ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!
Team Udayavani, Apr 16, 2024, 6:45 AM IST
ಪುತ್ತೂರು: ಧಗ ಧಗಿಸುತ್ತಿರುವ ಬೇಸಗೆಬಿಸಿಗೆ ಎಳೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಿಗೆ ಸೀಮಿತ ವಾಗಿದ್ದ ದೀರ್ಘ ರಜಾ ಅವಧಿಯನ್ನು ಎಲ್ಲ ಜಿಲ್ಲೆ ಗಳಿಗೂ ಅನ್ವಯಿಸಲಾಗಿದೆ.
ಅಂಗನವಾಡಿ ಕೇಂದ್ರಗಳಿಗೆ ಇದೇ ಮೊದಲ ಬಾರಿಗೆ ಗರಿಷ್ಠ ರಜೆ ಘೋಷಿಸಲಾಗಿದೆ. ಹೀಗಾಗಿ ಬಿಸಿಲಿನ ಧಗೆಯಲ್ಲಿ ಮಕ್ಕಳು ಅಂಗವಾಡಿಗೆ ಹೋಗಿಬರುವ ಸಂಕಷ್ಟದಿಂದ ಪಾರಾಗಿದ್ದಾರೆ.
ರಜೆ ಆರಂಭ
ಪ್ರತೀ ವರ್ಷದಂತೆ ಈ ಬಾರಿಯು 15 ದಿನಗಳ ಅವಧಿಗೆ ಅಂಗನವಾಡಿಗಳಿಗೆ ರಜೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಪುಟಾಣಿಗಳ ಹಿತದೃಷ್ಟಿಯಿಂದ ಸಮಯ ಪರಿಷ್ಕರಿಸಿ ಎ. 15ರಿಂದ ಮೇ 26ರ ತನಕ ಬೇಸಗೆ ರಜೆ ಘೋಷಿಸಲಾಗಿದೆ. ಅಂದರೆ ಒಟ್ಟು 41 ದಿನಗಳರಜೆ ದೊರೆತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ರಿಗೆ ಎ. 15ರಿಂದ ಮೇ 11ರ ತನಕ 8ರಿಂದ ಮಧ್ಯಾಹ್ನ 12 ಗಂಟೆ ತನಕ ಕೇಂದ್ರಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದ್ದು ಮೇ 11 ರಿಂದ 26 ರ ತನಕ ಅಂಗನವಾಡಿ ಸಿಬಂದಿ ಗಳಿಗೆ ರಜೆ ಘೋಷಿಸಲಾಗಿದೆ.
ಬಿಸಿಲ ಝಳ
ಈ ಬಾರಿ ವಯಸ್ಕರಿಗೆ ಬಿಸಿಲಿನ ಝಳ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತಹವು ದರಲ್ಲಿ ಪುಟಾಣಿಗಳು ಅಂಗನವಾಡಿಗೆಗಳಿಗೆ ಹೋಗಿ ಬರಬೇಕಾದ ಪರಿಸ್ಥಿತಿ ತೀರಾ ಕಷ್ಟಕರವಾದದು. ಹೀಗಾಗಿ ಕೆಲವು ಜಿಲ್ಲೆಗಳ ಅಂಗನವಾಡಿ ಕಾರ್ಯ ಕರ್ತೆ ಯರ ಮತ್ತು ಸಹಾ ಯಕಿ ಯರ ಸಂಘಟನೆಗಳ ದೀರ್ಘ ರಜೆ ನೀಡು ವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕಾರ್ಯನಿರ್ವಹಣ ಸಮಯ ಪರಿಷ್ಕರಿಸಲಾಗಿತ್ತು. ಉಳಿದ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಬೇಕು ಎನ್ನುವ ಬೇಡಿಕೆಗೆ ಇಲಾಖೆ ಅಸ್ತು ನೀಡಿದೆ. ಏರುತ್ತಿರುವ ತಾಪಮಾನದ ಜತೆಗೆ ಲೋಕಸಭಾ ಚುನಾವಣೆಯಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಕೆಲಸ ನಿರ್ವಹಣೆ ಇರುವುದು, ಅಂಗನವಾಡಿ ಕೇಂದ್ರಗಳನ್ನು ಮತಗಟ್ಟೆಗಳನ್ನಾಗಿ ಗುರುತಿಸಿರುವುದು ಕೂಡ ರಜೆ ಪರಿಷ್ಕರಣೆಗೆ ಕಾರಣಗಳಲ್ಲಿ ಒಂದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪೌಷ್ಟಿಕ ಆಹಾರ ವಿತರಣೆಗೆ ಸೂಚನೆ
ರಜಾ ಅವಧಿಯಲ್ಲಿ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನಿಯಮ ಅನುಸಾರ ಆಹಾರ ಪೂರೈಕೆ ಮಾಡಬೇಕು. ಪೂರಕ ಪೌಷ್ಟಿಕ ಆಹಾರ ವಿತರಣೆಯಲ್ಲಿ ಯಾವುದೇ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಬಿಸಿಲಿನ ತೀವ್ರತೆ, ಚುನಾವಣ ಕಾರಣಗಳಿಂದ ಈ ಬಾರಿ ಎ. 15ರಿಂದ ಮೇ 26ರ ತನಕ ಅಂಗನವಾಡಿ ಮಕ್ಕಳಿಗೆ ವಿಶೇಷ ರಜೆ ನೀಡಲಾಗಿದೆ. ಇದರಲ್ಲಿ ಮೇ 15ರಿಂದ 26ರ ತನಕ ಬೇಸಗೆ ರಜೆಯು ಸೇರಿದೆ. ಆಹಾರವನ್ನು ಮಕ್ಕಳ ಮನೆಗೆ ನೀಡಲಾಗುತ್ತದೆ. ಇಷ್ಟು ದೀರ್ಘ ರಜೆ ನೀಡಿರುವುದು ಇದೇ ಮೊದಲು.
– ಕುಮಾರಕೃಷ್ಣ, ಮಕ್ಕಳ ರಕ್ಷಣ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲೆ
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.