Udupi: ಗೀತಾರ್ಥ ಚಿಂತನೆ 142: “ಧೀರ’ ಯಾರು?
Team Udayavani, Jan 1, 2025, 12:15 AM IST
ಗೀತೆಯ ಒಂದೊಂದು ವಾಕ್ಯವೂ “ಪೂರ್ಣಮದಃ ಪೂರ್ಣಮಿದಂ…’ ಎಂಬಂತೆ ಪರಿಪೂರ್ಣ. ಕೌಮಾರ್ಯ, ವಾರ್ಧಕ್ಯದಂತೆ ದೇಹಾಂತರ ಪ್ರಾಪ್ತಿ ಸಹಜವಾದದ್ದು. ಅಸಹಜವಾದರೆ ಮಾತ್ರ ದುಃಖ ಪಡಬೇಕು. ನೂರು ವರ್ಷವಾಗಿ ಮೃತಪಟ್ಟರೆ ದುಃಖ ಬರುವುದಿಲ್ಲ. ಅಪಘಾತವಾಗಿ ಸತ್ತರೆ ಅಸಹಜ ಎಂದು ದುಃಖವಾಗುತ್ತದೆ. ಕೃಷ್ಣ ಅದನ್ನೂ ಸಹಜ. ಎಲ್ಲವೂ ಸಹಜ ಎನ್ನುತ್ತಾನೆ.
“ಯಾವುದೂ ನನ್ನದಲ್ಲ’ ಎಂದು ಯಾರು ಅನುಸಂಧಾನ ಮಾಡಿ ರಮಿಸುತ್ತಾರೋ ಅವರನ್ನು ಗೀತೆ “ಧೀರ’ ಎಂದು ಕರೆದಿದೆ. ಇದನ್ನು ಒಮ್ಮೆ ಕೇಳಿದರೆ ಆಗುವುದಿಲ್ಲ. ಅಭ್ಯಾಸ ಮಾಡಿದರೆ ದುಃಖವಾಗುವುದಿಲ್ಲ. ಪುನಃ ಪುನಃ ಮಾಡಿದರೆ ಮನಸ್ಸಿನೊಳಗೆ ಹೋಗುತ್ತದೆ. ಅಭ್ಯಾಸೇನ …. ಎಂಬಂತೆ ರಿಪೀಟ್ ಮಾಡುವುದರಿಂದ ಸಾಧನೆ ಆಗುವುದು. “ಯಾವುದನ್ನು ರಿಪೀಟ್ ಮಾಡುತ್ತಿರೋ ತಾದಾತ್ಮ ಬಂದು ಫ್ಯಾಕ್ಟ್ ಆಗಿ ಕನ್ವರ್ಟ್ ಆಗುತ್ತದೆ’ ಎಂದು ಮನಃಶಾಸ್ತ್ರ ಹೇಳುತ್ತದೆ. ಉಪಾಸನಕ್ರಮವೂ ಹೀಗೆ. ಏನು ಉಪಾಸನೆಯೋ ಅದು ಪ್ರಾಪ್ತವಾಗುತ್ತದೆ. ತಪ್ಪಾಗಿ ಉಪಾಸನೆ ಮಾಡಿದರೆ ಮತ್ತೆ ಸರಿಪಡಿಸುವುದು ಕಷ್ಟ. ವಾಹನಗಳಿಗೆ ಗವರ್ನರ್ ಅಳವಡಿಸುವುದೇಕೆ/ ಸ್ಪೀಡ್ ಲಿಮಿಟ್ ಏಕೆೆ? ರಕ್ಷಣೆ ಆಗಬೇಕೆಂದು. ಸ್ಪೀಡ್ ಹೋದರೆ ಎಲ್ಲರಿಗೂ ಒಳ್ಳೆಯದೇ, ಆದರೆ ಅಪಾಯವಿದೆ. ಆದ್ದರಿಂದ ಸತ್ಯವನ್ನೇ ಉಪಾಸನೆ ಮಾಡಬೇಕು. ಎಲ್ಲವನ್ನೂ ಸಹಜ, ಎಲ್ಲರಿಗೂ ಈ ಅವಸ್ಥೆಗಳು ಸಮಾನ ಎಂದು ತಿಳಿದರೆ ದುಃಖವಾಗುವುದಿಲ್ಲ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.