![Delhi-Stampede-Railway](https://www.udayavani.com/wp-content/uploads/2025/02/Delhi-Stampede-Railway-415x249.jpg)
![Delhi-Stampede-Railway](https://www.udayavani.com/wp-content/uploads/2025/02/Delhi-Stampede-Railway-415x249.jpg)
Team Udayavani, Jan 29, 2025, 6:55 AM IST
ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಗಳ ವಿಚಾರಣೆಯ ಆಡಿಯೋ ಮತ್ತು ವೀಡಿಯೋ ದಾಖಲಿಸಬೇಕೆಂದು ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ ಅರ್ಜಿಗೆ ವಿಶೇಷ ಅಭಿಯೋಜಕರು ಆಕ್ಷೇಪ ಸಲ್ಲಿಸಿದ್ದು, ಜ. 31ಕ್ಕೆ ವಾದ-ಪ್ರತಿವಾದವನ್ನು ಮಂಡಿಸಲು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ಮುಂದೂಡಿ ಆದೇಶಿಸಿದೆ.
ಬೆಂಗಳೂರು ಜೈಲಿನಲ್ಲಿರುವ ಚೌಗುಲೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಇದೇ ವೇಳೆ ಸಂತ್ರಸ್ತ ಕುಟುಂಬದ ನೂರ್ ಮುಹಮ್ಮದ್ ಹಾಜರಿದ್ದರು. ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂದು ಆರೋಪಿಯ ಅರ್ಜಿಗೆ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ಆಕ್ಷೇಪಣೆ ಸಲ್ಲಿಸಿದರು.
ಈ ಬಗ್ಗೆ ವಾದ ಮಂಡಿಸಲು ಫೆ. 10ರ ವರೆಗೆ ಕಾಲಾವಕಾಶಬೇಕೆಂಬುದಾಗಿ ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ವಿನಾಕಾರಣ ವಿಚಾರಣೆಯನ್ನು ಮುಂದೂಡಿ ವಿಳಂಬ ಮಾಡಲಾಗುತ್ತಿದೆ ಎಂದು ವಿಶೇಷ ಅಭಿಯೋಜಕರು ಹೇಳಿದರು. ಇದಕ್ಕಾಗಿ ಸಂತ್ರಸ್ತ ಕುಟುಂಬದ ಮುಖ್ಯಸ್ಥ ಕೂಡ ವಿದೇಶದಿಂದ ಬಂದಿದ್ದಾರೆ. ಆದುದರಿಂದ ವಿಚಾರಣೆಯನ್ನು ವಿಳಂಬ ಮಾಡಬಾರದು ಎಂದು ವಿಶೇಷ ಅಭಿಯೋಜಕರು ಮನವಿ ಮಾಡಿದರು. ಆ ಹಿನ್ನೆಲೆಯಲ್ಲಿ ನ್ಯಾಯಾಧೀಶ ಸಮಿವುಲ್ಲಾ, ಆರೋಪಿ ಪರ ವಕೀಲರಿಗೆ ವಾದ ಮಂಡಿಸಲು ಜ. 31ಕ್ಕೆ ದಿನಾಂಕ ನಿಗದಿಪಡಿಸಿ ಆದೇಶಿಸಿದರು.
Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!
Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್ ಪಾವತಿ!
Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ
‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ
Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್
You seem to have an Ad Blocker on.
To continue reading, please turn it off or whitelist Udayavani.