ಮಂಗಳೂರು, ಉಡುಪಿಯ ಕೆಲವು ಚರ್ಚ್ಗಳಲ್ಲಿ ಪ್ರಾರ್ಥನೆ
Team Udayavani, Jun 13, 2020, 7:32 AM IST
ಮಂಗಳೂರು/ಉಡುಪಿ: ಚರ್ಚ್ಗಳಲ್ಲಿ ಪ್ರಾರ್ಥನೆಗಳನ್ನು ಜೂ. 13ರಿಂದ ಪುನರಾರಂಭಿಸಲು ಮಂಗಳೂರು ಧರ್ಮ ಪ್ರಾಂತವು ನಿರ್ಧರಿಸಿದ್ದರೂ, ಎಲ್ಲ ಚರ್ಚ್ಗಳಲ್ಲಿ ಸಿದ್ಧತೆ ಪೂರ್ಣಗೊಂಡಿಲ್ಲ. ಹಾಗಾಗಿ ಜೂ.13ರಂದು ಸಂಜೆ ಕೆಲವು ಚರ್ಚ್ಗಳಲ್ಲಿ ಮಾತ್ರ ಪ್ರಾರ್ಥನೆ ನಡೆಯಲಿದೆ.
ಬಹುತೇಕ ಚರ್ಚ್ಗಳಲ್ಲಿ ಜೂ.14ರಂದು (ರವಿವಾರ) ಬೆಳಗ್ಗೆ ಬಲಿ ಪೂಜೆಗಳು ಪ್ರಾರಂಭವಾಗಲಿವೆ. ಸಿದ್ಧತೆಗಳು ಪೂರ್ಣಗೊಳ್ಳದಲ್ಲಿ ಜೂ.21ರಿಂದ ಆರಂಭವಾಗಲಿವೆ ಎಂದು ಧರ್ಮ ಪ್ರಾಂತದ ಮೂಲಗಳು ತಿಳಿಸಿವೆ.
ಚರ್ಚ್ಗಳಲ್ಲಿ ಪ್ರಾರ್ಥನೆ ಪುನರಾರಂಭಿಸಲು ಸರಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾದೇಶಿಕ ಕೆಥೋಲಿಕ್ ಬಿಷಪರ ಪರಿಷತ್ತು ಮಾರ್ಗಸೂಚಿಗಳನ್ನು ರಚಿಸಿದ್ದು, ಅದರನ್ವಯ ಜೂ. 13ರಿಂದ ಚರ್ಚ್ಗಳನ್ನು ತೆರೆಯಲು ಮಂಗಳೂರು ಧರ್ಮ ಪ್ರಾಂತವು ತೀರ್ಮಾನಿಸಿದೆ.
ಉಡುಪಿ ಪ್ರಾಂತದಲ್ಲಿ ಜೂನ್ ಅಂತ್ಯದವರೆಗೆ ಪ್ರಾರ್ಥನೆಗಳನ್ನು ನಡೆಸದೆ ಇರಲು ತೀರ್ಮಾನಿಸಲಾಗಿದೆ.
ಕೆಲವು ಮಸೀದಿಗಳಲ್ಲಿ ಶುಕ್ರವಾರದ ನಮಾಜ್
ಕೊರೊನಾ- ಲಾಕ್ಡೌನ್ ಪ್ರಯುಕ್ತ ತಾತ್ಕಾಲಿಕವಾಗಿ ರದ್ದು ಮಾಡಲಾಗಿದ್ದ ಶುಕ್ರವಾರದ ನಮಾಜ್ ಪ್ರಕ್ರಿಯೆ 11 ವಾರಗಳ ಬಳಿಕ ಜೂನ್ 12 ರಂದು ಮಂಗಳೂರಿನ ಕೆಲವು ಮಸೀದಿಗಳಲ್ಲಿ ಸರಕಾರದ ನಿರ್ದೇಶನ ಮತ್ತು ಮಾರ್ಗ ಸೂಚಿಗಳ ಪ್ರಕಾರ ಪುನರಾರಂಭಗೊಂಡಿದೆ.
ಬಂದರ್ನ ಝೀನತ್ ಬಕ್ಷ್ ಜುಮಾ ಮಸೀದಿಯಲ್ಲಿ (ಕೇಂದ್ರ ಜುಮಾ ಮಸೀದಿ)ಅಪರಾಹ್ನ 12.30ಕ್ಕೆ ಬಾಂಗ್ (ಆಝಾನ್ ಕರೆ) ಆದ ಕೂಡಲೇ ಖುತ್ಬಾ ಪಾರಾಯಣ ಹಾಗೂ ಬಳಿಕ ನಮಾಝ್ ನಡೆಯಿತು. ಮಸೀದಿಯ ಖತೀಬ್ ಸದಕತುಲ್ ಫೈಝಿ ಅವರು ನಮಾಝ್ ನೆರವೇರಿಸಿದರು. ಸುರಕ್ಷಿತ ಸಾಮಾಜಿಕ ಅಂತರ ಮತ್ತಿತರ ಸರಕಾರ ಸೂಚಿಸಿದ ನಿಯಮಗಳನ್ನು ಪಾಲಿಸಿಕೊಂಡು ಸುಮಾರು 300 ಮಂದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.