Udupi: ಶ್ರೀಕೃಷ್ಣ ಅವತಾರವೇ ಆಕರ್ಷಕ: ಪುತ್ತಿಗೆ ಸುಗುಣೇಂದ್ರತೀರ್ಥ ಶ್ರೀಪಾದರು
ಕೃಷ್ಣನ ಮೃಣ್ಮಯ ಮೂರ್ತಿಯ ಮೆರವಣಿಗೆಗೆ ಚಾಲನೆ
Team Udayavani, Aug 27, 2024, 6:45 AM IST
ಉಡುಪಿ: ವಿಶ್ವದ ಒಳಿತಿಗಾಗಿ ಆಗಿರುವ ಶ್ರೀ ಕೃಷ್ಣ ಅವತಾರವೇ ಆಕರ್ಷಕ. ಶ್ರೀ ಕೃಷ್ಣನ ನಡೆ, ನುಡಿ ಸದಾ ಸ್ಫೂರ್ತಿ ಹಾಗೂ ಜೀವನ ಉತ್ಸಾಹ ತುಂಬುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿದರು.
ಶ್ರೀ ಕೃಷ್ಣಮಠ, ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಮಾಸೋತ್ಸವ, ಸಪ್ತೋತ್ಸವದ ಪ್ರಯುಕ್ತ ಸೋಮವಾರ ಶ್ರೀ ಕೃಷ್ಣಾಷ್ಟಮಿಯಂದು ರಥಬೀದಿಯಲ್ಲಿ ಮೃಣ್ಮಯ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿ, ಅನಂತರ ರಥಬೀದಿ ಸುತ್ತಿ ರಾಜಾಂಗಣಕ್ಕೆ ಆಗಮಿಸಿ, ಅಲ್ಲಿ ಸಭಾ ಕಾರ್ಯಕ್ರಮವನ್ನು “ವಸುದೇವ ಶ್ರೀ ಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ಹೋಗುವಾಗ ಶೇಷ ಶಯನ ಅನುಗ್ರಹಿಸುತ್ತಿರುವ ಪ್ರತಿಕೃತಿ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ಕೃಷ್ಣನ ಅವತಾರವೇ ಭಕ್ತ ಸ್ನೇಹಿ ಹಾಗೂ ಆಪ್ಯಾಯ ಮಾನವಾದುದು. ಕೃಷ್ಣೋಪಾಸನೆಯಿಂದ ತತ್‌ಕ್ಷಣ ಭಕ್ತರಿಗೆ ಅನುಗ್ರಹಿಸುತ್ತಾನೆ. ಶ್ರೀಕೃಷ್ಣ ಹೇಗೆ ಆಕರ್ಷಕನೋ ಹಾಗೆಯೇ ಭಕ್ತರ ಭಕ್ತಿಗೂ ಆಕರ್ಷಿತನಾಗುತ್ತಾನೆ. ಕೃಷ್ಣಾವತಾರ ಕಲಿಯುಗದ ಭಕ್ತರಿಗಾಗಿ ವಿನ್ಯಾಸ ಮಾಡಿದ ಅವತಾರ ಎಂದು ಅನುಗ್ರಹಿಸಿದರು.
ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಅನುಗ್ರಹಿಸಿ, ಸ್ತ್ರೀಯರನ್ನು ಎಲ್ಲಿ ಪೂಜಿಸುತ್ತಾರೋ ಅಲ್ಲಿ ದೇವರು ಇರುತ್ತಾರೆ. ಧರ್ಮ ದ್ರೋಹಿಗಳ ನಾಶಕ್ಕೆ ಭಗವಂತನ ಅವತಾರ ಎನ್ನುತ್ತಾರೆ. ಧರ್ಮ ದ್ರೋಹಿಗಳ ನಾಶಕ್ಕೆ ಭಗವಂತ ಅವತ ರಿಸ ಬೇಕೆಂದಿಲ್ಲ. ತನ್ನ ಇಚ್ಛೆ ಮಾತ್ರ ದಿಂದಲೇ ಸಂಹಾರ ಮಾಡಬಹುದು. ನಮ್ಮಲ್ಲಿರುವ ದೋಷ ಗಳನ್ನು ಕಳೆಯುವವನೇ ಶ್ರೀ ಕೃಷ್ಣ ಎಂದರು.
ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣ ಪ್ರಸಾದ್ ಕೂಡ್ಲು, ದುಬಾೖಯ ಸುಧಾಕರ ಪೇಜಾವರ, ಉದ್ಯಮಿಗಳಾದ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ, ಪ್ರೀತಂ ಕುಮಾರ್ ದಂಪತಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಶ್ರೀಪಾದರ ಅನುಗ್ರಹಿಸಿದರು.
ವಿ. ಪರಿಷತ್ ಸದಸ್ಯ ಬೋಜೇಗೌಡ, ಸು. ಕೋ. ಹಿರಿಯ ವಕೀಲ ಬಾಲರಾಜ್, ಗುಜರಾತ್‌ನ ಮಾಜಿ ಸಂಸದ ಸಾಗರ್ ರಾಯ್ಕರ್, ಬೆಂಗ ಳೂರಿನ ಆರೆಸ್ಸೆಸ್‌ನ ಹಿರಿಯರಾದ ಮಿಲಿಂದ್ ಗೋಖಲೆ, ಮುಂಬಯಿ ಉದ್ಯಮಿ ಗುರುಪ್ರಸಾದ್, ಅರುಣ್ ಕುಮಾರ್ ಉಪಸ್ಥಿತರಿದ್ದರು. ಶ್ರೀಮಠದ ರಮೇಶ್ ಭಟ್ ಸ್ವಾಗತಿಸಿ, ಡಾ| ಗೋಪಾಲಾಚಾರ್ಯ ನಿರೂಪಿಸಿದರು.
ಭಂಡತನದ ಚರ್ಚೆ ಕೇಳಲಷ್ಟೇ ಚಂದ, ಅನುಷ್ಠಾನ ಅಸಾಧ್ಯ
ಕಿರುತೆರೆ ನಿರ್ದೇಶಕ ಎಸ್.ಎನ್. ಸೇತುರಾಮ್ ಅವರು ಕೃಷ್ಣನ ವ್ಯಕ್ತಿತ್ವದ ಪ್ರಸ್ತುತತೆ ಬಗ್ಗೆ ಉಪನ್ಯಾಸ ನೀಡಿ, ಹಿಂದೂ ಧರ್ಮ, ದೇವತೆಗಳ ವಿಷಯದಲ್ಲಿ ಭಂಡತನದ ಚರ್ಚೆ ಕೇಳಲು ಚೆನ್ನಾಗಿರುತ್ತದೆ. ಅದರಂತೆ ಬದುಕಲು ಕಷ್ಟ. ಅದು ಕೇವಲ ಮನೋರಂಜನೆ ಅಷ್ಟೆ. ಭಾರತದ ಸಂಪತ್ತನ್ನು ಹುಡುಕಿ ವಿದೇಶಿಗರು ಇಲ್ಲಿಗೆ ಬಂದಿದ್ದರು. ನಮ್ಮಲ್ಲಿ ಎಲ್ಲ ಸಂಪತ್ತು ಇದ್ದುದರಿಂದ ನಾವು ಎಲ್ಲಿಗೂ ಹೋಗಿಲ್ಲ. ಆದರೆ ಇಲ್ಲಿಗೆ ಬಂದರು ನಮ್ಮಲ್ಲಿ ನಾವೇ ಹೊರಗಿನವರು ಎಂಬ ಭಾವ ತುಂಬಿ ಹೋಗಿದ್ದರಿಂದ ಪೂರ್ವಜರ ರೇಖೆಯನ್ನು ಮರೆತಿದ್ದೇವೆ ಎಂದು ವಿಶ್ಲೇಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.