UG NEET/CET: ಪ್ರವೇಶಕ್ಕೆ ಮತ್ತೂಂದು ಅವಕಾಶ
Team Udayavani, Aug 23, 2023, 11:28 PM IST
ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ತಮ್ಮ ಆಯ್ಕೆಗಳನ್ನು ದಾಖಲಿಸಲು, ಶುಲ್ಕ ಕಟ್ಟುವ ಹಾಗೂ ಕಾಲೇಜಿಗೆ ಸೇರಲು ನಿಗದಿಪಡಿಸಿದ್ದ ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದೆ.
ಕಾಲೇಜು/ಕೋರ್ಸ್‌ಗಳಿಗೆ ತಮ್ಮ ಆಯ್ಕೆಯನ್ನು ನೋಂದಾಯಿಸಲು ಆ. 24ರ ಮಧ್ಯಾಹ್ನ 12ರವರೆಗೆ ಶುಲ್ಕ ಪಾವತಿಸಲು ಅದೇ ದಿನ ಮಧ್ಯಾಹ್ನ 2 ಗಂಟೆವರೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ರಾತ್ರಿ 11.59ರ ವರೆಗೆ ಅವಕಾಶ ನೀಡಲಾಗಿದೆ. ಬಳಿಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವರದಿ ಮಾಡಿಕೊಳ್ಳಲು ಇದೇ 25 ಕೊನೇ ದಿನ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಡಿಪ್ಲೊಮಾ ಸಿಇಟಿ ಸೆ. 10ರ ಬದಲು ಸೆ. 9ಕ್ಕೆ ನಿಗದಿ
2023ನೇ ಸಾಲಿನ ಎರಡನೇ ಅಥವಾ ಮೂರನೇ ಸೆಮಿಸ್ಟರ್ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ನಡೆಸುವ ಡಿಪ್ಲೊಮಾ ಸಿಇಟಿ ಪರೀಕ್ಷೆಯನ್ನು ಸೆ. 10ರ ಬದಲಿಗೆ ಸೆ. 9ರಂದು ನಡೆಸಲಾಗುವುದು. ಸೆ. 10ರಂದು ಪೋಲಿಸ್ ಇಲಾಖೆಯ ಪರೀಕ್ಷೆ ಇರುವ ಕಾರಣ ಒಂದು ದಿನ ಮೊದಲೇ ಪರೀಕ್ಷೆ ನಡೆಸಲಾಗುವುದು ಎಂದು ರಮ್ಯಾ ತಿಳಿಸಿದ್ದಾರೆ.
ಪಿಜಿಸಿಇಟಿ ಪರೀಕ್ಷೆ ಮುಂದಕ್ಕೆ
ಎಂಬಿಎ, ಎಂಸಿಎ, ಎಂ.ಟೆಕ್ ಸೇರಿ ಇತರ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಸೆ. 9 ಮತ್ತು 10 ರಂದು ನಡೆಸಬೇಕಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ದಿನಾಂಕಗಳಂದು ಪೊಲೀಸ್ ಇಲಾಖೆ ಪರೀಕ್ಷೆ ಇರುವ ಕಾರಣ ಈ ಪರೀಕ್ಷೆ ಮುಂದೂಡಿದ್ದು, ಹೊಸ ದಿನಾಂಕಗಳನ್ನು ಸದ್ಯದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.