ಉಜಿರೆ ಎಸ್‌ಡಿಎಂ ಕಾಲೇಜು: ನೌಕಾ ವಿಭಾಗದ 6 ಕೆಡೆಟ್‌ಗಳಿಗೆ ಚಿನ್ನದ ಪದಕ
Team Udayavani, Feb 19, 2023, 8:10 AM IST
ಬೆಳ್ತಂಗಡಿ: ಹೊಸದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ನೌಕಾ ವಿಭಾಗದ 6 ಕೆಡೆಟ್‌ಗಳು ಶಿಪ್ ಮಾಡೆಲಿಂಗ್ ವಿಭಾಗದಲ್ಲಿ ಬಂಗಾರದ ಪದಕ ಗಳಿಸಿದ್ದಾರೆ.
ದೇಶದ 17 ಡೈರೆಕ್ಟರೇಟ್‌ನವರು ಸಿದ್ಧಪಡಿಸಿ ಪರೀಕ್ಷೆಗೊಳಪಡಿಸಿದ ಪವರ್ ಮಾಡೆಲ್ ವಿಭಾಗದಲ್ಲಿ ಪಿಒ ಕೆಡೆಟ್‌ಗಳಾದ ಶ್ರೀರಾಮ ಮರಾಠೆ ಮತ್ತು ಅನನ್ಯಾ ಕೆ.ಪಿ. ಸಿದ್ಧಪಡಿಸಿದ ಮಾಡೆಲ್ ಅತ್ಯುತ್ತಮ ಎಂದು ಪರಿಗಣಿಸಿ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿದೆ.
ವಿಐಪಿ ಮಾಡೆಲ್‌ನಲ್ಲಿ ಖುಶಿ ಎಂ., ರಾಘವೇಂದ್ರ ಹಾಗೂ ಯುನೀತ್ ಸಿದ್ಧಪಡಿಸಿದ ಮಾಡೆಲ್ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನಲ್ಲಿ ಆಯ್ಕೆಯಾಗಿ ದಿಲ್ಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಖುಶಿ ಎಂ. ಸಿದ್ಧಪಡಿಸಿದ ಮಾಡೆಲ್‌ಗೆ ವಿಶಾಖಪಟ್ಟಣದಲ್ಲಿ ನಡೆದ ಅ. ಭಾ. ನೌ ಸೈನಿಕ್ ಶಿಬಿರದಲ್ಲಿ ಬಂಗಾರದ ಪದಕ ಬಂದಿದೆ.
ಶಿಪ್ ಮಾಡೆಲಿಂಗ್ ವಿಭಾಗದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟನ್ನು ಪ್ರತಿನಿಧಿಸಿ ಪದಕ ಗೆದ್ದ 9 ಕೆಡೆಟ್‌ಗಳಲ್ಲಿ 6 ಮಂದಿ ಉಜಿರೆ ಎಸ್‌ಡಿಎಂ ಕಾಲೇಜಿನವರೆಂಬುದು ವಿಶೇಷ.
ಕಾಲೇಜಿನ ನೇವಿ ಕೆಡೆಟ್‌ಗಳಾದ ಹೇಮಂತ್ ಎಂ.ಜಿ. ಮತ್ತು ಮಹಮ್ಮದ್ ನವಾಜ್ ಅವರು ಪ್ರಧಾನಮಂತ್ರಿಗಳ ಮತ್ತು ವಿಐಪಿಗಳ ಗಾಡ್ ಆಫ್ ಆನರ್‌ನಲ್ಲಿ ಭಾಗವಹಿಸಿದ್ದರು. ಈ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ 7 ಕೆಡೆಟ್‌ಗಳಲ್ಲಿ ಮೂವರು ಉಜಿರೆ ಕಾಲೇಜಿನವರಾಗಿದ್ದರು.
ಪ್ರಶಂಸಾ ಪತ್ರದ ಗೌರವ
ಈ ಎಲ್ಲರ ವಿಶೇಷ ಸಾಧನೆಯನ್ನು ಗಮನಿಸಿ ಬೆಂಗಳೂರಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಡೆಪ್ಯೂಟಿ ಡೈರೆಕ್ಟರ್ ಜನರಲ್(ಡಿಡಿಜಿ) ಏರ್ ಕಮಾಡೋರ್ ಬಿ.ಎಸ್. ಕನ್ವರ್ ಅವರು ಡಿಡಿಜಿ ಕಮಂಡೇಶನ್ (ಪ್ರಶಂಸಾ ಪತ್ರ) ನೀಡಿ ಗೌರವಿಸಿದರು.
ಎಸ್‌ಡಿಎಂ ಕಾಲೇಜಿನ ಎನ್‌ಸಿಸಿ ನೌಕಾವಿಭಾಗದ ಅಧಿಕಾರಿ ಅಸೋಸಿಯೇಟೆಡ್ ಎನ್‌ಸಿಸಿ ಆಫೀಸರ್ ಲೆಫ್ಟಿನೆಂಟ್ ಕಮಾಂಡರ್ ಶ್ರೀಧರ ಭಟ್ ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹಿರಿಯ ಎನ್‌ಸಿಸಿ ಕೆಡೆಟ್‌ಗಳಾದ ಅಖಿಲೇಶ್ ಸುವರ್ಣ ಮತ್ತು ಶ್ಯಾಮಪ್ರಸಾದ್ ಎಚ್.ಪಿ. ಅವರು ಕೆಡೆಟ್‌ಗಳಿಗೆ ವಿಶೇಷ ತರಬೇತಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.