ದ.ಕ., ಉಡುಪಿ: ವಿವಿಧೆಡೆ ಕೋರ್ಟ್‌ ಆದೇಶ ಪಾಲನೆಗೆ ಒಪ್ಪದೆ ವಿದ್ಯಾರ್ಥಿನಿಯರು ವಾಪಸ್‌


Team Udayavani, Feb 17, 2022, 7:15 AM IST

ದ.ಕ., ಉಡುಪಿ: ವಿವಿಧೆಡೆ ಕೋರ್ಟ್‌ ಆದೇಶ ಪಾಲನೆಗೆ ಒಪ್ಪದೆ ವಿದ್ಯಾರ್ಥಿನಿಯರು ವಾಪಸ್‌

ಪಡುಬಿದ್ರಿ: ಇಲ್ಲಿನ ಸರಕಾರಿ ಪಿ.ಯು. ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ಬಂದಿದ್ದ ನಾಲ್ವರನ್ನು ವಾಪಸು ಕಳುಹಿಸಲಾಗಿದೆ. 15 ವಿದ್ಯಾರ್ಥಿನಿಯರು ಕಾಲೇಜಿಗೆ ಹಾಜರಾಗಿರಲಿಲ್ಲ. ಪ್ರಾಂಶುಪಾಲರ ಸಮ್ಮುಖ ಮಂಗಳವಾರ ವಿದ್ಯಾರ್ಥಿ, ಪೋಷಕರ ಸಭೆ ನಡೆದು, ನ್ಯಾಯಾಲಯದ ಮಧ್ಯಾಂತರ ಆದೇಶದ ಕುರಿತು ವಿವರಿಸಲಾಗಿತ್ತು. ಬುಧವಾರ ಪೊಲೀಸ್‌ ಬೆಂಗಾವಲಿನಲ್ಲಿ ತರಗತಿಗಳು ಆರಂಭಗೊಂಡಿದ್ದವು. ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಲ್ಲಿ ಪ್ರಾಂಶುಪಾಲರು ಮಾಡಿದ ಮನವಿ ಫಲಿಸಲಿಲ್ಲ.

ಕಾಪು: 10 ವಿದ್ಯಾರ್ಥಿನಿಯರು ವಾಪಸ್‌
ಕಾಪು: ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಅವಕಾಶವಿಲ್ಲದ ಕಾರಣ ಕಾಪು ಸ.ಪ್ರ.ದ. ಕಾಲೇಜಿನ 10 ವಿದ್ಯಾರ್ಥಿನಿಯರು ಬುಧವಾರ ಮನೆಗೆ ಹಿಂದಿರುಗಿದರು.

ಇಲ್ಲಿ ಒಟ್ಟು 16 ಮುಸ್ಲಿಂ ವಿದ್ಯಾರ್ಥಿನಿ ಯರಿದ್ದು, ಬುಧವಾರ 13 ಮಂದಿ ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಮುಂದಾಗಿದ್ದರು. ಆದರೆ ಅವಕಾಶ ನಿರಾಕರಿಸಲಾಯಿತು. ಮೂವರು ಎಂದಿ ನಂತೆ ಕಾಲೇಜು ಆವರಣದ ವರೆಗೆ ಹಿಜಾಬ್‌ ಧರಿಸಿ ಬಂದು, ಬಳಿಕ ಅದನ್ನು ತೆಗೆದಿರಿಸಿ ತರಗತಿಗೆ ಆಗಮಿಸಿದರು.

ಹಳೆಯಂಗಡಿ: ವಿದ್ಯಾರ್ಥಿಗಳ ಪಟ್ಟು
ಹಳೆಯಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ತರಗತಿ ಆರಂಭಗೊಂಡಾಗ 15 ಮಂದಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಕಾಲೇಜು ಪ್ರಾಂಶುಪಾಲರು ನ್ಯಾಯಾ ಲಯದ ಆದೇಶದ ಬಗ್ಗೆ ಮನವರಿಕೆ ಮಾಡಿದರೂ ಪಟ್ಟು ಬಿಡದವರೊಂದಿಗೆ ಮೂಲ್ಕಿ ಪೊಲೀಸ್‌ ಠಾಣೆಯ ಎಎಸ್‌ಐ ಚಂದ್ರಶೇಖರ ಕೂಡ ಮಾತುಕತೆ ನಡೆಸಿದರು. ಆದರೆ ಮಾತುಕತೆ ಫಲ ಕಾರಿಯಾಗದೆ 15 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದೆ ಮನೆಗೆ ತೆರಳಿದರು. ಮೂಲ್ಕಿ ಪೊಲೀಸರು ಕಾಲೇಜಿನಲ್ಲಿ ಭದ್ರತೆ ಒದಗಿಸಿದ್ದರು.

ಮನೆಗೆ ಮರಳಿದ ಓರ್ವ ವಿದ್ಯಾರ್ಥಿನಿ
ಬ್ರಹ್ಮಾವರ: ಬಾರಕೂರು ಸರಕಾರಿ ಕಾಲೇಜಿನ ಪ್ರಥಮ ಪದವಿಯ ಓರ್ವ ವಿದ್ಯಾರ್ಥಿನಿ ಹಿಜಾಬ್‌ ಧರಿಸಿ ಆಗಮಿ ಸಿದ್ದು, ಪ್ರಾಂಶುಪಾಲರು ಕೋರ್ಟ್‌ ಆದೇಶದ ಬಗ್ಗೆ ಮನವರಿಕೆ ಮಾಡಿದರು. ಪರೀಕ್ಷೆ ತಯಾರಿಗಾಗಿ ಆಕೆ ಮನೆಗೆ ಮರಳಿರುವುದಾಗಿ ತಿಳಿದು ಬಂದಿದೆ.

ಮೂಡುಬಿದಿರೆ: 6 ಮಂದಿ ಮನೆಗೆ
ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ಬಂದ 6 ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಯಿತು. ಅವರು ಮನೆಗೆ ವಾಪಸಾದರು. ಇಲ್ಲಿನ 10 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 6 ಮಂದಿ ಹಿಜಾಬ್‌ ಧರಿಸಿ ಬಂದಿದ್ದರು.

ವಿಟ್ಲ: 11 ವಿದ್ಯಾರ್ಥಿನಿಯರು ವಾಪಸ್‌
ವಿಟ್ಲ: ಇಲ್ಲಿ ಸ.ಪ್ರ.ದ. ಕಾಲೇಜಿನಲ್ಲಿ 11 ಮಂದಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದಿದ್ದು, ತರಗತಿಗೆ ಹಾಜರಾಗದೆ ಮನೆಗೆ ಹಿಂದಿರುಗಿದರು. ಮಹಿಳಾ ಕೋಣೆಯಲ್ಲಿ ಹಿಜಾಬ್‌ ಕಳಚಿ ತರಗತಿಗೆ ತೆರಳಿ ಎಂದು ಪ್ರಾಂಶುಪಾಲರು ವಿನಂತಿಸಿದ್ದರೂ ವಿದ್ಯಾರ್ಥಿಗಳು ಮನೆಗೆ ಮರಳಿದರು.

23 ವಿದ್ಯಾರ್ಥಿನಿಯರು ಹಿಂದಕ್ಕೆ
ಕಿನ್ನಿಗೋಳಿ: ಪಾಂಪೈ ಪದವಿ ಕಾಲೇಜಿ ನಲ್ಲಿ ಹಿಜಾಬ್‌ ಧರಿಸಿ ಬಂದ 23 ವಿದ್ಯಾರ್ಥಿನಿಯರಲ್ಲಿ ಪ್ರಾಂಶುಪಾಲರು ಕೋರ್ಟ್‌ ಆದೇಶ ಪಾಲಿಸುವಂತೆ ತಿಳಿಸಿದ್ದು, ಒಪ್ಪದ ಕಾರಣ ಮನೆಗೆ ವಾಪಾಸಾಗಿದ್ದಾರೆ.

ಸುಳ್ಯ: 7 ಮಂದಿ ವಾಪಸ್‌
ಸುಳ್ಯದ ನೆಹರೂ ಮೆಮೋರಿಯಲ್‌ ಪದವಿ ಕಾಲೇಜಿನಲ್ಲಿ 13 ವಿದ್ಯಾರ್ಥಿನಿ ಯರು ಹಿಜಬ್‌ ಧರಿಸಿ ಬಂದಿದ್ದರು. ಇದರಲ್ಲಿ ನಾಲ್ವರು ಹಿಜಬ್‌ ತೆಗೆದು ತರಗತಿಗೆ ಹಾಜರಾದರು. ಉಳಿದವರು ವಾಪಸಾಗಿದ್ದಾರೆ ಎಂದು ಎಸ್‌ಪಿ ಋಷಿಕೇಶ್‌ ಸೋನಾವಣೆ ತಿಳಿಸಿದ್ದಾರೆ.

ಮಂಗಳೂರು ಕಮಿಷನರೆಟ್‌
28 ಮಂದಿ ವಾಪಸ್‌
ಬುಧವಾರ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ 6 ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದಿದ್ದು, ಈ ಪೈಕಿ 2 ಕಾಲೇಜುಗಳ ಒಟ್ಟು 28 ವಿದ್ಯಾರ್ಥಿಗಳ ವಿನಾ ಉಳಿದವರು ಹಿಜಾಬ್‌ ತೆಗೆದು ತರಗತಿಗೆ ಹಾಜರಾಗಿದ್ದಾರೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

 

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Manipal: ಅಪಘಾತ ತಡೆಯಲು ಹೀಗೆ ಮಾಡಿ!

6

ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.