ಮರೆಯಲಾಗದ ಹಾಡು-ದಿಲೀಪ್‌ ಕುಮಾರ್‌


Team Udayavani, Jul 8, 2021, 2:45 AM IST

ಮರೆಯಲಾಗದ ಹಾಡು-ದಿಲೀಪ್‌ ಕುಮಾರ್‌

ಭಾರತೀಯ ಚಿತ್ರರಂಗದ ಇತಿಹಾಸ ಬರೆಯುವಾಗಲೆಲ್ಲಾ ದಿಲೀಪ್‌ ಕುಮಾರ್‌ಗೂ ಮೊದಲು, ದಿಲೀಪ್‌ ಕುಮಾರ್‌ ಅವರ ಅನಂತರ ಎಂದೇ ಬರೆಯಲಾಗುತ್ತದೆ. ಅಂಥ ದೊಡ್ಡ ಜೀವವನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ…

ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ ದಿಲೀಪ್‌ ಕುಮಾರ್‌ ಅವರಿಗೆ ಭಾರತದಲ್ಲಿ ಮಾತ್ರವಲ್ಲ. ಪಾಕಿಸ್ಥಾನವೂ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಅಭಿಮಾನಿಗಳಿದ್ದಾರೆ. ಮುಹಮ್ಮದ್‌ ಯೂಸುಫ್ ಖಾನ್‌ ಎಂಬ ಯುವಕ ದಿಲೀಪ್‌ ಕುಮಾರ್‌ ಎಂದು ಹೆಸರು ಬದಲಿಸಿಕೊಂಡಿದ್ದು, ಚಿತ್ರಕಥೆಗಾರನಾಗಿ ವೃತ್ತಿ ಬದುಕು ಆರಂಭಿಸಿ ಅನಂತರ ನಟನಾದದ್ದು, ಆನಂತರ ನಿರ್ಮಾಪಕನೂ ಆಗಿ ಬೆಳೆದಿದ್ದನ್ನು, ಭಾರತದ ಶ್ರೇಷ್ಠ ನಟ ಎಂದು ಹೆಸರು ಮಾಡಿದ್ದನ್ನು ಮರೆಯಲು ಸಾಧ್ಯವೇ ಇಲ್ಲ.

ಹಾಗೆ ನೋಡಿದರೆ, ದಿಲೀಪ್‌ ಕುಮಾರ್‌ ಅವರ ಬದುಕೇ ಒಂದು ಸಿನೆಮಾ ಕಥೆಯಂತಿದೆ. ಈಗ ಪಾಕಿಸ್ಥಾನದಲ್ಲಿರುವ ಪೇಶಾವರದ ಕಿಸ್ಸಾ ಖವಾನಿ ಬಜಾರ್‌ ಎಂಬಲ್ಲಿ, 1922ರ ಡಿಸೆಂಬರ್‌ 11ರಂದು ಜನಿಸಿದ ಮುಹಮ್ಮದ್‌ ಯೂಸುಫ್ ಖಾನ್‌ರ ತಂದೆ ಲಾಲಾ ಗುಲಾಮ್‌ ಸರ್ವಾರ್‌ ಅಲಿ ಖಾನ್‌, ಒಬ್ಬ ಭೂಮಾಲಕ ಮತ್ತು ಹಣ್ಣಿನ ವ್ಯಾಪಾರಿಯಾಗಿದ್ದರು. ನಾಸಿಕ್‌ನಲ್ಲಿ ತನ್ನ ಬಾಲ್ಯ ಮತ್ತು ಯೌವ್ವನವನ್ನು ಕಳೆಯುತ್ತಾನೆ ಯೂಸೂಫ್ ಖಾನ್‌. ಆ ದಿನಗಳಲ್ಲಿ ಈತನ ಜತೆಗಿದ್ದವರು ಯಾರು ಗೊತ್ತೇ? ರಾಜ್‌ ಕಪೂರ್‌! ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ರಾಜ್‌ ಕಪೂರ್‌ ಮತ್ತು ದಿಲೀಪ್‌ ಕುಮಾರ್‌, ಬಾಲ್ಯದ ಗೆಳೆಯರು ಎಂಬುದು ಸೋಜಿಗ ಮತ್ತು ಸ್ವಾರಸ್ಯ. 1940ರಲ್ಲಿ ತಂದೆಯೊಂದಿಗೆ ಜಗಳ ಮಾಡಿಕೊಂಡು ಪುಣೆಗೆ ಓಡಿ ಹೋದ ಯೂಸೂಫ್ ಖಾನ್‌, ಅಲ್ಲಿನ ಮಿಲಿಟರಿ ಕ್ಯಾಂಟೀನ್‌ನಲ್ಲಿ ಸ್ಯಾಂಡ್‌ ವಿಚ್‌ ಸ್ಟಾಲ್‌ ಆರಂಭಿಸಿದ.

ಹೆಸರು ಬದಲಾಯಿತು, ಬದುಕೂ…
1942ರಲ್ಲಿ, ಯೂಸೂಫ್ ಖಾನ್‌ ಬದುಕಿಗೆ ಒಂದು ಅನಿರೀಕ್ಷಿತ ತಿರುವು ಸಿಕ್ಕಿತು. ಆ ದಿನಗಳ ಹೆಸರಾಂತ ನಟಿ ಮತ್ತು ಬಾಂಬೆ ಟಾಕೀಸ್‌ನ ಮಾಲಕರೂ ಆಗಿದ್ದ ನಟಿ ದೇವಿಕಾ ರಾಣಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಉರ್ದು ಭಾಷೆಯಲ್ಲಿ ಈ ಯುವಕನಿಗಿದ್ದ ಪ್ರಾವೀಣ್ಯತೆ ಗಮನಿಸಿದ ದೇವಿಕಾರಾಣಿ, ತಮ್ಮ ಸಂಸ್ಥೆಯಲ್ಲಿ ಸ್ಕ್ರಿಪ್ಟ್ ಬರಹಗಾರನ ಕೆಲಸ ಕೊಟ್ಟರು. ಎರಡು ವರ್ಷಗಳ ಅನಂತರ, ಈ ಯುವಕನ ಬದುಕಿನಲ್ಲಿ ಮತ್ತೂಂದು ತಿರುವು. ಅವನಿಗೆ ನಾಯಕ ನಟನಾಗುವ ಅದೃಷ್ಟ ಜೊತೆಯಾಯಿತು. ದೇವಿಕಾ ರಾಣಿ ಅವರ ಸಲಹೆಯಂತೆಯೇ ತನ್ನ ಹೆಸರನ್ನು ದಿಲೀಪ್‌ ಕುಮಾರ್‌ ಎಂದು ಬದಲಿಸಿಕೊಂಡ ಆತ, 1944ರಲ್ಲಿ ಜ್ವಾರ್‌ ಭಾಟ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ. ಭಾರತೀಯ ಚಿತ್ರರಂಗಕ್ಕೆ, ದಿಲೀಪ್‌ ಕುಮಾರ್‌ ಎಂಬ ತಾರೆಯ ಪ್ರವೇಶವಾಗಿದ್ದು ಹೀಗೆ.

ಜ್ವಾರ್‌ ಭಾಟಾ, ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲಲಿಲ್ಲ. ಆದರೆ, 1947ರಲ್ಲಿ ತೆರೆಕಂಡ ಜುಗು°, 1948ರಲ್ಲಿ ಮೇಳ, ಶಾಹೀದ್‌ ಚಿತ್ರಗಳು ಜನಮನ ಗೆದ್ದವು. ಆನಂತರದ ದಿನಗಳಲ್ಲಿ ಶುರುವಾದದ್ದೇ-ದಿಲೀಪ್‌ ಕುಮಾರ್‌ ಯುಗ! 1950 ರಿಂದ 1964ರವರೆಗೆ ದಿಲೀಪ್‌ ಕುಮಾರ್‌ ಅವರು ಮುಟ್ಟಿದ್ದೆಲ್ಲವೂ ಚಿನ್ನವಾಯಿತು. ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅದು- “ದಿಲೀಪ್‌ ಕುಮಾರ್‌ ದಶಕ’ ಎಂದೇ ಹೆಸರಾಯಿತು. ಅಂದಾಜ್‌, ಜೋಗನ್‌, ಹಲ್‌ ಚಲ್, ಬಾಬುಲ್, ದೀವಾರ್‌, ನಯಾ ದೌರ್‌, ದೇವದಾಸ್‌, ದಾಗ್‌, ಮಧುಮತಿ, ಮೊಘಲ್-ಎ-ಆಜಮ್, ಗಂಗಾ ಜಮುನಾ, ಲೀಡರ್‌, ರಾಮ್‌ ಔರ್‌ ಶ್ಯಾಮ್, ಆದ್ಮಿ… ಹೀಗೆ ಒಂದರ ಹಿಂದೊಂದು ಹಿಟ್‌ ಸಿನೆಮಾಗಳು ತೆರೆ ಕಂಡವು.

ಲಕ್ಷ ರೂ. ಸಂಭಾವನೆ!
ಮೊಘಲ್-ಎ-ಅಜಂನಲ್ಲಿ ದುರಂತ ನಾಯಕನ ಪಾತ್ರ ನಿರ್ವಹಿಸಿದ ದಿಲೀಪ್‌ ಕುಮಾರ್‌, ಆನಂತರದಲ್ಲಿ ಅಂಥದೇ ಪಾತ್ರಗಳಿಗೆ ಬ್ರ್ಯಾಂಡ್ ಆಗಿದ್ದೂ ಉಂಟು. ದೇವದಾಸ್‌ ಚಿತ್ರದ ಅವರ ನಟನೆಗೆ ಮರುಳಾಗದವರೇ ಇಲ್ಲವೇನೋ. ಈ ಯಶಸ್ಸಿನ ಅನಂತರ ದಿಲೀಪ್‌ ಅವರ ಸಂಭಾವನೆ 1 ಲಕ್ಷ ರೂಪಾಯಿಗೆ ಏರಿತು. ಲಕ್ಷ ರೂಪಾಯಿ ಸಂಭಾವನೆ ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆ ದಿಲೀಪ್‌ ಕುಮಾರ್‌ ಪಾಲಾಯಿತು. ಪಾತ್ರ ನಿರ್ವಹಣೆಯಲ್ಲಿ ಅವರ ಶ್ರದ್ಧೆ ಮತ್ತು ಉತ್ಸಾಹವನ್ನು ಗಮನಿಸಿದ ನಿರ್ದೇಶಕ ಸತ್ಯಜಿತ್‌ ರೇ-“ದಿಲೀಪ್‌ ಕುಮಾರ್‌ ಅವರಂಥ ನಟರು ಸಿಗುವುದು ವಿರಳ. ಆತ ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಟ’ ಎಂದಿದ್ದರು.
“ದಿಲೀಪ್‌ ಕುಮಾರ್‌ ಅವರೇ ಒಂದು ವಿಶ್ವವಿದ್ಯಾ­ಲಯದಂತೆ ಇದ್ದರು. ಅವರೊಂದಿಗೆ ಇದ್ದಷ್ಟು ಹೊತ್ತೂ ಏನಾದರೂ ಹೊಸದನ್ನು ಕಲಿಯಬಹುದಿತ್ತು. ಭಾರತೀಯ ಚಿತ್ರರಂಗದ ಇತಿಹಾಸ ಬರೆಯುವಾಗಲೆಲ್ಲ ದಿಲೀಪ್‌ ಕುಮಾರ್‌ಗೂ ಮೊದಲು, ದಿಲೀಪ್‌ ಕುಮಾರ್‌ರ ಅನಂತರ ಎಂದೇ ಬರೆಯಲಾಗುತ್ತದೆ. ಅಂಥ ದೊಡ್ಡ ಜೀವವನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ’ ಎಂಬ ಅಮಿತಾಬ್‌ ಬಚ್ಚನ್‌ ಅವರ ಮಾತುಗಳನ್ನು ನೆನೆಯುತ್ತಲೇ, ದಿಲೀಪ್‌ ಕುಮಾರ್‌ ಅವರಿಗೆ ಶ್ರದ್ಧಾಂಜಲಿ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.