ಅಭಿವೃದ್ಧಿ ಕಾಣದ ಕೊರುಂದೂರು-ಮಜ್ಜಗುಡ್ಡೆ ರಸ್ತೆ
ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದರೂ ಫಲವಿಲ್ಲ
Team Udayavani, Jul 10, 2020, 6:24 AM IST
ವಿಶೇಷ ವರದಿ- ಕಡಬ: ಪೇಟೆಯಿಂದ ಕೊರುಂದೂರು – ಮಜ್ಜಗುಡ್ಡೆ-ಮೂರಾಜೆ ಪ್ರದೇಶಕ್ಕೆ ನೇರ ಸಂಪರ್ಕ ಇರುವ ಕಚ್ಛಾ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಇದುವರೆಗೂ ಮನ್ನಣೆ ಸಿಕ್ಕಿಲ್ಲ. ದಿನಂಪ್ರತಿ ನೂರಾರು ಮಂದಿ ಸಂಚರಿಸುವ ಈ ರಸ್ತೆಗೆ ಕಾಂಕ್ರೀಟ್ ಹಾಸಿ ಅಭಿವೃದ್ಧಿಪಡಿಸಬೇಕೆಂದು ಪ್ರಧಾನಿ ಕಚೇರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ.
ಸುಮಾರು 15ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳು ವಾಸ್ತವ್ಯವಿರುವ ಮಜ್ಜಗುಡ್ಡೆ ಕಾಲನಿಗೆ ನೇರ ಸಂಪರ್ಕವಾಗಿರುವ ಈ 1 ಕಿ.ಮೀ. ಉದ್ದದ ಮಣ್ಣಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆ ಗಾಲದಲ್ಲಿ ವಾಹನ ಸಂಚಾರ ಮಾತ್ರವಲ್ಲ ಜನರು ನಡೆದು ಹೋಗಲೂ ಸಾಧ್ಯ ವಿಲ್ಲದಂತಿದೆ.
ಪರಿಸರದ ಸುಮಾರು 200ರಿಂದ 230 ಮನೆಗಳ ಜನರು ಇದೇ ರಸ್ತೆಯನ್ನು ಅವಲಂಭಿಸಿ ದ್ದಾರೆ. ಕೊರುಂದೂರು ಅಂಗನವಾಡಿ ಕೇಂದ್ರ, ಸರಸ್ವತೀ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಹತ್ತಿರದ ದಾರಿಯಾಗಿರುವ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಕಡಬ ಗ್ರಾಮ ಪಂಚಾಯತ್‌ನ ಪ್ರತಿ ಗ್ರಾಮಸಭೆಗಳಲ್ಲಿ ಸಾರ್ವಜನಿಕರು ಬೇಡಿಕೆ ಇಡುತ್ತಲೇ ಬಂದಿದ್ದಾರೆ.
ಪ್ರಧಾನಿಗೆ ಪತ್ರ
ಬರೆದರೂ ಫಲವಿಲ್ಲ
ಸ್ಥಳೀಯ ರಾಜಕಾರಣಿಗಳು ಗ್ರಾಮಸ್ಥರ ಬೇಡಿಕೆಗೆ ಮನ್ನಣೆ ನೀಡದೇ ಇದ್ದಾಗ ರಸ್ತೆಯ ಫಲಾನುಭವಿ ಗಿರೀಶ್ ಗೌಡ ಕೊರುಂದೂರು ಅವರು ಗ್ರಾಮಸ್ಥರ ಸಹಿಯೊಂದಿಗೆ 6 ತಿಂಗಳುಗಳ ಹಿಂದೆ ನೇರವಾಗಿ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದು ರಸ್ತೆಯನ್ನು ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಬಳಿಕ ದೇಶದೆಲ್ಲೆಡೆ ಕೋವಿಡ್ ಬಾಧಿಸಿದ ಕಾರಣದಿಂದಾಗಿ ಆ ಪತ್ರಕ್ಕೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಕಾಯಕಲ್ಪ ದೊರೆಯಬಹುದೆ?
ಇದೀಗ ಕಡಬ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದೆ. ಇನ್ನಾದರೂ ಈ ರಸ್ತೆಗೆ ಕಾಯಕಲ್ಪ ದೊರೆಯಬಹುದೇ ಎನ್ನುವುದು ಸ್ಥಳೀಯ ಜನರ ಆಶಯವಾಗಿದೆ.
ಬೇಡಿಕೆ ಈಡೇರಲಿ
ಈ ರಸ್ತೆಯನ್ನು ಉಪ ಯೋಗಿಸುವ ಯಾವುದೇ ಜನ ಪ್ರತಿನಿಧಿ ಇಲ್ಲದಿರುವುದು ನಮ್ಮ ಬೇಡಿಕೆ ಇದುವರೆಗೆ ಈಡೇರದಿರಲು ಕಾರಣ. ರಾತ್ರಿ ನಡೆದು ಹೋಗುವ ಜನ ರಿಗೆ ಅನುಕೂಲವಾಗುವಂತೆ ಬೀದಿ ದೀಪವನ್ನೂ ಈ ರಸ್ತೆಗೆ ಅಳವಡಿಸಿಲ್ಲ. ಪ.ಪಂ. ವ್ಯವಸ್ಥೆಯಲ್ಲಾದರೂ ನಮ್ಮ ಬೇಡಿಕೆ ಈಡೇರಲಿ ಎಂಬುದು ಸ್ಥಳೀಯ ಮುಖಂಡ ಗಿರೀಶ್ ಗೌಡ ಕೊರುಂದೂರು ಅವರ ಅಭಿಪ್ರಾಯ.
ಆದ್ಯತೆ ಮೇರೆಗೆ ಅಭಿವೃದ್ಧಿ
ಕಡಬ ಈಗಾಗಲೇ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದು, ಕಡಬ ಮತ್ತು ಕೋಡಿಂಬಾಳ ಗ್ರಾಮಗಳ ಮೂಲ ಸೌಕರ್ಯಗಳಿಗಾಗಿ ವಿಶೇಷ ಅನುದಾನಗಳು ಲಭಿಸಲಿವೆ. ಆ ಸಂದರ್ಭದಲ್ಲಿ ಆದ್ಯತೆಯ ಮೇಲೆ ಕೊರುಂದೂರು-ಮಜ್ಜಗುಡ್ಡೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು.
-ಅರುಣ್ ಕೆ., ಮುಖ್ಯಾಧಿಕಾರಿ,
ಕಡಬ ಪಟ್ಟಣ ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.