![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
Team Udayavani, Jan 29, 2025, 7:28 AM IST
ಉಡುಪಿ: ಒಳಕಾಡು ಶಾಲಾ ಕಟ್ಟಡದಲ್ಲೇ ಇದ್ದ ಜೇನುಗೂಡಿಗೆ ವಿದ್ಯಾರ್ಥಿಯೊಬ್ಬ ಕಲ್ಲೆಸೆದ ಪರಿಣಾಮ ವಿದ್ಯಾರ್ಥಿಗಳ ಮೇಲೆ ಜೇನು ನೊಣ ದಾಳಿ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಅಪರಾಹ್ನ ಸುಮಾರು 3.30ರ ವೇಳೆಗೆ ಈ ಘಟನೆ ನಡೆದಿದೆ. ಶಾಲಾ ವಿದ್ಯಾರ್ಥಿಯೊಬ್ಬ ಜೇನು ಗೂಡಿಗೆ ಕಲ್ಲು ಎಸೆದ ಸಂದರ್ಭ ನೊಣಗಳು ಚೆಲ್ಲಾಪಿಲ್ಲಿಯಾಗಿ ಶಾಲಾ ಆವರಣದಲ್ಲಿದ್ದ ಮಕ್ಕಳು ಹಾಗೂ ಪೋಷಕರ ಮೇಲೆ ದಾಳಿ ಮಾಡಿದೆ. 40 ವಿದ್ಯಾರ್ಥಿಗಳು ಸಹಿತ ಎಸ್‌ಡಿಎಂಸಿ ಸದಸ್ಯೆಯೊಬ್ಬರು ಗಾಯಗೊಂಡಿದ್ದಾರೆ.
ಈ ಪೈಕೆ 37 ವಿದ್ಯಾರ್ಥಿಗಳಿಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಸಂಜೆ ಮನೆಗೆ ತೆರಳಿದ್ದಾರೆ. ಉಳಿದ ಮೂವರು ವಿದ್ಯಾರ್ಥಿಗಳ ಮೈಯಲ್ಲಿ ತರಚಿದ ಗಾಯಗಳಾಗಿದ್ದು, ಅವರನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಿತಕ್ಕೊಳಗಾಗಿರುವ ಎಸ್‌ಡಿಎಂಸಿ ಸದಸ್ಯೆಯನ್ನು ಜಿಲ್ಲಾಸ್ಪತ್ರೆಯ ನಿಗಾ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ| ಅಶೋಕ್ ತಿಳಿಸಿದ್ದಾರೆ. ಡಿಡಿಪಿಐ ಕೆ. ಗಣಪತಿ, ನಗರಸಭೆ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಹಕರಿಸಿದ್ದಾರೆ.
ಪಾರಾದ ವಿದ್ಯಾರ್ಥಿಗಳು:
ಈ ಶಾಲೆಯಲ್ಲಿ 590 ಮಂದಿ ವಿದ್ಯಾರ್ಥಿಗಳಿದ್ದು, ಜೇನು ದಾಳಿ ಆರಂಭಿಸುತ್ತಿದ್ದಂತೆಯೇ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ತರಗತಿ ಕೊಠಡಿಗಳ ಬಾಗಿಲು ಬಂದ್ ಮಾಡಿ ವಿದ್ಯಾರ್ಥಿಗಳು ಸಹಿತ ಶಿಕ್ಷಕರು ಜೇನು ದಾಳಿಯಿಂದ ತಪ್ಪಿಸಿಕೊಂಡರು.
ಶಾಲಾ ಆವರಣದಲ್ಲಿದ್ದ ವಿದ್ಯಾರ್ಥಿಗಳು ಜೇನು ದಾಳಿಗೆ ಒಳಗಾದರು. ಕೂಡಲೇ ಎಸ್‌ಡಿಎಂಸಿ ಸದಸ್ಯರ ಸಹಿತ ಸ್ಥಳೀಯರ ಸಹಕಾರದೊಂದಿಗೆ ವಾಹನದಲ್ಲಿ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಎಂದು ಶಾಲಾ ಮುಖ್ಯಶಿಕ್ಷಕಿ ಪೂರ್ಣಿಮಾ ತಿಳಿಸಿದ್ದಾರೆ. ಸಂಜೆ 5ರಿಂದ 6 ಗಂಟೆಯ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
Kaup: ಇದು 118 ಸ್ತಂಭಗಳ ಬೃಹತ್ ದೇಗುಲ!
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
Bollywood: ರೀ-ರಿಲೀಸ್ ಗಳಿಕೆಯಲ್ಲಿ ʼತುಂಬಾಡ್ʼ ಮೀರಿಸಿದ ʼಸನಮ್ ತೇರಿ ಕಸಮ್ʼ
You seem to have an Ad Blocker on.
To continue reading, please turn it off or whitelist Udayavani.