್ಕಕ್ಕೆ ಬಂದ ಐವರ ವರದಿಗಳು ನೆಗೆಟಿವ್ ಆಗಿರುವುದು ಉಡುಪಿ ಜಿಲ್ಲೆಯ ಜನರಿಗೆ ನೆಮ್ಮದಿ ತಂದಿದೆ.
ಮಂಗಳೂರು ಆಸ್ಪತ್ರೆಯಿಂದ ಕೊರೊನಾ ಹಬ್ಬಿದ ಕಾರಣ ಅವರ ಸಂಪರ್ಕಕ್ಕೆ ಬಂದ ಉಡುಪಿ ಜಿಲ್ಲೆ ಯವರನ್ನು ಕ್ವಾರಂಟೈನ್ ನಡೆಸಿ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿ ಸಲಾಗಿತ್ತು. ಚೆನ್ನೈಯಿಂದ ಬಂದು ಸಿಮೆಂಟ್ ಇಳಿಸಿ ಹೋದ ಚಾಲಕನಿಗೆ ಚೆನ್ನೈಗೆ ಮರಳಿದ ಬಳಿಕ ಕೋವಿಡ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಕಾರ್ಕಳದಲ್ಲಿ ಆತನ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ನಲ್ಲಿರಿಸಿ ಮಾದರಿಗಳನ್ನು ಕಳುಹಿಸಲಾಗಿತ್ತು. ಇದೀಗ ಅವರೆಲ್ಲರ ವರದಿ ನೆಗೆಟಿವ್ ಆಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ದುಬಾೖಯಿಂದ 59 ಜನರ ಆಗಮನ
ಮಂಗಳವಾರ ರಾತ್ರಿ ದುಬಾೖಯಿಂದ ಮಂಗಳೂರಿಗೆ ಬಂದ 59 ಜನರನ್ನು ಬುಧವಾರ ಮುಂಜಾನೆ ಉಡುಪಿ ಜಿಲ್ಲೆಗೆ ಕರೆತರಲಾಯಿತು. ಅವರಲ್ಲಿ ಐವರನ್ನು ಹಾಸ್ಟೆಲ್‌ನಲ್ಲಿಯೂ ಉಳಿದವರನ್ನು ಹೊಟೇಲ್ ಲಾಡ್ಜ್ ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಬಂದವರಲ್ಲಿ ಎಂಟು ಮಂದಿ ಗರ್ಭಿಣಿಯರಿದ್ದಾರೆ. “ವಿಮಾನದಲ್ಲಿ ಆಹಾರ ಪೂರೈಕೆ ಇದ್ದಿರಲಿಲ್ಲ. ಮಂಗಳೂರಿನಲ್ಲಿ ಮತ್ತು ಉಡುಪಿಗೆ ಕರೆತರುವಾಗಲೂ ಸೂಕ್ತ ಆಹಾರ, ಪಾನೀಯದ ವ್ಯವಸ್ಥೆ ಇದ್ದಿರಲಿಲ್ಲ’ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಹೊರರಾಜ್ಯಗಳಿಂದ ಆಗಮನ
ಬುಧವಾರ ಹೊರರಾಜ್ಯಗಳಿಂದ ಜಿಲ್ಲೆಗೆ ಒಟ್ಟು 313 ಮಂದಿ ಆಗಮಿಸಿದರು. ಮೇ 4ರಿಂದ ಇದುವರೆಗೆ 2,491 ಮಂದಿ ಆಗಮಿ ಸಿದ್ದು ಅವರೆಲ್ಲರಿಗೆ ಕ್ವಾರಂಟೈನ್ ವಿಧಿಸಲಾಗಿದೆ.
45 ಜನರ ಮಾದರಿ ಸಂಗ್ರಹ
ಬುಧವಾರ 45 ಮಾದರಿಗಳನ್ನು ಸಂಗ್ರಹಿಸಿದ್ದು ಇವರಲ್ಲಿ ಇಬ್ಬರು ಉಸಿರಾಟದ ಸಮಸ್ಯೆಯವರು, ಇಬ್ಬರು ಕೋವಿಡ್ ಸಂಪರ್ಕಿತರು, 24 ಮಂದಿ ಫ್ಲೂ ಬಾಧಿತರು, 17 ಮಂದಿ ಹಾಟ್‌ಸ್ಪಾಟ್ ಸಂಪರ್ಕ ದವರಾಗಿದ್ದಾರೆ. 70 ಜನರ ಮಾದರಿ ಗಳು ಬಂದಿದ್ದು 62 ಜನರ ವರದಿಗಳು ಬರಬೇಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.