ಕೊಲ್ಲೂರಿನ ಕ್ವಾರಂಟೈನ್ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ; ಅಹವಾಲು ಸ್ವೀಕಾರ
Team Udayavani, May 21, 2020, 5:45 AM IST
ಕೊಲ್ಲೂರು: ಮಹಾರಾಷ್ಟ್ರದಿಂದ ಆಗಮಿಸಿ ಕೊಲ್ಲೂರಿನಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿರುವ ಮಂದಿಯನ್ನು ಮೇ 20ರಂದು ಡಾರ್ಮೆಟರಿಯಲ್ಲಿ ಭೇಟಿ ಮಾಡಿದ ಉಡುಪಿ ಜಿಲ್ಲಾಧಿಕಾರಿಯವರು ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಾಮರ್ಶೆ ನಡೆಸಿದರು.
ಡಾರ್ಮೆಟರಿಯಲ್ಲಿನ ಕ್ವಾರಂಟೈನ್ ನಲ್ಲಿರುವ ಅನೇಕ ಮಂದಿ ಹಲವಾರು ಲೋಪದೋಷಗಳ ಬಗ್ಗೆ ಜಿಲ್ಲಾಧಿಕಾರಿ ಜಗದೀಶ್ ಅವರ ಗಮನ ಸೆಳೆದರಲ್ಲದೇ ಕ್ಲಪ್ತ ಕಾಲದಲ್ಲಿ ಸಿಬಂದಿಯಿಂದ ಸಹಕಾರ ದೊರೆಯದ ಬಗ್ಗೆ ದೂರಿದರು. ಅಲ್ಲಿನ ವಿದ್ಯಾರ್ಥಿ ಹಾಸ್ಟೆಲ್ ಕ್ವಾರಂಟೆ„ನ್‌ನಲ್ಲಿರುವ ಮಂದಿ ಕೋವಿಡ್-19 ಪಾಸಿಟಿವ್ ಮಹಿಳೆಯನ್ನು ಉಡುಪಿಗೆ ಸ್ಥಳಾಂತರಗೊಳಿಸಿದ ಬಳಿಕ ಆ ಕೊಠಡಿಯನ್ನು ಶುಚಿಗೊಳಿಸದ ಬಗ್ಗೆ ದೂರಿದರಲ್ಲದೆ, ಅವರ ಸಂಬಂಧಿಕರನ್ನು ಪರಿಶೀಲನೆಗೆ ಒಳಪಡಿಸಿ ಉಡುಪಿಗೆ ಕರೆದುಕೊಂಡು ಹೋಗದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಮಾರು 1 ತಾಸು ಕಾಲ ನಡೆದ ಚರ್ಚೆಯಲ್ಲಿ ಜಿಲ್ಲಾ ಧಿಕಾರಿಗಳೊಡನೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಉಪವಿಭಾಗಾಧಿಕಾರಿ ರಾಜು, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ವಿಷ್ಣುವರ್ಧನ್, ಕೊಲ್ಲೂರು ದೇಗುಲದ ಉಪಕಾರ್ಯನಿರ್ವಹಣಾ ಧಿಕಾರಿ ಕೃಷ್ಣಮೂರ್ತಿ, ತಾಲೂಕು ವೈದ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಬೈಂದೂರು ತಹಶೀಲ್ಡಾರ್ ಬಿ.ಪಿ. ಪೂಜಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ತಾ.ಪಂ. ಮಾಜಿ ಸದಸ್ಯ ರಮೇಶ ಗಾಣಿಗ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಪ್ರಕಾಶ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.