ಉಡುಪಿ: ಪಾಸಿಟಿವ್‌ನಿಂದ ನೆಗೆಟಿವ್ ನಿರೀಕ್ಷೆಯಲ್ಲಿ
Team Udayavani, Apr 10, 2020, 6:17 AM IST
ಉಡುಪಿ: ಉಡುಪಿ ಜಿಲ್ಲೆಯ ಮೊದಲ ಕೋವಿಡ್ 19 ಸೋಂಕಿತನ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಮಾ. 26ರಂದು ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡ ವ್ಯಕ್ತಿಯ ಗಂಟಲ ದ್ರವದ ಮಾದರಿಯನ್ನು ಸೋಮವಾರ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಬುಧವಾರ ನೆಗೆಟಿವ್ ವರದಿ ಬಂದಿತ್ತು. ಇದೀಗ ಎರಡನೆಯ ಮಾದರಿಯನ್ನು ಬುಧವಾರ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಶುಕ್ರವಾರ ಬರುವ ನಿರೀಕ್ಷೆ ಇದೆ.
ಮಾ. 29ರಂದು ಪಾಸಿಟಿವ್ ವರದಿಯಾದ ಇನ್ನಿಬ್ಬರ ಗಂಟಲ ದ್ರವವನ್ನು ಶುಕ್ರವಾರ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆ ಇದೆ.
ಗುರುವಾರ ಉಡುಪಿ ಜಿಲ್ಲೆಯಲ್ಲಿ 13 ಮಂದಿ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇವರಲ್ಲಿ ಐವರು ಪುರುಷರು ಮತ್ತು ಓರ್ವ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯನ್ನು ಹೊಂದಿದವರು. ನಾಲ್ವರು ಪುರುಷರು ಮತ್ತು ಮೂವರು ಮಹಿಳೆಯರು ಕೋವಿಡ್ 19 ಶಂಕಿತರು. ಪ್ರಸ್ತುತ ಒಟ್ಟು 34 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿದ್ದಾರೆ. ಗುರುವಾರ ನಾಲ್ವರು ಐಸೊಲೇಶನ್ ವಾರ್ಡ್‌ನಿಂದ ಬಿಡುಗಡೆಗೊಂಡಿದ್ದು ಒಟ್ಟು 155 ಮಂದಿ ಇದುವರೆಗೆ ಬಿಡುಗಡೆಗೊಂಡಿದ್ದಾರೆ.
1,816 ಮಂದಿ ನಿಗಾ ಮುಕ್ತಿ
ಗುರುವಾರ ಒಟ್ಟು 14 ಮಂದಿ ನೋಂದಣಿ ಮಾಡಿ ಕೊಂಡಿದ್ದು ಇದುವರೆಗೆ ನೋಂದಣಿ ಮಾಡಿಕೊಂಡವರು ಒಟ್ಟು 2,072 ಮಂದಿ. ಗುರುವಾರ 28 ದಿನಗಳ ನಿಗಾವನ್ನು ಮುಗಿಸಿದವರು 92 ಮಂದಿ. ಇದುವರೆಗೆ ಒಟ್ಟು 649 ಮಂದಿ ನಿಗಾ ಮುಗಿಸಿದ್ದಾರೆ. ಗುರುವಾರ 14 ದಿನಗಳ ನಿಗಾವನ್ನು ಮುಗಿಸಿದವರು ನಾಲ್ವರು, ಇದುವರೆಗೆ ಒಟ್ಟು 1,816 ಮಂದಿ ನಿಗಾ ಮುಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.