ಹಸುರು ವಲಯದ ಉಡುಪಿ ಜಿಲ್ಲೆ: ನಾಳೆ ಮತ್ತಷ್ಟು ವಿನಾಯಿತಿ ನಿರೀಕ್ಷೆ
Team Udayavani, May 2, 2020, 5:55 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಹಲವು ದಿನಗಳ ಲಾಕ್‌ಡೌನ್ ಬಳಿಕ ಉಡುಪಿ ಜಿಲ್ಲೆ ಹಸುರು ವಲಯದ ಹಲವು ವಿನಾಯಿತಿಗಳನ್ವಯ ಆರ್ಥಿಕ ಚಟುವಟಿಕೆ ನಿಧಾನವಾಗಿ ತೆರೆದುಕೊಳ್ಳುತ್ತಿದೆ.
ಸಂಪೂರ್ಣ ಲಾಕ್‌ಡೌನ್ ಅವಧಿಯಲ್ಲಿ ದಿನವಹಿ ಅಗತ್ಯದ ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳು ಮಾತ್ರ ತೆರೆದಿದ್ದರೆ, ಎರಡು ದಿನ ಗಳಿಂದ ಬಹುತೇಕ ಸಣ್ಣ ಪುಟ್ಟ ಅಂಗಡಿಗಳು ತೆರೆದು ವ್ಯವಹಾರ ನಡೆಸುತ್ತಿವೆ. ಇಲೆಕ್ಟ್ರೀಶಿ ಯನ್, ಪ್ಲಂಬರ್‌ಗಳು ಮನೆಮನೆಗಳಿಗೆ ತೆರಳಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಬೆಳಗ್ಗೆ 7ರಿಂದ 11 ಗಂಟೆವರೆಗೆ ಮಾತ್ರ ಶಾಪ್‌ಗ್ಳು ತೆರೆದಿ ರುತ್ತಿದ್ದು, ಮೇ 3ರ ಬಳಿಕ ಸಮಯದ ವಿಸ್ತರಣೆ ಆಗಬಹುದೇ ಎಂಬ ನಿರೀಕ್ಷೆ ಇದೆ.
ಕಟ್ಟಡ, ರಸ್ತೆ, ಸೇತುವೆ ಮೊದಲಾದ ಕಾಮ ಗಾರಿಗಳು ನಿಧಾನವಾಗಿ ಆರಂಭಗೊಂಡಿವೆ. ಕೈಗಾರಿಕೆಗಳನ್ನು ಆರಂಭಿಸಲು ಅನುಮತಿ ಕೊಟ್ಟಿದ್ದಾರಾದರೂ ಕಚ್ಚಾ ಸಾಮಗ್ರಿಗಳ ಪೂರೈಕೆ ಕೊರತೆಯಿಂದ ಕೆಲವು ಘಟಕಗಳು ಇನ್ನೂ ಆರಂಭವಾಗಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂಬ ಷರತ್ತನ್ನು ಪರಿಪಾಲಿ ಸುವುದೇ ಕೆಲವು ಕ್ಷೇತ್ರಗಳಲ್ಲಿ ಕಷ್ಟಕರವಾಗಿದೆ.
ಯಾವುದೇ ಚಟುವಟಿಕೆ ಆರಂಭವಾಗಲು ಸಾರ್ವಜನಿಕ ಸಾರಿಗೆ ಆರಂಭವಾಗಬೇಕು. ಈಗಾಗಲೇ ಗ್ರಾಮಾಂತರದಲ್ಲಿ ಅನಿವಾರ್ಯ ವಾಗಿ ಆಟೋರಿಕ್ಷಾಗಳಲ್ಲಿ ಸಂಚರಿಸುತ್ತಿದ್ದಾರೆ. ಬಸ್ಸುಗಳು ಆರಂಭಗೊಂಡರೂ ಹಣ ಕೊಡುವುದು, ಪಡೆಯುವುದನ್ನು ತಪ್ಪಿಸಲು ಡಿಜಿಟಲ್ ಪೇಮೆಂಟ್ ಮೂಲಕ ಸಾಧ್ಯವೇ ಎಂಬ ಬಗ್ಗೆ ಬಸ್ ಮಾಲಕರು ಚಿಂತನೆ ನಡೆಸುತ್ತಿದ್ದಾರೆ.
ಪ್ರಯಾಣದರ ಹೆಚ್ಚಳವಾಗಲಿದೆಯೆ?
ಶೇ. 40ರಷ್ಟು ಪ್ರಯಾಣಿಕರನ್ನು ಕರೆ ದೊಯ್ಯಲು ಅವಕಾಶ ಕೊಡುವಾಗ ಪ್ರಯಾಣ ದರವನ್ನೂ ಹೆಚ್ಚಿಸಲು ಜಿಲ್ಲಾಡಳಿತ ಅನುಮತಿ ಕೊಡಬೇಕು. ಈ ನಿಟ್ಟಿನಲ್ಲಿ ಬಸ್ ಮಾಲಕರ ಸಂಘದ ಸಭೆ ಕರೆಯಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದೇನೆ ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಮತ್ತು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ ನಾಯಕ್ ತಿಳಿಸಿದ್ದಾರೆ. ಖಾಸಗಿಯವರು ಪ್ರಯಾಣದರ ಹೆಚ್ಚಿಸಿದರೆ ಕೆಎಸ್ಸಾರ್ಟಿಸಿಯವರೂ ಪ್ರಯಾಣದರ ಹೆಚ್ಚಿಸುವ ಸಾಧ್ಯತೆ ಇದೆ.
ಪ್ರಸ್ತುತ ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಡಿಪೋ ಗಳಲ್ಲಿ ನಿಲ್ಲಿಸಲಾಗಿದೆ. ತೆರಿಗೆ ಪಾವತಿಸಬೇಕಾದ ಕಾರಣ ಖಾಸಗಿ ಬಸ್ಸುಗಳ ಪರ್ಮಿಟ್‌ಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಸರೆಂಡರ್ ಮಾಡಲಾಗಿದೆ.
ರಿಯಾಯಿತಿ ನಿರೀಕ್ಷೆ
ಮೇ 3ರ ಬಳಿಕದ ಸ್ಥಿತಿಗತಿ ಕುರಿತು ಕೇಂದ್ರ ಸರಕಾರ ಮೇ 2ರಂದು ಮಾರ್ಗದರ್ಶಿ ಸೂತ್ರ ಗಳನ್ನು ಹೊರಡಿಸಲಿದ್ದು, ಅದರನ್ವಯ ರಾಜ್ಯ ಸರಕಾರ ನಿರ್ಧಾರ ಪ್ರಕಟಿಸಲಿದೆ. ಹಸುರು ವಲಯದಲ್ಲಿರುವ ಉಡುಪಿಗೆ ರಿಯಾಯಿತಿ ನಿರೀಕ್ಷೆಯೂ ಇದೆ.
ಜಿಲ್ಲೆಯಿಂದ ಜಿಲ್ಲೆಗೆ ಜನರನ್ನು ಕಳುಹಿಸಲು ಜಿಲ್ಲಾಡಳಿತ ಕ್ರಮ ಕೈಕೊಂಡಿದ್ದು, ರಾಜ್ಯದಿಂದ ರಾಜ್ಯಕ್ಕೆ ಜನ ಸಂಚಾರದ ರೂಪುರೇಖೆಗಳು ಸಿದ್ಧಗೊಳ್ಳುತ್ತಿವೆ. ಮೇ 3ರ ಅನಂತರದ ಚಿತ್ರಣ ಮೇ 2ರಂದು ಸಿಗಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಬಸ್ ಶುರುವಾಗುತ್ತಾ?
ಮೇ 3ರ ಬಳಿಕ ಜಿಲ್ಲೆಯೊಳಗೆ ಸಂಚರಿಸಲು ಬಸ್ಸುಗಳಿಗೆ ಅವಕಾಶ ದೊರೆಯುವ ಸಾಧ್ಯತೆ ಇದ್ದರೂ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತಿದೆ. ಬಸ್ಸುಗಳಲ್ಲಿ ಸಾಮರ್ಥ್ಯದ ಶೇ.40ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕೆಂಬ ನಿಯಮ ಕಾರ್ಯಸಾಧ್ಯವಲ್ಲ ಎನ್ನುತ್ತಾರೆ ಖಾಸಗಿ ಬಸ್ ಮಾಲಕರು. ಕೆಎಸ್ಸಾರ್ಟಿಸಿ ಬಸ್ಸುಗಳಾದರೂ ಶೇ. 40ರಷ್ಟು ಪ್ರಯಾಣಿಕರನ್ನು ಕರೆದೊಯ್ಯಬಹುದು. ಏಕೆಂದರೆ ಕೆಎಸ್ಸಾರ್ಟಿಸಿ ಸರಕಾರದ್ದು. ಕೆಎಸ್ಸಾರ್ಟಿಸಿಯವರಿಗೆ ಸಂಗ್ರಹವಾದ ಮೊತ್ತದ ಮೇಲೆ ತೆರಿಗೆ ವಿಧಿಸುತ್ತಾರೆ. ಖಾಸಗಿಯವರಿಗೆ ಸೀಟು ಸಂಖ್ಯೆಯ ಆಧಾರದಲ್ಲಿ ತೆರಿಗೆ ವಿಧಿಸುತ್ತಾರೆ ಎಂಬ ವಾದ ಇವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.