ಉಡುಪಿ ಜಿಲ್ಲೆ : ವಿವಿಧೆಡೆ ಉತ್ತಮ ಮಳೆ
ಮಣಿಪಾಲ ಹೆದ್ದಾರಿ ಬದಿ ಮಣ್ಣು ಕುಸಿತ; ಸವಾರರಲ್ಲಿ ಆತಂಕ
Team Udayavani, Jun 15, 2020, 6:01 AM IST
ಉಡುಪಿ: ಜಿಲ್ಲೆಯಲ್ಲಿ ಎಲ್ಲೆಡೆ ಉತ್ತಮ ಮಳೆಯಾಗಿದ್ದು ಗಾಳಿ, ಸಿಡಿಲು ಇಲ್ಲದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ತಾಲೂಕಿನಲ್ಲಿ ಜೂ. 14ರ ಬೆಳಗ್ಗೆ 8.30 ಗಂಟೆವರೆಗೆೆ 24 ತಾಸುಗಳಲ್ಲಿ ಸರಾಸರಿ 67 ಮಿ.ಮೀ. ಮಳೆಯಾಗಿದೆ.ರವಿವಾರ ಬೆಳಗ್ಗಿನಿಂದಲೇ ಭಾರೀ ಮಳೆಯಾಗಿದ್ದು, ಮಧ್ಯಾಹ್ನ 3 ಗಂಟೆ ಬಳಿಕ ತೀವ್ರಗೊಂಡಿತು.
ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಸುಮತಿ ಅವರ ಮನೆಗೆ ಭಾಗಶಃ ಹಾನಿಯಾಗಿದ್ದು, 30,000 ರೂ. ನಷ್ಟ ಅಂದಾಜಿಸಲಾಗಿದೆ. ಹಲುವಳ್ಳಿ ಗ್ರಾಮದ ಅಪ್ಪಿ ಅವರ ಮನೆಗೆ ಹಾನಿಯಾಗಿ ಸುಮಾರು 15,000 ರೂ. ನಷ್ಟ ಅಂದಾಜಿಸಲಾಗಿದೆ.
ಮಣ್ಣು ಕುಸಿತ: ಆತಂಕ
ರಾಷ್ಟ್ರೀಯ ಹೆದ್ದಾರಿ 169ಎಯ ಮಣಿಪಾಲ ಲಕ್ಷ್ಮೀಂದ್ರನಗರದ ಐನಾಕ್ಸ್ ಚಿತ್ರಮಂದಿರದ ಮುಂಭಾಗದ ಗುಡ್ಡದ ಮಣ್ಣು ಕುಸಿದು ವಾಹನ ಚಾಲಕರಲ್ಲಿ ಆತಂಕ ಉಂಟಾಗಿದೆ. ರವಿವಾರ ಬೆಳಗ್ಗಿನ ಸಮಯ ಮಣ್ಣು ಕುಸಿದು ರಸ್ತೆಗೆ ಬಿದ್ದಿದ್ದು ಕಳೆದ ಬಾರಿಯೂ ಸಹ ಇದೇ ಸಮಯದಲ್ಲಿ ಮಣ್ಣು ಕುಸಿತ ವಾಗಿತ್ತು.
ರಸ್ತೆ ವಿಸ್ತರಣೆಯ ಸಮಯದಲ್ಲಿ ಗುಡ್ಡದ ಬುಡದ ಮಣ್ಣನ್ನು ತೆರವುಗೊಳಿಸ ಲಾಗಿತ್ತು. ಇದರಿಂದ ಮಣ್ಣು ಸಡಿಲಗೊಂಡಿದೆ. ಸ್ವಲ್ಪ ದೂರದಲ್ಲೇ ಕಟ್ಟಡಗಳೂ ಇವೆ. ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಪ್ರದೇಶ ಅಪಾಯಕಾರಿಯಾಗಿದೆ. ಯಾವುದೇ ಸಂದರ್ಭದಲ್ಲಿ ಮಣ್ಣು ವಾಹನಗಳ ಮೇಲೆ ಬೀಳುವ ಅಪಾಯ ವಿರುವ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಬಳಸುವ ಕಬ್ಬಿಣದ ಬಲೆಯನ್ನು ಹಾಕುವಂತೆ ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಬ್ರಹ್ಮಾವರ: ಮನೆ, ಹಟ್ಟಿಗೆ ಹಾನಿ
ಗಾಳಿ ಮಳೆಯಿಂದ ಹೇರೂರು ಕಣ್ಣಬೆಟ್ಟಿನ ತಿಮ್ಮ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಹಂದಾಡಿ ಗ್ರಾಮದ ಮೀನಕ್ಕ ಪೂಜಾರಿ ಅವರ ಹಟ್ಟಿ ಕುಸಿದು ಭಾಗಶಃ ಹಾನಿಯಾಗಿದೆ.
ಕುಂದಾಪುರ : ಸಾಧಾರಣ ಮಳೆ
ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನೆಲ್ಲೆಡೆ ರವಿವಾರ ಬೆಳಗ್ಗಿನಿಂದ ಸಂಜೆಯವರೆಗೂ ಸಾಧಾರಣ ಮಳೆಯಾಗಿದೆ.
ಕುಂದಾಪುರ, ಹೆಮ್ಮಾಡಿ, ಗಂಗೊಳ್ಳಿ, ಮರವಂತೆ, ಉಪ್ಪುಂದ, ಬೈಂದೂರು, ಕೊಲ್ಲೂರು, ಹೊಸಂಗಡಿ, ಸಿದ್ದಾಪುರ, ಹಾಲಾಡಿ, ತೆಕ್ಕಟ್ಟೆ, ಗೋಳಿಯಂಗಡಿ, ಅಂಪಾರು, ಕಂಡ್ಲೂರು, ಬಸೂÅರು, ಶಂಕರನಾರಾಯಣ, ಕೊಲ್ಲೂರು, ಜಡ್ಕಲ್, ಮುಡೂರು, ವಂಡ್ಸೆ, ಕೆರಾಡಿ, ಕಾರ್ಕಳ, ಬೆಳ್ಮಣ್ ಮುಂತಾದೆಡೆ ಮಳೆಯಾದ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.