ಮಂಗಳೂರು-ಉಡುಪಿ ಈಗ ಹೊಂಡ ಮುಕ್ತ ಹೆದ್ದಾರಿ

ಮಳೆಗಾಲದಲ್ಲಿ ಅತಿವೇಗದ ವಾಹನ ಚಾಲನೆಯ ಬಗ್ಗೆ ಇರಲಿ ಎಚ್ಚರ!

Team Udayavani, Jun 8, 2020, 7:03 AM IST

ಮಂಗಳೂರು-ಉಡುಪಿ ಈಗ ಹೊಂಡ ಮುಕ್ತ ಹೆದ್ದಾರಿ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು-ಉಡುಪಿ ನಡುವೆ ಬಾಕಿಯಿದ್ದ ಹಲವು ಕಾಮಗಾರಿ ಲಾಕ್‌ಡೌನ್‌ ಸಮಯದಲ್ಲಿ ಬಹುತೇಕ ಪೂರ್ಣಗೊಂಡಿದೆ.

ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಈ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಅಧಿಕವಾಗಿದೆ. ಜತೆಗೆ ಮಳೆಗಾಲವೂ ಆರಂಭವಾಗಿದೆ. ಹೀಗಾಗಿ ಸವಾರರು/ ಚಾಲಕರು ಹೆಚ್ಚಿನ ಜಾಗರೂಕತೆ ವಹಿಸಬೇಕಿದೆ.

ಮುಖ್ಯವಾಗಿ ಕೂಳೂರಿನಿಂದ ಸುರತ್ಕಲ್‌ ವರೆಗೆ ಅಲ್ಲಲ್ಲಿ ಇದ್ದ ಭಾರೀ ಹೊಂಡಗಳನ್ನು ಮುಚ್ಚಿ ಡಾಮರು ಹಾಕಲಾಗಿದೆ. ಸುರತ್ಕಲ್‌ನಿಂದ ಉಡುಪಿ ವರೆಗೆ ಇದ್ದ ಗುಂಡಿಗಳನ್ನೂ ಕೂಡ ಮುಚ್ಚಲಾಗಿದೆ. ಈಗ ಸಹಜವಾಗಿಯೇ ವಾಹನಗಳ ವೇಗ ಅತಿಯಾಗುತ್ತಿದೆ.

ಕೂಳೂರು ಸೇತುವೆಯೂ ಮುಕ್ತ
ನಾದುರಸ್ತಿಯಲ್ಲಿದ್ದ ಕೂಳೂರು ಹಳೆ ಸೇತುವೆಯಲ್ಲಿ ಲಾಕ್‌ಡೌನ್‌ ಘೋಷಣೆಗಿಂತ ಕೆಲವು ದಿನಗಳ ಮೊದಲು ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಸೇತುವೆಯ ದುರಸ್ತಿ ಪೂರ್ಣಗೊಂಡಿದ್ದು ಎರಡೂ ಭಾಗದ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಉಡುಪಿಯಿಂದ ಮಂಗಳೂರಿನತ್ತ ಹೋಗುವ ಸೇತುವೆಯ ಒಂದು ಭಾಗದಲ್ಲಿ ಹಂಪ್ಸ್‌ ಅಳವಡಿಸಲಾಗಿದೆ. ಇನ್ನೊಂದು ಮಗ್ಗುಲಿನ ಸಂಪರ್ಕ ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಪ್ರಗತಿಯಲ್ಲಿದ್ದು ರಸ್ತೆ ಇಕ್ಕಟ್ಟಾಗಿದೆ. ಸೇತುವೆಯ ಇನ್ನೊಂದು ಬದಿ (ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಭಾಗ) ಸಂಪೂರ್ಣ ಕತ್ತಲಿನಿಂದ ಕೂಡಿದೆ. ಹಳೆ ಸೇತುವೆ ದಾಟಿ ಮಂಗಳೂರು ಕಡೆಗೆ ಬರುವ ಸಂಪರ್ಕ ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಪರಿಣಾಮವಾಗಿ ಇಲ್ಲಿ ಸೋಮವಾರ ಬೆಳಗ್ಗೆ ಮಳೆನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಮರು ಡಾಮರು ಕಾಮಗಾರಿ ಪೂರ್ಣ
ಮಂಗಳೂರಿನಿಂದ ಉಡುಪಿ ಕಡೆಗೆ ಬರುವ ದಿಕ್ಕಿನಲ್ಲಿ ಬೈಕಂಪಾಡಿ ಸೇತುವೆ ಸಮೀಪ ಕಾಂಕ್ರೀಟ್‌ ಕಾಮಗಾರಿ ಪ್ರಗತಿ
ಯಲ್ಲಿದೆ. ಇಲ್ಲಿಯೂ ವಾಹನ ದಟ್ಟಣೆ ಸಾಧ್ಯತೆ ಇದೆ. ಹೊಸಬೆಟ್ಟು ಭಾಗದಲ್ಲಿ ಮರು ಡಾಮರು ಕಾಮಗಾರಿ ಪೂರ್ಣ ಗೊಂಡಿದ್ದು ಮಾರ್ಕಿಂಗ್‌ ನಡೆಯುತ್ತಿದೆ. ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನಕ್ಕೆ ತಿರುವು ಪಡೆದುಕೊಳ್ಳುವ ಸ್ಥಳದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ಸಣ್ಣ ಹಂಪ್‌ಗ್ಳನ್ನು ಹಾಕಲಾಗಿದೆ. ಇದು ವಾಹನ ಚಾಲಕರು/ಸವಾರರ ಗಮನಕ್ಕೆ ಬರುತ್ತಿಲ್ಲ. ದ್ವಿಚಕ್ರ ವಾಹನ
ಸವಾರರು ಎಚ್ಚರ ವಹಿಸ ಬೇಕಿದೆ.

ಬೆಳಕು, ಸೇತುವೆ ಬಾಕಿ
ಮರುಡಾಮರು ಕಾಮಗಾರಿ ನಡೆದಿರುವ ಕೆಲವು ಸ್ಥಳಗಳು ಇಕ್ಕಟ್ಟಾಗಿವೆ.  ಕೆಲವು ಕಡೆಗಳಲ್ಲಿ ರಸ್ತೆ ವಿಭಾಜಕದ ನಡುವೆ ಗಿಡಗಳು ಇಲ್ಲದಿರುವುದರಿಂದ ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕಿನ (ಹೆಡ್‌ಲೈಟ್‌)  ಸಮಸ್ಯೆಯೂ ಇದೆ.
ಪಡುಬಿದ್ರಿ ಪೇಟೆ ಭಾಗದಲ್ಲಿ ಬಾಕಿ ಯಾಗಿದ್ದ ಸರ್ವೀಸ್‌ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಚರಂಡಿ ಸಮಸ್ಯೆ ಇದೆ. ಅಲ್ಲಿನ ಕಲ್ಸಂಕ ಸೇತುವೆಯ ಇನ್ನೊಂದು ಭಾಗದ ಕಾಮಗಾರಿ ಪೂರ್ಣಗೊಂಡಿಲ್ಲ.

ಟಾಪ್ ನ್ಯೂಸ್

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

1

Ullal: ಸೋಮೇಶ್ವರ ಬೀಚ್‌; ಮೂಲಸೌಕರ್ಯ ಕಣ್ಮರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.