Udupi: ಗೀತಾರ್ಥ ಚಿಂತನೆ-122: ಜರಾ, ವಾರ್ಧಕ್ಯದ ಅರ್ಥವ್ಯತ್ಯಾಸ
Team Udayavani, Dec 13, 2024, 1:55 AM IST
ದೇಹಿನೋ ಸ್ಮಿನ್ಯಥಾ ದೇಹೇ ಕೌಮಾರಂ ಯೌವನಂ ಜರಾ|
ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ| (ಗೀತೆ 2-12 )
ಬಾಲ್ಯ ಸ್ಥಿತ್ಯಂತರವಲ್ಲವಾದ ಕಾರಣ ಕೌಮಾರ್ಯ, ಯೌವ್ವನ ಸ್ಥಿತ್ಯಂತರದ ಸ್ಥಿತಿ ಎಂದು ಕೃಷ್ಣ ಹೇಳುತ್ತಾನೆ. ಕೃಷ್ಣ ಬಾಲ್ಯವನ್ನು ಏಕೆ ಬಿಟ್ಟ ಎಂದರೆ ಬಾಲ್ಯ ಹುಟ್ಟುವಾಗಲೇ ಬಂದದ್ದು, ಆದ್ದರಿಂದ ಅದು ಸ್ಥಿತ್ಯಂತರವಲ್ಲ. ಬದಲಾವಣೆಯನ್ನಷ್ಟೇ ಕೃಷ್ಣ ಹೇಳಿದ್ದು. ಯೌವ್ವನ ಮುಖ್ಯವಾದರೂ ಕೌಮಾರ್ಯವನ್ನು ಏಕೆ ಹೇಳಿದನೆಂದರೆ ಅದು ಕೇವಲ ಸುಖಸ್ಥಿತಿ. ಕೌಮಾರ್ಯದಲ್ಲಿ ಯಾವುದೇ ಜವಾಬ್ದಾರಿಗಳಿರುವುದಿಲ್ಲ, ಯೌವ್ವನದಲ್ಲಿ ಸ್ವಲ್ಪ ಜವಾಬ್ದಾರಿಯೂ ಇರುತ್ತದೆ. ಇವೆರಡು ಬದಲಾವಣೆಯಾಗುವ ದುಃಖದ ಪ್ರಸಂಗದಲ್ಲಿಯೂ ದುಃಖಿಸದವ, ಈಗೇಕೆ ದುಃಖೀಸಿದಿ ಎಂಬುದು ಕೃಷ್ಣ ಪ್ರಶ್ನೆ. ವಾರ್ಧಕ್ಯವೆಂದು ಹೇಳದೆ “ಜರಾ’ ಎನ್ನುವುದಕ್ಕೆ ಕಾರಣ ಇದರಲ್ಲಿ ತುಸು ವ್ಯತ್ಯಾಸವಿದೆ. ಜರಾ ಅಂದರೆ ಅಂಗಾಂಗಗಳು ಸರಿಯಾಗಿ ಕೆಲಸ ಮಾಡದ ಸ್ಥಿತಿ. ಜರಾ= ಜೀರ್ಣವಾದದ್ದು. ವಾರ್ಧಕ್ಯ=ವೃದ್ಧಿಯ ಪರಾಕಾಷ್ಠೆ.
ದೇಹಾಂತರವೂ ಇದೇ ರೀತಿ ಬದಲಾವಣೆ ಸ್ಥಿತಿ. ಹಾಗಿರುವಾಗ ದುಃಖವೇಕೆ? ದೇಹದ ಸ್ವಾಮಿತ್ವ ಇರುವುದು ಆತ್ಮನಿಗಾದ ಕಾರಣ ದೇಹಕ್ಕೆ ವಾರ್ಧಕ್ಯ ಬಂದರೂ ಆತ್ಮಕ್ಕೆ ದುಃಖವಾಗುತ್ತದೆ. ದೇಹಿಯೇ ಸುಖ, ದುಃಖವನ್ನು ಪಡುತ್ತಾನೆ. ಆದ್ದರಿಂದ “ದೇಹಿನಾ’ ಎಂದು ಕೃಷ್ಣ ಒತ್ತಿ ಹೇಳುತ್ತಾನೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.