ಉಡುಪಿ:ಆರೋಗ್ಯ ಇಲಾಖೆಯಲ್ಲಿ ಶೇ.50ಕ್ಕೂ ಅಧಿಕ ಹುದ್ದೆ ಖಾಲಿ!
Team Udayavani, Feb 13, 2024, 1:25 PM IST
ಉಡುಪಿ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಶೇ.50ಕ್ಕೂ ಅಧಿಕ ಹುದ್ದೆಗಳು ಹಲವಾರು ವರ್ಷಗಳಿಂದ ಖಾಲಿಬಿದ್ದಿವೆ. ಇದರಿಂದಾಗಿ ಪ್ರಮುಖ ಸೇವೆ ನೀಡಲು ವೈದ್ಯರ ಕೊರತೆ ಉಂಟಾಗುತ್ತಿದೆ. ಜಿಲ್ಲೆಗೆ ಮಂಜೂರಾದ 2,390 ಹುದ್ದೆಗಳ ಪೈಕಿ ಕರ್ತವ್ಯ ನಿರ್ವಹಿಸುವವರು 1,570 ಮಂದಿ ಮಾತ್ರ. ಉಳಿದ 825 ಹುದ್ದೆಗಳು ಖಾಲಿಯಿವೆ.
ಮಂಜೂರಾದ 240 ಎಚ್‌ಐಒ ಹುದ್ದೆಗಳ ಪೈಕಿ 28 ಮಂದಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, 212 ಹುದ್ದೆಗಳು ಖಾಲಿಯಿವೆ. 275 ಗ್ರೂಪ್ “ಡಿ’ ಹುದ್ದೆಗಳ ಪೈಕಿ 60 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 215 ಹುದ್ದೆಗಳು ಖಾಲಿಯಿವೆ.
ಪಿಎಚ್‌ಸಿಒ 363 ಹುದ್ದೆಗಳ ಪೈಕಿ 181 ಮಂದಿ ಕರ್ತವ್ಯ ನಿರ್ವಹಿಸಿ ಕೊಂಡಿದ್ದು, 182 ಹುದ್ದೆಗಳು ಖಾಲಿಯಿವೆ. 109 ಕ್ಲರಿಕಲ್ ಹುದ್ದೆಗಳ ಪೈಕಿ 26 ಮಂದಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, 88 ಹುದ್ದೆಗಳು ಖಾಲಿಯಿವೆ. 1,028 ಆಶಾ ಕಾರ್ಯಕರ್ತೆಯರ ಹುದ್ದೆಗಳಲ್ಲಿ 980 ಮಂದಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, 48 ಹುದ್ದೆಗಳು ಖಾಲಿಯಿವೆ. 74 ಫಾರ್ಮಸಿ ಅಧಿಕಾರಿಗಳ ಹುದ್ದೆಯಲ್ಲಿ 28 ಮಂದಿಯಷ್ಟೇ ಕರ್ತವ್ಯ ನಿರ್ವಹಿಸುತ್ತಿದ್ದು, 46 ಹುದ್ದೆಗಳು ಖಾಲಿಯಿವೆ.
ನುರಿತ ವೈದ್ಯರ ಕೊರತೆ
ಜಿಲ್ಲೆಗೆ 38 ನುರಿತ ವೈದ್ಯಾಧಿಕಾರಿಗಳ ಹುದ್ದೆ ಇದ್ದು, ಈ ಪೈಕಿ 26 ಮಂದಿ ಕರ್ತವ್ಯ ನಿರ್ವಹಿಸಿಕೊಂಡಿದ್ದರೆ 12 ಹುದ್ದೆಗಳು ಖಾಲಿಯಿವೆ. ಕ್ಯಾಶುವಲ್ಟಿ ಮೆಡಿಕಲ್ ಆಫೀಸರ್ ಗಳ 8 ಹುದ್ದೆಯಲ್ಲಿ 6 ಹುದ್ದೆಗಳು ಭರ್ತಿಯಾಗಿದ್ದು, 2 ಖಾಲಿಯಿವೆ. 60 ಮಂದಿ ಎಂಬಿಬಿಎಸ್ ವೈದ್ಯರು ಕರ್ತವ್ಯ ನಿರ್ವಹಿಸಿಕೊಂಡಿದ್ದು, 1 ಹುದ್ದೆಯಷ್ಟೇ ಖಾಲಿಯಿದೆ.
ಗ್ರಾಮೀಣ ಭಾಗಕ್ಕೆ ಬೇಕಿದೆ ಹೆರಿಗೆ ತಜ್ಞರು
ಜಿಲ್ಲೆಯಲ್ಲಿ 7 ಮಂದಿ ಹೆರಿಗೆ ತಜ್ಞರಿಗೆ ಬೇಡಿಕೆಯಿದ್ದು, 3 ಮಂದಿ ಮಾತ್ರ ಕರ್ತವ್ಯ ನಿರ್ವಹಿಸಿಕೊಂಡಿದ್ದಾರೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಖಾಸಗಿ ಆಸ್ಪತ್ರೆಗಳ ಕೊರತೆ ಇರುವ ಕಾರಣ ಎಲ್ಲರೂ ಸರಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಕಾರ್ಕಳದಲ್ಲಿ ಶೀಘ್ರ ಹೆರಿಗೆ ತಜ್ಞರ ನೇಮಕ ಆಗಬೇಕೆಂಬ ಬಗ್ಗೆ ಇತ್ತೀಚೆಗೆ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿಪರಿಶೀಲನೆ ಸಭೆಯಲ್ಲೂ ಆಗ್ರಹಿಸಲಾಗಿತ್ತು.
ಎನ್‌ಎಚ್‌ಎಂ ಹುದ್ದೆಗಳಲ್ಲಿ ಕೆಲವು ಖಾಲಿ
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ 737 ಹುದ್ದೆಗಳು ಮಂಜೂರಾಗಿದ್ದು, 703 ಹುದ್ದೆಗಳು ಕಾರ್ಯನಿರ್ವಹಿಸಿಕೊಂಡಿವೆ. 34 ಹುದ್ದೆ ಬಾಕಿ ಉಳಿದಿದೆ. 3 ಮಂದಿ ಎಂಬಿಬಿಎಸ್ ವೈದ್ಯರು, 7 ನುರಿತ ವೈದ್ಯರು, ಒಬ್ಬರು ಸ್ಟಾಫ್ ನರ್ಸ್, 15 ಸಿಎಚ್‌ಒ, ಹೊರಗುತ್ತಿಗೆ ಆಧಾರದಲ್ಲಿ ಇಬ್ಬರು ಸಹಿತ ಇತರ 4 ಹುದ್ದೆಗಳು ಖಾಲಿಯಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.