ಆಧಾರ್ ಕಾರ್ಡ್ ಸಂಬಧಿಸಿದಂತೆ ಹೊಸ ಸೇವೆ ಆರಂಭಿಸಿದ ಯುಐಡಿಎಐ .!
Team Udayavani, Jul 16, 2021, 9:33 PM IST
ನವ ದೆಹಲಿ : ಇಡೀ ಜಗತ್ತೇ ಇಂದು ಅಂಗೈಯೊಳಗಿದ್ದರೂ, ದೇಶದ ಹಳ್ಳಿ ಹಳ್ಳಿ ಪ್ರದೇಶಗಳಲ್ಲಿ ಇನ್ನೂ ನೆಟ್ ವರ್ಕ್ ಇನ್ನೂ ಸರಿಯಾಗಿಲ್ಲ. ಹಾಗಾಗಿ ಹಳ್ಳಿ ಪ್ರದೇಶಗಳಲ್ಲಿ ಇರುವವರಿಗೂ ಸುಲಭವಾಗಲಿ ಎಂಬ ಘನ ಉದ್ದೇಶದಿಂದ
ಯುಐಡಿಎಐ(UIDAI) ಆಧಾರ್ ಗೆ ಸಂಬಂಧಿಸಿದ ಕೆಲವು ಹೊಸ ಸೇವೆಗಳನ್ನು ಪ್ರಾರಂಭಿಸಿದ್ದು, ನಿಮ್ಮ ಮೊಬೈಲ್ ಎಸ್ ಎಂ ಎಸ್ ಮೂಲಕ ಪಡೆಯಬಹುದಾಗಿದೆ.
ಯುಐಡಿಎಐ ವೆಬ್ ಸೈಟ್ ಗೆ ಹೋಗದೆಯೂ ಅಥವಾ ಆಧಾರ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳದೆಯೂ. ಸ್ಮಾರ್ಟ್ ಫೋನ್ ಅಗತ್ಯವಿಲ್ಲದೆಯೂ, ಇಂಟರ್ ನೆಟ್ ಸೌಲಭ್ಯ ಇಲ್ಲದೆಯೂ ಈ ಸೇವೆಯನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ : ವಿಜಯಪುರದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು, ಇಬ್ಬರಿಗೆ ಗಂಭೀರ ಗಾಯ
ಆಧಾರ್‌ಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಈ ಸೌಲಭ್ಯಗಳೊಂದಿಗೆ ಪಡೆಯಬಹುದಾಗಿದೆ. ಉದಾಹರಣೆಗೆ ವರ್ಚುವಲ್ ಐಡಿ (VID) ಪಡೆಯಲು ಅಥವಾ ರೀ ಪ್ರಿಂಟ್ ಪಡೆಯಲು ಮತ್ತು ಆಧಾರ್ ಕಾರ್ಡ್ ನನ್ನು ಲಾಕ್ ಅಥವಾ ಅನ್ಲಾಕ್ ಮಾಡುವುದು, ಬಯೋಮೆಟ್ರಿಕ್ ಲಾಕಿಂಗ್ ಮತ್ತು ಅನ್ ಲಾಕಿಂಗ್ ಮಾಡಬೇಕಾದುದೆಂದರೆ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಿಂದ ಸಹಾಯವಾಣಿ ಸಂಖ್ಯೆ 1947 ಗೆ ಎಸ್ ಎಂ ಎಸ್ ಕಳುಹಿಸುವ ಮೂಲಕ ನಿಮಗೆ ಬೇಕಾದ ಯಾವುದೇ ಸೌಲಭ್ಯ ಅಥವಾ ಸೇವೆಗಳನ್ನು ನೀವು ಪಡೆಯಬಹುದಾಗಿದೆ.
ವರ್ಚುವಲ್ ಐಡಿಯನ್ನು ಕ್ರಿಯೇಟ್ ಮಾಡಲು, ಮೊಬೈಲ್‌ನ ಮೆಸೇಜ್ ಬಾಕ್ಸ್ ಗೆ ಹೋಗಿ GVID (Space) ಮತ್ತು ನಿಮ್ಮ ಆಧಾರ್ ನಂಬರ್ ನ ಕೊನೆಯ 4 ಸಂಖ್ಯೆಗಳನ್ನು ನಮೂದಿಸಿ ಹಾಗೂ ಅದನ್ನು 1947 ಸಂಖ್ಯೆಗೆ ಎಸ್ ಎಮ್ ಎಸ್ ಮಾಡಿ.
– ವಿಐಡಿ ಪಡೆಯಲು RVID (ಸ್ಪೇಸ್) ಎಂದು ಟೈಪ್ ಮಾಡಿ ಮತ್ತು ನಿಮ್ಮ ಆಧಾರ್ ನ ಕೊನೆಯ ನಾಲ್ಕು ಸಂಖ್ಯೆಗಳನ್ನ ನಮೂದಿಸಿ.
– ಒಟಿಪಿಯನ್ನು ಎರಡು ರೀತಿಯಲ್ಲಿ ಪಡೆಯಬಹುದು. ಒಂದು ನಿಮ್ಮ ಆಧಾರ್ ಸಂಖ್ಯೆಯ ಮೂಲಕ, ಎರಡನೆಯದು ನಿಮ್ಮ ವಿಐಡಿ ಮೂಲಕ.
– ಆಧಾರ್ ನಿಂದ ಒಟಿಪಿ ಪ್ರಕಾರ – GETOTP (ಸ್ಪೇಸ್) ಮತ್ತು ನಿಮ್ಮ ಆಧಾರ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನ ನಮೂದಿಸಿ.
– ವಿಐಡಿ ಟು ಒಟಿಪಿ ಪ್ರಕಾರಕ್ಕಾಗಿ – GETOTP (ಸ್ಪೇಸ್) ಮತ್ತು ನಿಮ್ಮ ಅಧಿಕೃತ ವರ್ಚುವಲ್ ಐಡಿಯ ಕೊನೆಯ 6 ಸಂಖ್ಯೆಗಳನ್ನ SMS ನಲ್ಲಿ ನಮೂದಿಸಿ
ಇನ್ನು, ಈ ಸೌಲಭ್ಯದ ಮೂಲಕ ಆಧಾರ್ ಕಾರ್ಡ್ ನನ್ನು ಲಾಕ್ ಹಾಗೂ ಅನ್ ಲಾಕ್ ಕೂಡ ಮಾಡಬಹುದಾಗಿದೆ.
ಇದನ್ನೂ ಓದಿ : ಕಂಬಳದ `ಉಸೇನ್ ಬೋಲ್ಟ್ ‘ ಶ್ರೀನಿವಾಸ ಗೌಡರ ನಿಂದನೆಗೆ ವ್ಯಾಪಕ ಖಂಡನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.