Udupi: ಫ್ಲ್ಯಾಟ್ ಮಾರಾಟ ಒಪ್ಪಂದ ಮಾಡಿ ವಂಚನೆ
Team Udayavani, Jun 15, 2023, 6:37 AM IST
ಉಡುಪಿ: ಫ್ಲ್ಯಾಟ್ ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಂಡು ಬಳಿಕ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿರುವ ಕಾಡಬೆಟ್ಟುವಿನಲ್ಲಿರುವ ಶ್ರೀ ಲಕ್ಷ್ಮೀ ಇನಾøಸ್ಟ್ರಕ್ಚರ್‌ನ ಮಾಲಕ ಆರೋಪಿ ಅಮೃತ್ ಶೆಣೈ ನಿರ್ಮಿಸಿರುವ ವೈಜರ್ ಕಟ್ಟಡದಲ್ಲಿ ಡುಪ್ಲೆಕ್ಸ್ ಫ್ಲ್ಯಾಟ್ ಅನ್ನು ಉಡುಪಿಯ ಲೆಸ್ಲಿ ಲಾರೆನ್ಸ್ ಡಿ’ಅಲ್ಮೇಡಾ ಅವರ ಸಹೋದರ ಜರೋಮ್ ಪ್ರವೀಣ್ ಡಿ’ಅಲ್ಮೇಡಾ ಮತ್ತು ಅವರ ಅತ್ತಿಗೆ ಜೆಸಿಂತಾ ಡಿ’ಅಲ್ಮೇಡಾ ಅವರಿಗೆ 2014ರಲ್ಲಿ ಮಾರಾಟ ಕರಾರುಪತ್ರ ಮೂಲಕ 61,54,400 ರೂ. ಗಳಿಗೆ ಮಾರಾಟ ಮಾಡುವುದಾಗಿ ಒಪ್ಪಿ, ಲೆಸ್ಲಿ ಲಾರೆನ್ಸ್ ಡಿ’ಅಲ್ಮೇಡಾ ಅವರ ಸಹೋದರರಿಂದ ಕರಾರು ಪತ್ರದ ದಿನ 1 ಲಕ್ಷ ರೂ. ಮತ್ತು ನೆಫ್ಟ್ ಮೂಲಕ 9 ಲ.ರೂ. ಹಾಗೂ ಬಾಕಿ ಉಳಿದ 51,54,400ರೂ.ಗಳನ್ನು 2015ರ ಎಪ್ರಿಲ್‌ನಿಂದ 2018ರ ಅಕ್ಟೋಬರ್ ಮಧ್ಯಾವಧಿಯಲ್ಲಿ ಆರೋಪಿಗೆ ಬ್ಯಾಂಕ್ ಮುಖಾಂತರ ಪಾವತಿಸಿದ್ದರು. ಒಟ್ಟು 61,54,400 ರೂ.ಗಳನ್ನು ಪಾವತಿಸಿದ ಅನಂತರವೂ ಆರೋಪಿ ಫ್ಲ್ಯಾಟ್‌ನ ಕಾಮಗಾರಿಯನ್ನು ಪೂರ್ಣಗೊಳಿಸದೆ, ನೋಂದಣಿಯನ್ನೂ ಮಾಡಿಸದೆ ಫ್ಲ್ಯಾಟ್ ಅನ್ನು 2018ರಲ್ಲಿ ಗುರುಪ್ರಸಾದ್ ಅವರಿಗೆ ಮಾರಾಟ ಮಾಡಿದ್ದರು.
ಇದೇ ರೀತಿ ಅದೇ ಕಟ್ಟಡದಲ್ಲಿರುವ ಹಲವು ಫ್ಲ್ಯಾಟ್ ಗಳನ್ನು ಇತರರಿಗೆ ಮಾರಾಟ ಮಾಡುವುದಾಗಿ ನಂಬಿಸಿ ಕರಾರು ಪತ್ರ ಮಾಡಿಸಿ, ಅವರಿಂದ ಹಣವನ್ನು ಪಡೆದು ಅವರಿಗೆ ಫ್ಲ್ಯಾಟ್ ಗಳನ್ನು ನೀಡಿದ ಬಳಿಕ ಅದೇ ಫ್ಲ್ಯಾಟ್ ಗಳ ಬಗ್ಗೆ ಬೇರೆಯವರ ಹೆಸರಿನಲ್ಲಿ ಸಾಲ ಮಾಡಿಸಿ ಅವರಿಂದ ಹಣ ಪಡೆದು ಮೋಸ ಹಾಗೂ ವಂಚನೆ ಮಾಡಿದ್ದಾನೆ. ಆರೋಪಿ ಇದುವರೆಗೆ ವಂಚಿಸಿದ ಮೊತ್ತ 12ರಿಂದ 15 ಕೋ.ರೂ. ಆಗಿರಬಹುದಾಗಿದೆ ಎಂದು ಲೆಸ್ಲಿ ಲಾರೆನ್ಸ್ ಡಿ’ಅಲ್ಮೇಡಾ ಅವರು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.