ಉಡುಪಿ ಜಿಲ್ಲೆ: ಉತ್ತಮ ಮಳೆ; ವಿವಿಧೆಡೆ ಹಾನಿ
ಕೊಲ್ಲೂರು: ಉಕ್ಕಿ ಹರಿದ ಸೌಪರ್ಣಿಕಾ ನದಿ
Team Udayavani, Jul 9, 2020, 6:36 AM IST
ಉಡುಪಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ತಡರಾತ್ರಿ ಸುರಿದ ಗಾಳಿ-ಮಳೆಗೆ ಹಲವು ಕಡೆಗಳಲ್ಲಿ ಮನೆಗಳ ಮೇಲೆ ಮರಗಳು ಉರುಳಿಬಿದ್ದು ಹಾನಿಯಾಗಿದೆ.
ಬೈಂದೂರು ತಾ| ಶಿರೂರು ಗ್ರಾಮದ ದುರ್ಗಿ ನಿವಾಸಿ ರಾಮ ಪೂಜಾರಿ ಅವರ ಮನೆಗೆ ಮರ ಬಿದ್ದು 30 ಸಾವಿರ ರೂ.ಗಳಷ್ಟು ನಷ್ಟ ಉಂಟಾಗಿದೆ. ಕೊಲ್ಲೂರು ಗ್ರಾಮದ ನಿವಾಸಿ ಸವಿತಾ ಅವರ ಮನೆಗೆ ಮರ ಬಿದ್ದು ಸುಮಾರು.1.5 ಲಕ್ಷ ರೂ. ನಷ್ಟ ಆಗಿದೆ. ಕೊಲ್ಲೂರು ಗ್ರಾಮದ ನಿವಾಸಿ ಯಶೋದಾ ಅವರ ಮನೆಗೂ ಹಾನಿಯಾಗಿದ್ದು, 25 ಸಾವಿರ ರೂ. ನಷ್ಟವಾಗಿದೆ.
ಕುಂದಾಪುರ ತಾ|ನ ಗುಲ್ವಾಡಿ ಗ್ರಾಮದ ರಾಬಿ ಅವರ ಮನೆಗೆ ಮರ ಬಿದ್ದು 40 ಸಾವಿರ ರೂ.ಗಳಷ್ಟು ನಷ್ಟ ಉಂಟಾಗಿದೆ. ಹೆಬ್ರಿ ತಾ|ನ ಮಡಾಮಕ್ಕಿಯ ವನಜಾ ಶೆಡ್ತಿ ಅವರ ನಿವಾಸದ ಮೇಲೆ ಮರಬಿದ್ದು 25 ಸಾವಿರ ರೂ. ನಷ್ಟ ಸಂಭವಿಸಿದೆ.
ಕಾರ್ಕಳ, ಕುಂದಾಪುರ, ಹೆಬ್ರಿ, ಕಾಪು, ಬ್ರಹ್ಮಾವರ ತಾಲೂಕುಗಳ ವಿವಿಧ ಭಾಗ ಗಳಲ್ಲಿ ಕೂಡ ಉತ್ತಮ ಮಳೆಯಾಗಿತ್ತು. ಬುಧವಾರ 8.30ರ ವರೆಗಿನ ಅದರ ಹಿಂದಿನ24 ತಾಸುಗಳಲ್ಲಿ ಜಿಲ್ಲೆಯ ಸರಾಸರಿ ಮಳೆ ಪ್ರಮಾಣ 116 ಮಿ. ಮೀ. ಗಳಷ್ಟಿತ್ತು. ಬುಧವಾರ ಹಗಲು ಹೊತ್ತು ಉಡುಪಿ ನಗರ, ಮಣಿಪಾಲ, ಉದ್ಯಾವರ.ಮಲ್ಪೆ, ಪರ್ಕಳ, ದೊಡ್ಡಣಗುಡ್ಡೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ನೀಡಿತ್ತು.
ಕುಂದಾಪುರ ತಾ|: ಭಾರೀ ಮಳೆ
ಕುಂದಾಪುರ, ಬೈಂದೂರು ಹಾಗೂ ಕುಂದಾಪುರ ತಾಲೂಕಿನೆಲ್ಲೆಡೆ ಬುಧವಾರ ಭಾರೀ ಮಳೆಯಾಗಿದ್ದು, ಹಲವೆಡೆಗಳಲ್ಲಿ ಗದ್ದೆಗಳು ಜಲಾವೃತಗೊಂಡಿದ್ದು, ಕೆಲವು ಕಡೆ ಕೃತಕ ನೆರೆ ಸೃಷ್ಟಿಯಾಗಿದೆ.
ಕುಂದಾಪುರ, ತಲ್ಲೂರು, ಹೆಮ್ಮಾಡಿ, ಗೋಳಿಯಂಗಡಿ, ಬೆಳ್ವೆ, ಗಂಗೊಳ್ಳಿ, ತ್ರಾಸಿ, ಮರವಂತೆ, ನಾವುಂದ ಸೇರಿದಂತೆ ಎಲ್ಲ ಕಡೆಗಳಲ್ಲಿ ಮಂಗಳವಾರ ರಾತ್ರಿಯಿಂದ ಬುಧ ವಾರವೂ ಉತ್ತಮ ಮಳೆಯಾಗಿದೆ.
ಗದ್ದೆಗಳು ಜಲಾವೃತ
ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ನಾವುಂದ, ಬಡಾಕೆರೆ, ಪಡುಕೋಣೆ, ಅರೆಹೊಳೆ, ಸೇನಾಪುರ, ಕೆಲಬದಿಯ ಹಲವು ಮನೆಗಳ ಆಸುಪಾಸಿನಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ನಾವುಂದ, ಚಿಕ್ಕಳ್ಳಿ, ಕಡಿಕೆ, ನಾಡ ಮತ್ತಿತರ ಕಡೆಗಳ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಈ ಪರಿಸರದಲ್ಲಿ 40-50 ಮಂದಿ ಕೃಷಿಕರ ಎಕರೆಗಟ್ಟಲೆ ಗದ್ದೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಹೆಚ್ಚಿನ ಗದ್ದೆಗಳಲ್ಲಿ ಈಗಷ್ಟೇ ನಾಟಿ ಕಾರ್ಯ ಮುಗಿದಿತ್ತು.
ಕಡಲ್ಕೊರೆತ
ಕುಂದಾಪುರ, ಬೈಂದೂರು ಭಾಗದ ವಾರಾಹಿ, ಸೌಪರ್ಣಿಕಾ, ಕುಬ್ಜಾ, ಚಕ್ರ, ಸುಮನಾವತಿ ನದಿಗಳು ತುಂಬಿ ಹರಿಯುತ್ತಿದೆ. ಕೋಡಿ, ಗಂಗೊಳ್ಳಿ, ಮರವಂತೆ, ತ್ರಾಸಿ ಭಾಗದ ಕಡಲ ತೀರದಲ್ಲಿ ಕಡಲಬ್ಬರ ಜೋರಾಗಿದ್ದು, ಕಂಚುಗೋಡು, ಮರವಂತೆ ಮತ್ತಿತರ ಕಡೆಗಳಲ್ಲಿ ಕಡಲ್ಕೊರೆತ ಉಂಟಾಗಿದ್ದು, ತೀರದ ಹತ್ತಾರು ಮನೆಗಳ ನಿವಾಸಿಗಳು ಆತಂಕದಲ್ಲಿದ್ದಾರೆ.
ಉಕ್ಕಿ ಹರಿಯುತ್ತಿರುವ
ಸೌಪರ್ಣಿಕ ನದಿ, ನೆರೆ ಭೀತಿ
ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳಾದ ಕೊಲ್ಲೂರು, ಜಡ್ಕಲ್, ಮುದೂರು ಪರಿಸರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಆ ಭಾಗದ ನದಿಗಳು ಉಕ್ಕಿ ಹರಿಯಲು ಆರಂಭಿಸಿದೆ.
ಸೌಪರ್ಣಿಕ ಹಾಗೂ ಬೆಳ್ಕಲ್ ನದಿಗಳು ತುಂಬಿ ಹರಿಯುತ್ತಿದ್ದು ನೀರಿನ ಮಟ್ಟ ದಿನೆ ದಿನೆ ಏರುತ್ತಿದೆ. ಸೌಪರ್ಣಿಕ ನದಿ ನೀರು ಅಪಾಯ ಮಟ್ಟಕ್ಕೆ ಏರಿದ್ದು, ಕಾಶಿ ನದಿಯ ಪರಿಸರದಲ್ಲಿ ಜಲಾವೃತಗೊಳ್ಳುವ ಭೀತಿ ಇದೆ.ಇದೇ ರೀತಿಯಲ್ಲಿ ಮಳೆ ಮುಂದು ವರಿದಲ್ಲಿ ಇಲ್ಲಿನ ಸಂಪರ್ಕ ರಸ್ತೆ ಕಡಿತಗೊಳ್ಳುವ ಸಾಧ್ಯತೆ ಇದೆ.
ಬಸ್ರೂರು
ಬಳ್ಕೂರು, ಬಸ್ರೂರು, ಕಂದಾವರ, ಜಪ್ತಿ, ಕೋಣಿ, ಆನಗಳ್ಳಿ, ಹಟ್ಟಿಕುದ್ರು, ಕಂಡೂÉರು, ಗುಲ್ವಾಡಿ ಪ್ರದೇಶಗಳಲ್ಲಿ ಬುಧವಾರವೂ ಮಳೆ ನಿರಂತರವಾಗಿ ಮುಂದುವರಿದಿದೆ. ಚರಂಡಿಯಲ್ಲಿ ಹೂಳು ತುಂಬಿ ಹರಿಯದ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ.
ಮಳೆ ವಿವರ
ಉಡುಪಿ/ ಕುಂದಾಪುರ:ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಕೆಲವೆಡೆ ಉತ್ತಮ ಮಳೆಯಾಗಿದ್ದು ಬುಧವಾರ ಹಗಲು ಕೂಡಾ ಮಳೆಯಾಗಿದೆ.
ಬುಧವಾರ ಬೆಳಗ್ಗೆವರೆಗೆ ವಿವಿಧೆಡೆ ಬಿದ್ದ ಮಳೆ ವಿವರ ಮಿ.ಮೀ.ಗಳಲ್ಲಿ ಹೀಗಿದೆ; ಕಾಪು 69, ಆಲೂರು 174, ನಾಡ 100, ನಾವುಂದ 65, ಕಾಳಾವರ 133, ಶಂಕರನಾರಾಯಣ 116, ಬೊಮ್ಮರಬೆಟ್ಟು 76, ಕುಕ್ಕುಂದೂರು 125, ಮರ್ಣೆ 106 , ಯರ್ಲಪಾಡಿ 64, ಯಡ್ತಾಡಿ 151, ಇನ್ನಾ 124, ಕಾಂತಾವರ 70, ಮಿಯಾರು 140, ಮುಂಡ್ಕೂರು 99, ನಲ್ಲೂರು 118, ಪಳ್ಳಿ 74, ರೆಂಜಾಳ 135, ಸಾಣೂರು 97, ಬಿಜೂರು 74, ಹೇರೂರು 78, ಕಾಲೊ¤àಡು 112, ಕಂಬದಕೋಣೆ 84, ಕಿರಿಮಂಜೇಶ್ವರ 118, ಮರವಂತೆ 68, ಪಡುವರಿ 76, ಯಡ್ತರೆ 88, ಆನಗಳ್ಳಿ 119, ಬಳ್ಕೂರು 180, ಬಸೂÅರು 107, ಬೇಳೂರು 133, ಹಂಗಳೂರು 117, ಹಟ್ಟಿಯಂಗಡಿ 107, ಹೆಂಗವಳ್ಳಿ 188, ಕೋಣಿ 146, ಕುಂಭಾಶಿ 104, ಮೊಳಹಳ್ಳಿ 150, ಚಿತ್ತೂರು 141, ಗಂಗೊಳ್ಳಿ 65, ಗುಜ್ಜಾಡಿ 54 , ಹಕ್ಲಾಡಿ 91, ಹೆಮ್ಮಾಡಿ 67, ಆವರ್ಸೆ 176, ಬಾಕೂìರು 154, ಚಾಂತಾರು 135, ಹಂದಾಡಿ 144, ಹಾವಂಜೆ 111, ಕೆಮ್ಮಣ್ಣು 82,ಕುಕ್ಕೆಹಳ್ಳಿ 89, ಕುಂಜಾಲು130, ಬಾಡ 82, ಹೆಜಮಾಡಿ 86, ಕಟಪಾಡಿ 67, ಕೋಟೆ 69, ಕುರ್ಕಾಲು 93, ಕುತ್ಯಾರು 78, ಮಜೂರು 73, ಮಲ್ಲಾರು 77, ಪಡುಬಿದ್ರಿ 90, ಐರೋಡಿ 141, ಕಾಡೂರು 160, ಕೋಡಿ 167, ಅಂಬಲಪಾಡಿ 68, ಬಡಾನಿಡಿಯೂರು 99, ಕಡೆಕಾರ್ 85, ಮಣಿಪುರ 83, ತೆಂಕನಿಡಿಯೂರು 64, ಉದ್ಯಾವರ 74, ಕಟ್ ಬೇಲ್ತೂರು 72.
ರಸ್ತೆ ಮಧ್ಯೆ ಭಾರೀ ಹೊಂಡ
ಉಡುಪಿ: ರಾತ್ರಿ ಸುರಿದ ಭಾರೀ ಮಳೆಗೆಮಳೆ ನೀರು ಇಳಿಜಾರು ಪ್ರದೇಶಗಳಿಗೆ ನುಗ್ಗಿದ ಪರಿಣಾಮ ಹಲವೆಡೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಚರಂಡಿ ಸಮಸ್ಯೆಯಿಂದ ಮಳೆ ನೀರು ರಸ್ತೆಗೆ ಹರಿದಿತ್ತು. ಉಡುಪಿ-ಮಣಿಪಾಲ ರಾ.ಹೆದ್ದಾರಿ ನಡುವೆ ಹೆದ್ದಾರಿಯನ್ನು ಅಲೆವೂರು ಭಾಗದಿಂದ ಒಳ ರಸ್ತೆ ಮೂಲಕ ಸಂಪರ್ಕಿಸುವ ಪ್ರಧಾನ ಅಂಚೆ ಕಚೇರಿ ಮುಂಭಾಗದ ಜಂಕ್ಷನ್‌ನಲ್ಲಿ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು, ಮಳೆಗೆ ಹೊಂಡದಲ್ಲಿ ನೀರು ತುಂಬಿ ರಸ್ತೆ ಮಧ್ಯೆ ಈಜುಕೊಳ ಸೃಷ್ಟಿಯಾಗಿದೆ. ಇಲ್ಲಿ ವಾಹನ ಸವಾರರು, ಪಾದಚಾರಿಗಳು ತೆರಳುವಾಗ ತೊಂದರೆ ಅನುಭವಿಸು ತ್ತಿದ್ದಾರೆ. ಮಳೆ ಬಂದಾಗ ಹೊಂಡದಲ್ಲಿ ನೀರು ನಿಂತು ಅಪಘಾತ ಸಂಭವಿಸುವ ಅಪಾಯವಿರುವುದರಿಂದ ಈ ಹೊಂಡಕ್ಕೆ ಮುಕ್ತಿ ನೀಡುವ ಅಗತ್ಯವಿದೆ. ಇನ್ನು ಹಲವು ಕಡೆಗಳಲ್ಲಿ ರಸ್ತೆಗಳ ಮಧ್ಯೆ ಹೊಂಡ ಸೃಷ್ಟಿಯಾಗಿ ಸಂಚಾರದಲ್ಲಿ ವ್ಯತ್ಯಯಗಳಾದ ಬಗ್ಗೆ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.