ಕರದಾತರಿಗೆ ಈಗ ಎರಡು ಆಯ್ಕೆಗಳು

ಹಳೆಯ, ಹೊಸ ತೆರಿಗೆ ಪದ್ಧತಿ ಅನುಸರಿಸಲು ಅವಕಾಶ

Team Udayavani, Feb 2, 2020, 6:58 AM IST

kat-45

ತೆರಿಗೆದಾರ ಯಾವುದನ್ನು ಆಯ್ಕೆ ಮಾಡುತ್ತಾನೋ, ಮುಂದಿನ ವರ್ಷಗಳಿಗೆ ಅದುವೇ ಅಂತಿಮ

ಆದಾಯ ತೆರಿಗೆದಾರರಿಗೆ ನಿಟ್ಟುಸಿರುವ ಬಿಡುವ ಘೋಷಣೆಗಳನ್ನು ಮಾಡಲಾಗಿದೆ. ಕೆಲವೊಂದು ಸ್ಲ್ಯಾಬ್‌ಗಳಲ್ಲಿ ಬದಲಾವಣೆಗಳನ್ನೂ ಮಾಡಲಾ ಗಿದೆ. ಇದರ ಜತೆಗೆ ಹಳೆಯ ಪದ್ಧತಿಯಲ್ಲಿ ತೆರಿಗೆ ಪಾವತಿ ಮತ್ತು ಹೊಸ ವಿಧಗಳನ್ನು ಅನ್ವಯ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ಸದ್ಯ ಆದಾಯ ತೆರಿಗೆ ಕಾಯ್ದೆಯ ಅನ್ವಯ ಹೆಚ್ಚಿನ ಪ್ರಮಾಣದಲ್ಲಿ ಕಡಿತ ಮತ್ತು ತೆರಿಗೆ ವಿನಾಯಿತಿ ಪಡೆದುಕೊಳ್ಳುವವರು ಅದನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಹೊಸ ತೆರಿಗೆ ಪ್ರಸ್ತಾಪದಂತೆ 70 ತೆರಿಗೆ ವಿನಾಯಿತಿ ಮಿತಿಗಳನ್ನು ತೆಗೆದು ಹಾಕಲಾಗುತ್ತದೆ. ಜತೆಗೆ ಹೊಸ ಪದ್ಧತಿಯಲ್ಲಿ ಕಡಿಮೆ ತೆರಿಗೆ ಪ್ರಮಾಣದಲ್ಲಿದ್ದುಕೊಂಡು ಯಾವುದೇ ರೀತಿಯ ವಿನಾಯಿತಿಗಳನ್ನು ಪಡೆದುಕೊಳ್ಳದೇ ಇರುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಹೇಗಿದೆ ಹೊಸ ವ್ಯವಸ್ಥೆ?: ವಾರ್ಷಿಕವಾಗಿ 5 ಲಕ್ಷ ರೂ. ವರೆಗೆ ಆದಾಯ ಇರುವವರು ಹಳೆಯ ಅಥವಾ ಹೊಸ ಪದ್ಧತಿಯ ಅನ್ವಯ ತೆರಿಗೆ ಪಾವತಿ ಮಾಡಬೇಕಾದ ಅಗತ್ಯವಿಲ್ಲ. ಹೊಸ ತೆರಿಗೆ ಪದ್ಧತಿ ಪ್ರಕಾರ ವಾರ್ಷಿಕವಾಗಿ 2.5 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ ತೆರಿಗೆ ಪಾವತಿ ಮಾಡಬೇಕಾಗಿಲ್ಲ. 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ. ವರೆಗೆ ಆದಾಯ ಇರುವವರಿಗೆ ಈಗ ಇರುವ ನಿಯಮ ಪ್ರಕಾರ ಶೇ.5ರಂತೆ ತೆರಿಗೆ ಪಾವತಿಸಬೇಕಾಗುತ್ತದೆ. 5 ಲಕ್ಷ ರೂ.ಗಳಿಂದ 7.5 ಲಕ್ಷ ರೂ. ಆದಾಯ ಇರುವವರಿಗೆ ಇನ್ನು ಮುಂದೆ ಶೇ.10, 7.5 ಲಕ್ಷ ರೂ.ಗಳಿಂದ 10 ಲಕ್ಷ ರೂ. ಆದಾಯ ಇರುವವರಿಗೆ ಶೇ.15, 10 ಲಕ್ಷ ರೂ.ಗಳಿಂದ 12.5 ಲಕ್ಷ ರೂ. ಆದಾಯ ಇರುವರಿಗೆ ಶೇ.20, 12.5 ಲಕ್ಷ ರೂ.ಗಳಿಂದ 15 ಲಕ್ಷ ರೂ. ಆದಾಯ ಇರುವವರಿಗೆ ಶೇ.25, 15 ಲಕ್ಷ ರೂ.ಗಳಿಂದ ಮೇಲ್ಪಟ್ಟು ಆದಾಯ ಇರುವವರಿಗೆ ಶೇ.30 ರಷ್ಟು ತೆರಿಗೆಯನ್ನು ವಿಧಿಸುವ ಪ್ರಸ್ತಾಪ ಮಾಡಲಾಗಿದೆ. ಇದರಿಂದಾಗಿ ಕೇಂದ್ರದ ಬೊಕ್ಕಸಕ್ಕೆ 40 ಸಾವಿರ ಕೋಟಿ ರೂ. ಆದಾಯ ಕೊರತೆ ಬೀಳಲಿದೆ.

ಹೊಸ ತೆರಿಗೆ ಪದ್ಧತಿಯನ್ನು ಅನುಸರಿಸಲು ಬಯಸುವ ಕರ ಪಾವತಿದಾರನಿಗೆ ಮುಂಚಿತವಾಗಿಯೇ ರಿಟರ್ನ್ಸ್ ಸಲ್ಲಿಕೆ ಮಾಡುವುದರ ಬಗ್ಗೆ ನೆರವು ನೀಡುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರ ತೆರಿಗೆ ಪರಿಣತರ ಸಹಾಯವಿಲ್ಲದೆ ರಿಟರ್ನ್ಸ್ ಸಲ್ಲಿಕೆ ಮಾಡುವುದರ ಬಗ್ಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಅವಕಾಶ ಉಂಟು: ಯಾವ ಪದ್ಧತಿಯನ್ನು ಅನುಸರಿಸಬೇಕು ಎಂಬ ಆಯ್ಕೆಯನ್ನು ಕರದಾತರಿಗೆ ನೀಡಲಾಗಿದೆ. ಸದ್ಯ ಒಬ್ಬ ತೆರಿಗೆ ಪಾವತಿದಾರ ಹೆಚ್ಚು ತೆರಿಗೆ ಕಡಿತ ಮತ್ತು ವಿನಾಯಿಗಳನ್ನು ಪಡೆಯುವುದಿದ್ದರೆ ಅವು ಗಳನ್ನು ಪಡೆದುಕೊಂಡು ಹಳೆಯ ಪದ್ಧತಿ ಯಲ್ಲಿಯೇ ತೆರಿಗೆ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.ಒಂದು ಬಾರಿ ಹೊಸ ವ್ಯವಸ್ಥೆ ಅಥವಾ ಹಳೆಯ ತೆರಿಗೆ ಪಾವತಿ ವ್ಯವಸ್ಥೆಯನ್ನು ಆಯ್ಕೆ ಮಾಡಿದರೆ, ಮುಂದಿನ ವರ್ಷಗಳಲ್ಲಿ ಅದನ್ನೇ ಮುಂದುವರಿಸಬೇಕಾಗುತ್ತದೆ.

ವಿನಾಯಿತಿ ಹಿಂದಕ್ಕೆ: ಸದಸ್ಯ 100 ವಿಧಗಳ ತೆರಿಗೆ ವಿನಾಯಿತಿಗಳು ಮತ್ತು ಕಡಿತದ ವಿಧಗಳು ಇದ್ದು, 70ನ್ನು ಮುಂದಿನ ದಿನಗಳಲ್ಲಿ ತೆಗೆದು ಹಾಕಲಾಗುತ್ತದೆ. ಬಾಕಿ ಉಳಿದವುಗಳನ್ನು ಮುಂದಿನ ದಿನಕ್ಕನುಗುಣವಾಗಿ ಪರಿಶೀಲಿಸಿ ನಿರ್ಧರಿಸಲಾಗುತ್ತದೆ. ಹೊಸ ತೆರಿಗೆ ಪದ್ಧತಿಯಲ್ಲಿ ಯಾವ ರೀತಿಯಲ್ಲಿ ತೆರಿಗೆದಾರ ವಿನಾಯಿತಿ ಮತ್ತು ಕ್ಲೇಮ್‌ಗಳನ್ನು ಪಡೆದುಕೊಳ್ಳುತ್ತಾನೋ ಅದರ ಅನ್ವಯ ಆತನಿಗೆ ಲಾಭಗಳು ಸಿಗಲಿವೆ. ಉದಾಹರಣೆಗೆ ಹೇಳುವುದಾದರೆ ವಾರ್ಷಿಕವಾಗಿ ವ್ಯಕ್ತಿ 15 ಲಕ್ಷ ರೂ. ಆದಾಯ ಪಡೆಯುತ್ತಿದ್ದು, ಯಾವುದೇ ರೀತಿಯ ಕಡಿತ (ಡಿಡಕ್ಷನ್‌) ಪಡೆಯದಿದ್ದರೆ ಹೊಸ ತೆರಿಗೆ ಪದ್ಧತಿಯಲ್ಲಿ ಆತ 1.95 ಲಕ್ಷ ರೂ. ತೆರಿಗೆ ನೀಡಬೇಕಾಗುತ್ತದೆ. ಹಾಲಿ ಇರುವ ಪದ್ಧತಿಯಲ್ಲಿ ಆತ 2.73 ಲಕ್ಷ ರೂ. ನೀಡಬೇಕಾಗುತ್ತದೆ. ಇದರಿಂದಾಗಿ ಆತನಿಗೆ 78 ಸಾವಿರ ರೂ.ಗಳಷ್ಟು ಕಡಿಮೆ ತೆರಿಗೆ ಪಾವತಿ ಮಾಡಿದಂತಾಗುತ್ತದೆ.

ವಿತ್ತೀಯ ಕೊರತೆ ಏರಿಕೆ
ವಿತ್ತೀಯ ಕೊರತೆ ಪ್ರಮಾಣವನ್ನು 2019-20ನೇ ಸಾಲಿಗಾಗಿ ವಿತ್ತೀಯ ಕೊರತೆಯನ್ನು ಶೇ.3.3ರಿಂದ ಶೇ.3.8ಕ್ಕೆ ಪರಿಷ್ಕರಿಸಲಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹ ಸಾಧ್ಯವಾಗದೇ ಇದ್ದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಸ್ಥಿರೀಕರಿಸುವ ಬದ್ಧತೆಗೆ ಅನುಗುಣವಾಗಿ ನಿಯಮ ಅನುಸರಿಸಲಾಗಿದೆ.

ಟಾಪ್ ನ್ಯೂಸ್

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!

Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!

Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ

Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ

Budget  2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು

Budget 2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು

MONEY GONI

Expert’s Opinion: ಗ್ಯಾರಂಟಿ ಭಾರ ಇಲ್ಲದಿದ್ದರೆ ಇನ್ನೂ ಉತ್ತಮ ಆಗಿರುತ್ತಿತ್ತು

Start-up Sector; ನವ‌ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್‌ ಅಪ್‌

Start-up Sector; ನವ‌ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್‌ ಅಪ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.