ಕಲಿಕಾ ವ್ಯವಸ್ಥೆಗೆ ಹೊಸ ದಿಶೆ ನೀಡಲು ಮುಂದಾದ ಯುಜಿಸಿ


Team Udayavani, May 24, 2021, 6:53 AM IST

ಕಲಿಕಾ ವ್ಯವಸ್ಥೆಗೆ ಹೊಸ ದಿಶೆ ನೀಡಲು ಮುಂದಾದ ಯುಜಿಸಿ

ಕೋವಿಡ್‌-19 ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಅತ್ಯಂತ ಗಂಭೀರ ವಾದ ಪರಿಣಾಮವನ್ನುಂಟು ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಅಂದರೆ 2020-21ರ ಶೈಕ್ಷಣಿಕ ವರ್ಷ ಸಂಪೂರ್ಣ ಗೊಂದಲಮಯವಾಗಿ ಸಾಗಿದೆ. ಕೊರೊನಾ ಸೃಷ್ಟಿಸಿದ ಅವಾಂತರಗಳಿಂದಾಗಿ ದೇಶದ ಶಿಕ್ಷಣ ವ್ಯವಸ್ಥೆ ಹೊಸ ಮಗ್ಗುಲಿಗೆ ಹೊರಳಲೇಬೇಕಾದ ಅನಿವಾರ್ಯ ಸೃಷ್ಟಿ ಯಾಯಿತು. ಇದರಿಂದಾಗಿ ಈ ಸಾಲಿನ ಪ್ರತಿಯೊಂದೂ ಉಪಕ್ರಮಗಳು ಪ್ರಯೋಗಾತ್ಮಕವಾಗಿಯೇ ನಡೆದವು. ಶಿಕ್ಷಣ ಎನ್ನುವುದು ಕೇವಲ ಭೌತಿಕ ತರಗತಿಗಳಿಗೆ ಸೀಮಿತ ಎಂಬ ನಮ್ಮ ಕಲ್ಪನೆ ಈಗ ಬದಲಾಗತೊಡಗಿದೆ. ಆನ್‌ಲೈನ್‌ ಶಿಕ್ಷಣದ ಪರಿಕಲ್ಪನೆಗೆ ದೇಶದ ಇಡೀ ವ್ಯವಸ್ಥೆ ತನ್ನ ಗಮನವನ್ನು ಕೇಂದ್ರೀಕರಿಸಲೇಬೇಕಾಗಿದೆ.

ಈ ಗೋಜಲುಮಯ ಪರಿಸ್ಥಿತಿ ಈ ಸಾಲಿಗೆ ಸೀಮಿತವಾಗಿರಲಿದೆ ಎಂಬ ನಮ್ಮೆಲ್ಲರ ಕಲ್ಪನೆಯನ್ನು ಕೊರೊನಾ ಎರಡನೇ ಅಲೆ ಹುಸಿ ಮಾಡಿದೆ. ಮುಂಬರುವ ಅಂದರೆ 2021-22ನೇ ಸಾಲಿನ ಶೈಕ್ಷಣಿಕ ವರ್ಷವೂ ಈ ಬಾರಿಗಿಂತಲೂ ಇನ್ನಷ್ಟು ಗೊಂದಲಮಯವಾಗಿರಲಿದೆ ಎಂಬ ಸುಳಿವು ಈಗಾಗಲೇ ಲಭಿಸಿದೆ. ಹಾಲಿ ಶೈಕ್ಷಣಿಕ ಋತುವಿನ ಉದ್ದಕ್ಕೂ ಆನ್‌ಲೈನ್‌, ಆಫ್ಲೈನ್‌ ಎಂಬ ಜಿಜ್ಞಾಸೆಯಲ್ಲೇ ಮುಳುಗಿದ್ದ ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳು ಇದೀಗ ಮುಂದೇನು? ಎಂಬ ಬಗೆಗೆ ಗಂಭೀರವಾಗಿ ಯೋಚಿಸಲಾರಂಭಿಸಿವೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲ ಯಗಳ ಧನ ಸಹಾಯ ಆಯೋಗ (ಯುಜಿಸಿ) ಮುಂದಿನ ಶೈಕ್ಷಣಿಕ ಋತುವಿನಿಂದ ಎಲ್ಲ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆನ್‌ಲೈನ್‌ ಮತ್ತು ಆಫ್ಲೈನ್‌ ತರಗತಿಗಳನ್ನು ಒಳಗೊಂಡ ಸಮ್ಮಿಶ್ರ ಬೋಧನೆ ಮತ್ತು ಕಲಿಕಾ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.

ಯುಜಿಸಿಯ ಸಮಿತಿಯೊಂದು ಈ ಸಂಬಂಧ ವಿಶ್ವವಿದ್ಯಾನಿಲಯಗಳ ಬೋಧನ ವ್ಯವಸ್ಥೆ, ಪರೀಕ್ಷಾ ಕ್ರಮಗಳ ಕುರಿತಂತೆ ಕೆಲವೊಂದು ಮಹತ್ತರವಾದ ಶಿಫಾರಸುಗಳನ್ನು ಮಾಡಿದೆ. ಈ ಸಮಿತಿ ಯುಜಿಸಿಯ ಮುಂದಿಟ್ಟಿರುವ ಕರಡು ವರದಿಯಲ್ಲಿ ಶೇ. 40ರಷ್ಟು ಆನ್‌ಲೈನ್‌ನಲ್ಲಿ ಮತ್ತು ಶೇ. 60ರಷ್ಟು ಆಫ್ಲೈನ್‌ ತರಗತಿಗಳನ್ನು ನಡೆಸುವ ಸಲಹೆ ನೀಡಿದೆ. ಇದರಂತೆ ವಿದ್ಯಾರ್ಥಿಗಳೇ ಶಿಕ್ಷಕರು ಮತ್ತು ತರಗತಿ ಸಮಯವನ್ನು ಆಯ್ದುಕೊಳ್ಳಬಹುದಾಗಿದೆಯಲ್ಲದೆ ತಮಗೆ ಬೇಕಾದ ಕೋರ್ಸ್‌ಗಳನ್ನೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನೂ ಹೊಂದಿರಲಿದ್ದಾರೆ.ಅಷ್ಟು ಮಾತ್ರ ವಲ್ಲದೆ ಆನ್‌ಲೈನ್‌ ಯಾ ಆಫ್ಲೈನ್‌ ತರಗತಿಯ ಆಯ್ಕೆಯ ಅವಕಾಶವೂ ವಿದ್ಯಾರ್ಥಿಗಳಿಗಿರಲಿದ್ದು ಬೇಡಿಕೆಗೆ ತಕ್ಕಂತೆ ಪರೀಕ್ಷೆಗಳು ನಡೆಯಲಿವೆ. ಸಮ್ಮಿಶ್ರ ಕಲಿಕೆಯಲ್ಲಿ ಆನ್‌ಲೈನ್‌ ಮತ್ತು ಆಫ್ಲೈನ್‌ ಪರೀಕ್ಷೆಗಳಿಗೂ ಒತ್ತು ನೀಡಲಾಗಿದ್ದು ಆನ್‌ಲೈನ್‌ ತರಗತಿಗಳಿಗೆ ಸಂಬಂಧಪಟ್ಟ ಸ್ವಯಂ ಕೋರ್ಸ್‌ ಗಳಿಗೆ ಆನ್‌ಲೈನ್‌ ಮೂಲಕವೇ ಪರೀಕ್ಷೆ ನಡೆಯಲಿದೆ. ಹೊಸ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ನೀಡುವು ದರಿಂದ ಅವರ ಜವಾಬ್ದಾರಿ ಶಿಕ್ಷಕರಿಗಿಂತಲೂ ಪ್ರಾಮುಖ್ಯ ವಾದುದಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲಿದೆ ಎಂಬುದು ಸಮಿತಿಯ ಅಭಿಪ್ರಾಯ. ಸದ್ಯ ಸಮಿತಿಯ ಶಿಫಾರಸುಗಳನ್ನು ಯುಜಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಹೊಸ ಬೋಧನ ವ್ಯವಸ್ಥೆಯನ್ನು ಮುಂಬರುವ ಸಾಲಿನಿಂದಲೇ ಜಾರಿಗೆ ತರುವ ಇರಾದೆ ಯುಜಿಸಿಯದ್ದಾಗಿದೆ.

ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಬೋಧನ ಕ್ರಮ, ಕಲಿಕಾ ಮತ್ತು ಪರೀಕ್ಷೆ ವ್ಯವಸ್ಥೆಯಲ್ಲಿ ಮಾರ್ಪಾಡುಗಳನ್ನು ಮಾಡಲೇಬೇಕಿದೆ. ಇದು ಭಾವೀ ಪ್ರಜೆಗಳ ಶೈಕ್ಷಣಿಕ ಭವಿಷ್ಯದ ವಿಷಯವಾದ್ದರಿಂದ ಹೊಸ ಸಾಧ್ಯತೆಗಳತ್ತ ಸರಕಾರ, ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು ಮತ್ತು ಮಕ್ಕಳ ಹೆತ್ತವರು ತುಸು ಗಂಭೀರವಾಗಿ ಚಿಂತಿಸಬೇಕಿದೆ.

ಟಾಪ್ ನ್ಯೂಸ್

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.