![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-415x249.jpg)
ಉಡುಪಿ ತಾಲೂಕು: ಮೆಸ್ಕಾಂಗೆ 46.69 ಲ.ರೂ. ನಷ್ಟ
Team Udayavani, Jun 16, 2020, 5:58 AM IST
![ಉಡುಪಿ ತಾಲೂಕು: ಮೆಸ್ಕಾಂಗೆ 46.69 ಲ.ರೂ. ನಷ್ಟ](https://www.udayavani.com/wp-content/uploads/2020/06/Mescom-580x465.jpg)
ರವಿವಾರ ರಾತ್ರಿ ಸುರಿದ ಭಾರೀ ಗಾಳಿ -ಮಳೆಗೆ ಹೆಜಮಾಡಿ ಅಮಾವಾಸೆ ಕರಿಯ ಬಳಿ ಯತೀಶ್ ಅಮೀನ್ ಎಂಬವರ ಮನೆ ಭಾಗಶಃ ಕುಸಿದು 80 ಸಾವಿರ ರೂ. ನಷ್ಟ ಸಂಭವಿಸಿದೆ.
ಉಡುಪಿ: ಜಿಲ್ಲೆಯಲ್ಲಿ 15 ದಿನಗಳಿಂದ ಸುರಿದ ಮಳೆಗೆ ಮೆಸ್ಕಾಂಗೆ 46.69ಲ.ರೂ. ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ರವಿವಾರ ಸುರಿದ ಮಳೆಗೆ ವಿದ್ಯುತ್ ಕಂಬ 30, ಟ್ರಾನ್ಸ್‌ಫಾರ್ಮರ್ 1, ವಿದ್ಯುತ್ ತಂತಿ 900 ಮೀ. ನಷ್ಟ ಸೇರಿದಂತೆ ಜೂನ್ 1ರಿಂದ ಜೂ.15ವರೆಗೆ ವಿದ್ಯುತ್ ಕಂಬ 254, ಟ್ರಾನ್ಸ್‌ಫಾರ್ಮರ್ 74, ವಿದ್ಯುತ್ ತಂತಿ 26.69 ಕಿ.ಮೀ. ಉದ್ದ ತಂತಿ ಹಾಳಾಗಿದ್ದು, ಇದರ ಒಟ್ಟು ಮೌಲ್ಯ 46.69 ಲ.ರೂ. ನಷ್ಟವಾಗಿದೆ.
ಉತ್ತಮ ಮಳೆ
ತಾಲೂಕಿನೆಲ್ಲೆಡೆ ಉತ್ತಮ ಮಳೆ ಯಾಗಿದೆ. ಉಡುಪಿ ಹಾಗೂ ಕಾರ್ಕಳ ತಾಲೂಕಿನಲ್ಲಿ ಜೂ.15ರ ಬೆಳಗ್ಗೆ 8.30 ಗಂಟೆಗೆ ಹಿಂದೆ 24 ತಾಸುಗಳಲ್ಲಿ ಕ್ರಮವಾಗಿ ಸರಾಸರಿ 56.5 ಮಿ.ಮೀ., 44.2 ಮಿ.ಮೀ. ಮಳೆಯಾಗಿದೆ. ಸೋಮವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ.
1.80 ಲ.ರೂ . ಆಸ್ತಿ ಹಾನಿ
ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮದ ಮೀನಕ್ಕ ಪೂಜಾರ್ತಿ ಮನೆಯ ದನದ ಕೊಟ್ಟಿಗೆ ಮಳೆಯಿಂದಾಗಿ
ಕುಸಿದು ಭಾಗಶಃ ಹಾನಿಯಾಗಿದ್ದು 10,000 ರೂ. ನಷ್ಟವಾಗಿದೆ.
52 ಹೇರೂರು ಗ್ರಾಮದ ತಿಮ್ಮ ಪೂಜಾರಿ ಅವರ ವಾಸ್ತವ್ಯದ ಮನೆ ಗಾಳಿಮಳೆಯಿಂದ ಭಾಗಶಃ ಹಾನಿ ಯಾಗಿದ್ದು ಸುಮಾರು 40,000 ರೂ. ನಷ್ಟವಾಗಿದೆ. ಕಾಪು ತಾಲೂಕಿನ ಪಡು ಗ್ರಾಮದ ರತ್ನಾ ಜೆ. ಅವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದ್ದು ಸುಮಾರು 50,000 ರೂ. ಹಾಗೂ ಹೆಜಮಾಡಿ ಗ್ರಾಮದ ಯತೀಶ್ ಅವರ ಮನೆ ಗಾಳಿ ಮಳೆಯಿಂದ ಹಾನಿಯಾಗಿ 80,000 ರೂ. ನಷ್ಟವಾಗಿದೆ.
ಕುಂದಾಪುರ ತಾಲೂಕು
ಕುಂದಾಪುರ: ತಾಲೂಕಿನ ವಿವಿಧೆಡೆ ಸೋಮವಾರ ಮುಂಜಾನೆವರೆಗೆ ಬಿದ್ದ ಮಳೆ ವಿವರ ಹೀಗಿದೆ:
ಆಲೂರು 58, ನಾಡ 65, ನಾವುಂದ 30, ಕಾಳಾವರ 23, ಶಂಕರನಾರಾಯಣ 14, ಬಿಜೂರು 49,ಕಾಲ್ತೋಡು 60, ಕಂಬದಕೋಣೆ 56, ಮರವಂತೆ 53, ಪಡುವರಿ 54, ಯಡ್ತರೆ 57, ಆನಗಳ್ಳಿ 18, ಬೇಳೂರು 21, ಬೀಜಾಡಿ 28, ಹಂಗಳೂರು 22, ಹಟ್ಟಿಯಂಗಡಿ 34, ಹೆಂಗವಳ್ಳಿ 17, ಕೋಣಿ 22, ಕುಂಭಾಶಿ 37, ಮೊಳಹಳ್ಳಿ 25, ಚಿತ್ತೂರು 47, ಗಂಗೊಳ್ಳಿ 30, ಗುಜ್ಜಾಡಿ 40, ಹಕ್ಲಾಡಿ 58, ಹೆಮ್ಮಾಡಿ 37, ಆವರ್ಸೆ 26, ಗುಲ್ವಾಡಿ 34, ಕಟ್ ಬೇಲ್ತೂರು 42 ಮಿ.ಮೀ. ಮಳೆಯಾಗಿದೆ.
ಟಾಪ್ ನ್ಯೂಸ್
![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ](https://www.udayavani.com/wp-content/uploads/2024/12/6-35-150x90.jpg)
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
![5](https://www.udayavani.com/wp-content/uploads/2024/12/5-36-150x90.jpg)
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-150x90.jpg)
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
![Krantiveer Brigade launched by worshipping the feet of 1008 saints: KS Eshwarappa](https://www.udayavani.com/wp-content/uploads/2024/12/kse-150x87.jpg)
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
![BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ](https://www.udayavani.com/wp-content/uploads/2024/12/3-34-150x90.jpg)
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.