ಕೊಡೆಗಳು ಸಾರ್‌ ಕೊಡೆಗಳು…

Team Udayavani, May 27, 2020, 4:56 AM IST

kud gita

ಕೆಲವೊಮ್ಮೆ ಕೊಡೆಯ ಬಟ್ಟೆಯನ್ನು ಹೆಗ್ಗಣಗಳು, ಯಾವುದೋ ಜನ್ಮದ ದ್ವೇಷ ತೀರಿಸುವಂತೆ ತುಂಡು ತುಂಡು ಮಾಡುತ್ತಿದ್ದವು. ಜಿರಳೆ, ಇರುವೆಗಳು ಕೊರೆದ ತೂತುಗಳಲ್ಲಿ ಆಕಾಶದ ನಕ್ಷತ್ರ ಮಂಡಲ ಕಾಣುತ್ತಿತ್ತು.

ಮಳೆಗಾಲ ಹತ್ತಿರ ಬರುತ್ತಿದೆ. ಮನೆಯಲ್ಲಿರುವ ಹಳೆಯ ಕೊಡೆಗಳು ಸುಸ್ಥಿತಿಯಲ್ಲಿವೆಯಾ ನೋಡಬೇಕು. ಆದರೆ, ಕೊರೊನಾದಿಂದಾಗಿ ಹೊರಗಿನ ಓಡಾಟವೇ ಕಡಿಮೆಯಾಗಿದೆ. ಮನೆಯೇ ಆಫೀಸಾಗಿದೆ. ಮಕ್ಕಳೂ ಶಾಲೆಗೆ ಹೋಗುತ್ತಿಲ್ಲ.  ದೇವಸ್ಥಾನಕ್ಕೆ ಹೋಗೋಣ ಎಂದರೆ, ಅದೂ ಬಾಗಿಲು ಹಾಕಿದೆ. ಶಾಪಿಂಗಿಗೆ ಮಾಲ್‌ಗ‌ಳು ತೆರೆದಿಲ್ಲ. ತರಕಾರಿ, ಹಾಲು, ಹಣ್ಣು ಎಂದು ತಿರುಗಾಡಲು ಕೊಡೆ ಬೇಕಾಗಬಹುದು, ಅಷ್ಟೇ. ನಾನು ಹುಟ್ಟಿ ಬೆಳೆದ ಕರಾವಳಿಯಲ್ಲಿ ವರ್ಷದಲ್ಲಿ  300 ದಿನವಾದರೂ ಕೊಡೆ ಜೊತೆಗಿರಬೇಕಿತ್ತು. ಒಂದೋ ವಿಪರೀತ ಮಳೆ, ಇಲ್ಲವಾದರೆ ತಲೆ ಸುಡುವ ಬಿಸಿಲು. ಎರಡಕ್ಕೂ ಕೊಡೆಯ ಆಸರೆ ಬೇಕು.

ಹಾಗಾಗಿ, ಮನೆಯಲ್ಲಿ ನಾಲ್ಕು ಜನರಿದ್ದರೆ, ನಾಲ್ಕು ಕೊಡೆ ಬೇಕು. ಹಿರಿಯರಿಗೆ ದೊಡ್ಡ ಮರದ ಹಿಡಿಯ ಕೊಡೆ, ಉಳಿದವರಿಗೆ  ಮಧ್ಯಮ, ಚಿಕ್ಕ ಗಾತ್ರದ ಕೊಡೆಗಳು, ಹಳತಾದ ಕೊಡೆ, ಮನೆ ಕೆಲಸದವಳ ಕೈ ಸೇರುತ್ತಿತ್ತು. ಕೊಡೆಯೆಂದ ಕೂಡಲೇ ಬಾಲ್ಯದ ಕಪ್ಪು ಕೊಡೆ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ. ಬೇಸಿಗೆ ರಜಾ  ಮುಗಿದು,  ಮಳೆಯ ಒಂದೆರಡು ಹನಿ ಬೀಳುತ್ತಿದ್ದಂತೆ, ಮೂಲೆ ಸೇರಿದ ಕೊಡೆಗಳು ಹೊರಗೆ ಬರುತ್ತಿದ್ದವು. ಅದು ಕೊಡೆ ದುರಸ್ತಿಯ ಸಮಯ. ಹರಿದ ಬಟ್ಟೆ, ಬಗ್ಗಿದ ಕಡ್ಡಿ, ಕಡ್ಡಿಗೆ ಸಿಕ್ಕಿಕೊಳ್ಳದೆ ಸ್ವತಂತ್ರವಾಗಿ ಹಾರಾಡುವ ಬಟ್ಟೆ ಎಲ್ಲವನ್ನೂ ಸರಿ ಮಾಡಬೇಕಿತ್ತು.

ಆ ಸಮಯದಲ್ಲಿ, ಕೊಡೆ ರಿಪೇರಿ ಮಾಡುವವನಿಗೂ ಡಿಮ್ಯಾಂಡು. ಕೊಡೆಗೆ ಶತ್ರುಗಳು ಇಲ್ಲದಿಲ್ಲ. ಕೆಲವೊಮ್ಮೆ ಕೊಡೆಯ ಬಟ್ಟೆಯನ್ನು ಹೆಗ್ಗಣಗಳು, ಯಾವುದೋ ಜನ್ಮದ ದ್ವೇಷ ತೀರಿಸುವಂತೆ ತುಂಡು ತುಂಡು  ಮಾಡುತ್ತಿದ್ದವು. ಜಿರಳೆ, ಇರುವೆಗಳು ಕೊರೆದ ತೂತುಗಳಲ್ಲಿ ಆಕಾಶದ ನಕ್ಷತ್ರ ಮಂಡಲ ಕಾಣುತ್ತಿತ್ತು. ಕೊಡೆಯ ಕಳ್ಳತನವಾಗದಂತೆ ನೋಡಿಕೊಳ್ಳುವುದೇ ಬಹುದೊಡ್ಡ ಕಷ್ಟವಾಗುತ್ತಿತ್ತು. ಒದ್ದೆ ಕೊಡೆಯನ್ನು ಕ್ಲಾಸಿನ ಹೊರಗೆ ಇಟ್ಟು  ಒಳಗೆ ಬಂದರೆ, ಸಂಜೆ ಬರುವಾಗ ಅದು ಮಾಯವಾಗಿರುತ್ತಿತ್ತು. ಅಂಗಡಿ, ದೇವಸ್ಥಾನಕ್ಕೆ  ಹೋದಾಗಲೂ ಅಷ್ಟೇ; ಒದ್ದೆ ಕೊಡೆಗಳನ್ನು ಒಳಗೆ ಒಯ್ಯುವಂತಿಲ್ಲ,

ಹೊರಗಿಟ್ಟರೆ, ಅವು ವಾಪಸ್‌ ಸಿಗುವ ಗ್ಯಾರಂಟಿ ಇಲ್ಲ. ಕೊಡೆಯ ಕಳ್ಳತನ  ತಪ್ಪಿಸಲು, ಕೊಡೆಯ ಮೇಲೆ ಹೆಸರನ್ನು ಹೊಲಿಯುತ್ತಿದ್ದೆವು. ಈ ಮೂರು- ನಾಲ್ಕು  ದಶಕಗಳಲ್ಲಿ ಕೊಡೆಯಲ್ಲೂ ಎಷ್ಟೊಂದು ಬದಲಾವಣೆಗಳು! ಬಾಲ್ಯದ ದಿನಗಳನ್ನು ನೆನೆಸಿಕೊಂಡರೆ ಕೊಡೆ ಇಲ್ಲದೆ ಗೋಣಿ ಚೀಲ ಹೊದ್ದು ಶಾಲೆಗೆ  ಬರುವವರೂ ಇದ್ದರು. ಓಲಿ ಕೊಡೆ ತರುತ್ತಿದ್ದವರೂ ಇದ್ದರು  (ಕೇದಿಗೆ ಗಿಡದ ಉದ್ದದ ಎಲೆ ಮತ್ತು ಬಿದಿರು ಸೇರಿಸಿ ಮಾಡಿದ ಕೊಡೆ ಅದು, ಮಡಚಲಾಗುವುದಿಲ್ಲ) ಕ್ರಮೇಣ ಆ ಕೊಡೆ ಕಣ್ಮರೆಯಾಯಿತು. ಕಬ್ಬಿಣ ಮತ್ತು ಮರದ ಜಲ್ಲಿನ  ಬಟ್ಟೆಯ ಕೊಡೆಗಳು ಸಾಕಷ್ಟು ಮೆರೆದಾಡಿದವು.

ಕಾಲಿಗೆ ಚಪ್ಪಲಿ ಇಲ್ಲದಿದ್ದರೂ ಗಂಡಸರಿಗೆ ಕೈಯಲ್ಲಿ ಕೊಡೆ ಬೇಕಿತ್ತು. ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಡುವಾಗ ಬಳುವಳಿ ಯಾಗಿ ಕೊಡೆಯನ್ನೂ ಕೊಡುತ್ತಿದ್ದರು. ನಂತರ, ಮಡಚಿದರೆ ಒಂದು ಅಡಿಯಷ್ಟು ಉದ್ದವಾಗುವ ನೈಲಾನ್‌ ಬಟ್ಟೆಯ ಕೊಡೆ ಬಂತು. ಅದಕ್ಕೊಂದು ಬಟನ್‌ ಬೇರೆ, ಬಟನ್‌ ಒತ್ತಿದರೆ ಸಾಕು, ತಟ್ಟಂತ ಹರಡಿಕೊಳ್ಳುತ್ತಿತ್ತು. ಕೊಡೆಗಳಗೆ ನೈಲಾನ್‌ ಬಟ್ಟೆ ಬರುತ್ತಿದ್ದಂತೆ ಕೊಡೆಯ ಬಣ್ಣ  ಬದಲಾಯಿತು. ಬಣ್ಣದ ಕೊಡೆಗಳಲ್ಲಿ ಚಿತ್ರಗಳೂ ಮೂಡಿದವು. ಕೆಲವೇ ವರ್ಷಗಳಲ್ಲಿ ಕೊಡೆ ಇನ್ನೂ ಚಿಕ್ಕದಾಯಿತು. ಮಡಚಿದರೆ ಅರ್ಧ ಅಡಿಯೂ ಇಲ್ಲ, ಸುಲಭದಲ್ಲಿ ಅದನ್ನು ಬ್ಯಾಗಿನಲ್ಲಿ ಇಟ್ಟುಕೊಳ್ಳಬಹುದು.

ಅಷ್ಟರಲ್ಲಿ, ಜನರ  ಆರ್ಥಿಕ ಸ್ಥಿತಿ ಉತ್ತಮವಾಯಿತೋ ಏನೋ ಕೊಡೆ ಕಳ್ಳತನವಾಗುವುದು ನಿಂತು ಹೋಯಿತು. ಕೊಡೆಯಲ್ಲೂ ಫ್ಯಾಷನ್‌ ಬಂತು, ಫ್ಯಾಷನ್ನಿ ಗಾಗಿ ಕೊಡೆ ಹಿಡಿವ ಕಾಲವೂ ಬಂತು. ಪಾರದರ್ಶಕ ಕೊಡೆಗಳು, ಬಿಳಿ ಕೊಡೆಗಳು, ಕುಟುಂಬದವರೆಲ್ಲಾ ಹಿಡಿಸುವಷ್ಟು ದೊಡ್ಡ ಕೊಡೆ,  ಟೊಪ್ಪಿಗೆ ಅಂಟಿಕೊಂಡಿರುವ ಪುಟ್ಟ ಕೊಡೆ… ಇಷ್ಟೆಲ್ಲಾ ಬಗೆ ಇದ್ದರೂ ಈಗ ಕೊಡೆ ಅಪರೂಪವಾಗುತ್ತಿದೆ. ಎಲ್ಲರೂ ಎರಡು, ನಾಲ್ಕು, ಆರು ಚಕ್ರದ ವಾಹನಗಳಲ್ಲೇ ತಿರುಗಾಡುವಾಗ ಕೊಡೆಯ ಹಂಗಾದರೂ ಯಾಕೆ ಬೇಕು?

* ಗೀತಾ ಕುಂದಾಪುರ

ಟಾಪ್ ನ್ಯೂಸ್

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.