![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Dec 6, 2023, 12:50 AM IST
ಬ್ರಿಟನ್‌ನಲ್ಲಿ ವಲಸಿಗರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದನ್ನು ಕಡಿತಗೊಳಿಸುವ ಅನಿವಾರ್ಯತೆಗೆ ಯುಕೆ ಪ್ರಧಾನಿ ರಿಷಿ ಸುನಕ್ ಸಿಲುಕಿದ್ದಾರೆ. ಕಾನೂನಾತ್ಮಕವಾಗಿ ಬರುವ ವಲಸಿಗರ ಸಂಖ್ಯೆಗೂ ಕಡಿವಾಣ ಹಾಕಬೇಕಾಗಿದ್ದು, ಅದಕ್ಕಾಗಿ ಸುನಕ್ ಘೋಷಿಸಿರುವ ಕ್ರಮಗಳು ಮತ್ತು ಅವುಗಳಿಂದ ವಲಸಿಗರ ಮೇಲಾಗುವ ಪರಿಣಾಮಗಳು ಇಂತಿವೆ.
ವೇತನ ಮಿತಿ ಹೆಚ್ಚಳ
ಯುಕೆ ವೀಸಾವನ್ನು ಬಯಸುವ ಕೌಶಲಯುತ ವಿದೇಶಿ ಉದ್ಯೋಗಿಗಳು ಈವರೆಗೆ 27.59 ಲಕ್ಷ ರೂ.ಗಳನ್ನು ಗಳಿಸಿದರೆ ಸಾಕಿತ್ತು. ಆದರೆ ಇನ್ನು ಮುಂದೆ ಅವರು 40.74 ಲಕ್ಷ ರೂ. ಆದಾಯ ಹೊಂದಿರಬೇಕು. ಸಿಬಂದಿಯ ಕೊರತೆ ಎದುರಿಸುತ್ತಿರುವ ಆರೋಗ್ಯ, ಸಮಾಜ ಸೇವಾ ಕ್ಷೇತ್ರದ ಉದ್ಯೋಗಿಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಆದರೆ ಅವರು ತಮ್ಮ ಕುಟುಂಬದ ಅವಲಂಬಿತರನ್ನು ಕರೆತರುವಂತಿಲ್ಲ. ಹಾಗೆಯೇ, ಕೌಟುಂಬಿಕ ವೀಸಾಕ್ಕಿದ್ದ ಕನಿಷ್ಠ ಆದಾಯದ ಮಿತಿಯನ್ನು ಹೆಚ್ಚಳ ಮಾಡಲಾಗಿದೆ.
ಆರೋಗ್ಯ ಮತ್ತು ಆರೈಕೆ ವೀಸಾಗೂ ಮಿತಿ
ಜನಪ್ರಿಯ ಹೆಲ್ತ್ ಆ್ಯಂಡ್ ಕೇರ್ ವೀಸಾ ಪಡೆಯುವವರಿಗೆ ಹೊಸ ನಿರ್ಬಂಧಗಳನ್ನು ಹೇರಲಾಗಿದೆ. ಬೇರೆ ದೇಶಗಳಿಂದ ಈ ವೀಸಾದಲ್ಲಿ ಬರುವವರು ತಮ್ಮ ಕುಟುಂಬದ ಅವಲಂಬಿತರನ್ನು ತಮ್ಮೊಂದಿಗೆ ಯುಕೆಗೆ ಕರೆತರುವಂತಿಲ್ಲ. ಜತೆಗೆ ವಿದೇಶದ ಕಾರ್ಮಿಕರಿಗೆ ವೀಸಾ ಒದಗಿಸುವವರಿಗೂ ಮಿತಿ ಹೇರಲಾಗಿದೆ.
ಸರ್‌ಚಾರ್ಜ್ ಹೆಚ್ಚಳ
ರಾಷ್ಟ್ರೀಯ ಆರೋಗ್ಯ ಸೇವೆ(ಎನ್‌ಎಚ್‌ಎಸ್) ಪಡೆಯಲು ವಲಸಿಗರು ಪಾವತಿಸುತ್ತಿದ್ದ ಸರ್‌ಚಾರ್ಜ್ ಅನ್ನು ಶೇ.66ರಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ವಲಸಿಗರು 1.08 ಲಕ್ಷ ರೂ. ಪಾವತಿಸಬೇಕು.
ವಿದ್ಯಾರ್ಥಿಗಳ ಅವಲಂಬಿತರಿಗೂ ನಿರ್ಬಂಧ
ಸೆಪ್ಟಂಬರ್ 30ರ ವರೆಗಿನ ಒಂದು ವರ್ಷದಲ್ಲಿ ವಿದೇಶಿ ವಿದ್ಯಾರ್ಥಿಗಳ ಜತೆ ಬರುವ ಅವಲಂಬಿತರಿಗೆಂದೇ 1.53 ಲಕ್ಷ ವೀಸಾಗಳನ್ನು ವಿತರಿಸಲಾಗಿದೆ. ಹೀಗಾಗಿ ಅವಲಂಬಿತರೊಂದಿಗೆ ಯುಕೆಗೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆ ತಗ್ಗಿಸುವ ನಿಟ್ಟಿನಲ್ಲೂ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.