ಉದಯವಾಣಿ ವರದಿ ಫಲಶೃತಿ: ಗ್ರಾಮದಲ್ಲಿ ಆರಂಭವಾದ ನ್ಯಾಯಬೆಲೆ ಅಂಗಡಿ
ಹಲವು ವರ್ಷಗಳಿಂದ ನಡೆದುಕೊಂಡು ಹೋಗಿ ಪಡಿತರ ಧಾನ್ಯ ತರುತ್ತಿದ್ದ ಗ್ರಾಮಸ್ಥರು
Team Udayavani, Jun 20, 2023, 12:07 PM IST
ದೋಟಿಹಾಳ: ಸಮೀಪದ ತೋನಸಿಹಾಳ ಗ್ರಾಮದ ಮತ್ತು ತಾಂಡದ ಜನರು ಪ್ರತಿ ತಿಂಗಳ ಪಡಿತರ ಧಾನ್ಯ ಪಡೆಯಲು ಗ್ರಾಮದಿಂದ 2ಕಿ.ಮೀ ದೂರದಲ್ಲಿರುವ ಗೋತಗಿ ಗ್ರಾಮಕ್ಕೆ ಹೋಗಿ ಬರುತ್ತಿದ್ದರು.
ಗ್ರಾಮಸ್ಥರು ಗೋತಗಿ ಗ್ರಾಮಕ್ಕೆ ನಡೆದುಕೊಂಡು ಹೋಗಿ ಪಡಿತರ ಧಾನ್ಯ ತರುವಂತಹ ಪರಿಸ್ಥಿತಿ ಹಲವು ವರ್ಷಗಳಿಂದ ಇದೆ. ಇವರಿಗೆ ಗೋತಗಿ ಗ್ರಾಮಕ್ಕೆ ಹೋಗಿ ಬರಲು ಸರಿಯಾದ ಸಾರಿಗೆ ಸೌಲಭ್ಯ ಇಲ್ಲ.
ಹೀಗಾಗಿ ಇದರ ಬಗ್ಗೆ ಉದಯವಾಣಿ ಪ್ರತಿನಿಧಿ ಗ್ರಾಮಕ್ಕೆ ಭೇಟಿ ನೀಡಿ ಇವರ ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಜೂ.1 ರಂದು ಉದಯವಾಣಿ ಪತ್ರಿಕೆ ಹಾಗೂ ಉದಯವಾಣಿ ಆನ್ಲೈನ್ ನಲ್ಲಿ ಪಡಿತರ ಆಹಾರ ತರಲು ಹರಸಹಾಸ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡ ಬಳಿಕ ಸದ್ಯ ಜೂನ್ ತಿಂಗಳಿನಿಂದ ಈ ಎರಡು ಗ್ರಾಮಸ್ಥರಿಗೆ ಸದ್ಯ ಗ್ರಾಮದಲ್ಲಿಯೇ ಪಡಿತರ ಧಾನ್ಯ ರೇಷನ್ ವಿತರಣಾ ಉಪಕೇಂದ್ರವನ್ನು ಆರಂಭಿಸಲಾಗಿದೆ.
ಎರಡು ಗ್ರಾಮಗಳ ಗ್ರಾಮಸ್ಥರು ಜೂ.19ರ ಸೋಮವಾರ ಗ್ರಾಮದಲ್ಲೇ ಜೂನ್ ತಿಂಗಳ ರೇಷನ್ ತಂದಿದ್ದಾರೆ.
ಹಿನ್ನೆಲೆ: ಎರಡು ಗ್ರಾಮಗಳಲ್ಲಿ ಬಡ ಕೃಷಿ, ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಬದುಕಿಗೆ ಕೂಲಿಯನ್ನೇ ಅವಲಂಬಿಸಿದವರು. ಇವರ ಪ್ರತಿ ತಿಂಗಳು ಕೂಲಿ ಕೆಲಸ ಬಿಟ್ಟು ಪಡಿತರಕ್ಕಾಗಿ ದಿನವೆಲ್ಲ ಕಾಯಬೇಕಾಗಿತ್ತು.
ಪಡಿತರ ರೇಷನ್ ತರಲು ಹೋಗಬೇಕಾದರೆ ಮನೆಯಲ್ಲಿ ವೃದ್ಧರು, ಮಹಿಳೆಯರು, ಮಕ್ಕಳನ್ನು ಬಿಟ್ಟು ದೂರದ ಊರಿಗೆ ಹೋಗಿ ಪಡಿತರ ರೇಷನ್ ತರುವ ಪರಿಸ್ಥಿತಿ ಇವರದಾಗಿತ್ತು.
ಅದರೊಂದಿಗೆ ಗೋತಗಿ ಗ್ರಾಮಕ್ಕೆ ಹೋಗಿ ಬರಲು ಸರಿಯಾದ ವಾಹನದ ವ್ಯವಸ್ಥೆಯೂ ಇಲ್ಲ. ಕೆಲವರು ಬೈಕ್‌ಗಳಲ್ಲಿ ಪಡಿತರ ಧಾನ್ಯಗಳನ್ನು ತಂದರೆ, ಇನ್ನೂ ಕೆಲವರು ನಡೆದುಕೊಂಡು ಹೋಗಿ ಧಾನ್ಯವನ್ನು ತರಬೇಕಾದ ಪರಿಸ್ಥಿತಿ.
ಈ ತೋನಸಿಹಾಳ ತಾಂಡ ಮತ್ತು ಗ್ರಾಮದ ಪಡಿತರ ಕಾರ್ಡ್ ಗಳನ್ನು ಗೋತಗಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಜೋಡಿಸಲಾದ ಕಾರಣ ಇಲ್ಲಿನ ಗ್ರಾಮಸ್ಥರು ಗೋತಗಿ ಗ್ರಾಮಕ್ಕೆ ಹೋಗಿ ಬರುವ ಸ್ಥಿತಿ ಇತ್ತು. ಸದ್ಯ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಆರಂಭವಾಗಿರುವುದು ಗ್ರಾಮಸ್ಥರಲ್ಲಿ ಸಂತೋಷ ತಂದಿದೆ.
ತೋನಸಿಹಾಳ ತಾಂಡ ಮಹಿಳೆ ಲಕ್ಷ್ಮೀ ರಾಠೋಡ ಮಾತನಾಡಿ, ಪ್ರತಿ ತಿಂಗಳ ಪಡಿತರ ಧಾನ್ಯ ತರಲು ನಾವು ಕೂಲಿ ಕೆಲಸ ಬಿಟ್ಟು ಹೋಗಬೇಕಿತ್ತು. ಆದರೆ ಇದೀಗ ನಮ್ಮ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಆರಂಭವಾಗಿರುವುದು ನಮಗೆ ಅನುಕೂಲವಾಗಿದೆ ಎಂದರು.
ನಮ್ಮ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯ ಉಪಕೇಂದ್ರ ಆರಂಭವಾಗಲು ಗ್ರಾಪಂ ಅದ್ಯಕ್ಷ ಶೇಖಪ್ಪ ಸಾಂತಪ್ಪ ಪೂಜಾರಿಯವರ ಪರಿಶ್ರಮ ಮತ್ತು ಉದಯವಾಣಿ ಪತ್ರಿಕೆಯ ಕಳಕಳಿಯಿಂದ ಇದು ಸಾಧ್ಯವಾಗಿದೆ. ನಮ್ಮ ಗ್ರಾಮದಲ್ಲಿ ಇಂದು ನ್ಯಾಯಬೆಲೆ ಅಂಗಡಿ ಆರಂಭವಾಗಿದೆ ಎಂದು ಕೆಲ ಗ್ರಾಮಸ್ಥರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.