ಕಾಫಿಗೂ ಬಂತು ಸ್ನಾತಕೋತ್ತರ ಪದವಿ! ಇಟಲಿಯ ಫ್ಲಾರೆನ್ಸ್ ವಿವಿಯಲ್ಲಿ 9 ತಿಂಗಳ ಕೋರ್ಸ್
Team Udayavani, Sep 22, 2021, 7:45 PM IST
ರೋಮ್: ಅದೆಷ್ಟೇ ತೂಕಡಿಕೆಯಿದ್ದರೂ ಒಂದು ಕಪ್ ಕಾಫಿ ಕುಡಿದರೆ ಮತ್ತೆ ಹೊಸ ಚೈತನ್ಯ ಮೂಡುತ್ತದೆ ಎನ್ನುವವರು ಸಾಕಷ್ಟು ಮಂದಿಯಿದ್ದಾರೆ. ಈ ರೀತಿ ಕಾಫಿಯೆಂದರೆ ಪಂಚಪ್ರಾಣ ಎನ್ನುವವರಿಗಾಗಿಯೇ ಇಟಲಿಯ ವಿಶ್ವವಿದ್ಯಾಲಯವೊಂದು ಸ್ನಾತಕೋತ್ತರ ಪದವಿಯನ್ನೇ ಆರಂಭಿಸಿದೆ!
ಹೌದು. ಇಟಲಿಯ ಪ್ಲಾರೆನ್ಸ್ ವಿಶ್ವವಿದ್ಯಾಲಯ ಕಾಫಿ ಬಗ್ಗೆಯೇ ಸ್ನಾತಕೋತ್ತರ ಪದವಿ ಆರಂಭಿಸಿದೆ. ಕಾಫಿಯ ಇತಿಹಾಸದಿಂದ ಹಿಡಿದು ಕಾಫಿಯನ್ನು ಹೇಗೆ ಸರ್ವ್ ಮಾಡಬೇಕು ಎನ್ನುವವರೆಗೂ ಸಂಪೂರ್ಣ ಅಧ್ಯಯನವನ್ನು ಈ ಪದವಿಯಲ್ಲಿ ಮಾಡಬಹುದು. ಕಾಫಿ ಉದ್ಯಮದಲ್ಲೇ ಯಶಸ್ಸು ಕಂಡಿರುವ ಅನೇಕ ಕಂಪನಿಗಳಿಗೂ ಕರೆದುಕೊಂಡು ಹೋಗಿ ಅಲ್ಲಿ ಪ್ರಾಯೋಗಿಕ ಅಧ್ಯಯನಕ್ಕೂ ಅವಕಾಶ ಮಾಡಿಕೊಡಲಾಗುವುದು.
ಇದನ್ನೂ ಓದಿ:ಅನಂತಕುಮಾರ್ ಅವರ ಸೇವಾಗುಣ ಎಲ್ಲರಿಗೂ ಪ್ರೇರಣೆ: ಬಸವರಾಜ ಬೊಮ್ಮಾಯಿ
ಈ ಪದವಿ ಅಧ್ಯಯನ 9 ತಿಂಗಳ ಕಾಲಾವಧಿಯಲ್ಲಿ ನಡೆಯಲಿದೆ. ಮೊದಲ ಬ್ಯಾಚ್ 2022ರ ಜನವರಿಯಲ್ಲಿ ಆರಂಭವಾಗಲಿದ್ದು, ಅದಕ್ಕೆ ಈಗಾಗಲೇ 25 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಮೊದಲ ಬ್ಯಾಚ್‌ಗೆ ಇಟಾಲಿಯನ್ ಭಾಷೆಯಲ್ಲೇ ಅಧ್ಯಯನ ನಡೆಯಲಿದೆ. ಒಂದು ವೇಳೆ ಬೇಡಿಕೆ ಹೆಚ್ಚಾದರೆ ಇಂಗ್ಲಿಷ್‌ನಲ್ಲಿಯೂ ಪದವಿ ಆರಂಭಿಸಲಾಗುವುದು ಎಂದು ವಿವಿಯ ಕೃಷಿ ವಿಭಾಗದ ಮುಖ್ಯಸ್ಥರು ಹಾಗೂ ಕೋರ್ಸ್‌ನ ಮೇಲ್ವಿಚಾರಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.