ಕರ್ನಾಟಕ ವಿಶ್ವವಿದ್ಯಾಲಯ; ವಾಟರ್‌ಮ್ಯಾನ್‌ ಮಗಳಿಗೆ 9 ಚಿನ್ನದ ಪದಕ

ಪೋಷಕರ ಕನಸು ನನಸು ಮಾಡಿರುವ ಮಗಳ ಸಾಧನೆಗೆ ಕುಟುಂಬದಲ್ಲಿ ಸಂತಸ ತಂದಿದೆ.

Team Udayavani, Jun 8, 2022, 5:52 PM IST

ಕರ್ನಾಟಕ ವಿಶ್ವವಿದ್ಯಾಲಯ; ವಾಟರ್‌ಮ್ಯಾನ್‌ ಮಗಳಿಗೆ 9 ಚಿನ್ನದ ಪದಕ

ಧಾರವಾಡ: ಗ್ರಾಮವೊಂದರಲ್ಲಿ ನೀರು ಸರಬರಾಜು ಕೆಲಸ ಮಾಡುವ ವ್ಯಕ್ತಿಯ ಮಗಳು ಇದೀಗ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅತೀ ಹೆಚ್ಚು ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದು, ಇಡೀ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮದ ನಾಗೇಶ ಹಾಗೂ ಮಹಾದೇವಿ ದಂಪತಿಯ ದ್ವಿತೀಯ ಪುತ್ರಿ ಸುಜಾತಾ ಜೋಡಳ್ಳಿಯೇ ಈ ಸಾಧನೆ ಮಾಡಿದವಳು. ಕವಿವಿಯ ಗಾಂಧಿಭವನದಲ್ಲಿ ಜರುಗಿದ 72ನೇ ಘಟಿಕೋತ್ಸವದಲ್ಲಿ ಎಂಎ ಪತ್ರಿಕೋದ್ಯಮ ಪದವಿಯಲ್ಲಿ ಬರೋಬ್ಬರಿ 9 ಚಿನ್ನದ ಪದಕ ಪಡೆಯುವ ಮೂಲಕ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾಳೆ.

ಎರಡು ಎಕರೆ ಕೃಷಿಭೂಮಿ ಹೊಂದಿರುವ ನಾಗೇಶರಿಗೆ ನಾಲ್ಕು ಜನ ಮಕ್ಕಳು. ಈ ಪೈಕಿ ಮೂವರು ಹೆಣ್ಣು ಮಕ್ಕಳಲ್ಲಿ ಇಬ್ಬರನ್ನು ಈಗಾಗಲೇ ಮದುವೆ ಮಾಡಿಕೊಟ್ಟಿದ್ದಾರೆ. ಸೂಳಿಕಟ್ಟಿ ಗ್ರಾಪಂ ಡಿ ದರ್ಜೆ ನೌಕರರಾಗಿ ಗ್ರಾಮದಲ್ಲಿ ವಾಟರ್‌ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದು, ದ್ವಿತೀಯ ಪುತ್ರಿ ಸುಜಾತಾಳ ಕಲಿಯುವ ಕನಸುಗಳಿಗೆ ನೀರೆರೆದಿದ್ದಾರೆ. ಇಡೀ ಕುಟುಂಬದಲ್ಲಿ ಇಷ್ಟೊಂದು ಕಲಿತವರಿಲ್ಲ. ಈಗ ಸುಜಾತ ಚಿನ್ನದ ಪದಕ-ನಗದು ಪುರಸ್ಕಾರದ ಮೂಲಕ ಕುಟುಂಬ ಹಾಗೂ ಗ್ರಾಮಕ್ಕೆ ಹೆಮ್ಮೆ ತರುವಂತೆ ಮಾಡಿದ್ದಾಳೆ.

ಸುಜಾತಾ ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರವಾರ ಕಚೇರಿಯಲ್ಲಿ ಅಪ್ರಂಟಿಸ್‌ ಆಗಿ ತರಬೇತಿ ಪಡೆಯುತ್ತಿದ್ದಾರೆ. ಕೃಷಿ ಕುಟುಂಬದ ಮಗಳು: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಉಂಚಳ್ಳಿ(ಧರೆಮನೆ) ಗ್ರಾಮದ ವಿಶ್ವನಾಥ ಮತ್ತು ಗೀತಾ ಭಟ್‌ ಅವರದ್ದು ಕೃಷಿ ಕುಟುಂಬ. ಈ ಕುಟುಂಬದ ಅನುಜ್ಞಾ ಎಂಎಸ್ಸಿಯ ಜೀವರಸಾಯನ ಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿ, 8 ಚಿನ್ನದ ಪದಕ ಪಡೆದು ಗಮನ ಸೆಳೆದಿದ್ದಾರೆ. ಅನುಜ್ಞಾ ಮೊದಲಿನಿಂದಲೂ ಓದಿನಲ್ಲಿ ಸದಾ ಮುಂದಿದ್ದರು. 10ನೇ ತರಗತಿಯಲ್ಲಿ ಓದುವಾಗಲೇ ಅವರು ಜೀವರಸಾಯನಶಾಸ್ತ್ರದಲ್ಲಿ ಪದವಿ ಪಡೆಯಬೇಕು ಎಂಬ ಕನಸು ಹೊತ್ತಿದ್ದರು.

ಅದಕ್ಕೆ ಸಹಕಾರ ನೀಡಿದ ಪೋಷಕರ ಕನಸು ನನಸು ಮಾಡಿರುವ ಮಗಳ ಸಾಧನೆಗೆ ಕುಟುಂಬದಲ್ಲಿ ಸಂತಸ ತಂದಿದೆ. ಸದ್ಯ ಕೆಸೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅನುಜ್ಞಾ ಪ್ರಸ್ತುತ ಕವಿವಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನೆಟ್‌ ಪರೀಕ್ಷೆ ಎದುರಿಸಿ, ಪ್ರೋಟಿನ್‌  ಜೀವರಸಾಯನಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ.

ಚಿನ್ನದ ಬೇಟೆ
ಕವಿವಿಯ 72ನೇ ಘಟಿಕೋತ್ಸವದಲ್ಲಿ 103 ವಿದ್ಯಾರ್ಥಿಗಳಿಗೆ 233 ಚಿನ್ನದ ಪದಕ ಪ್ರದಾನ ಮಾಡಲಾಗಿದ್ದು, ಇದರ ಜತೆಗೆ 42 ಪಾರಿತೋಷಕ, 76 ಶಿಷ್ಯವೇತನ, 67 ರ್‍ಯಾಂಕ್‌ ಗಳನ್ನು ನೀಡಲಾಗಿದೆ. ಈ ಪೈಕಿ ಎಂಎ ಕನ್ನಡದಲ್ಲಿ ಅಕ್ಕಮ್ಮಾ ಯಾದವಾಡ 7 ಚಿನ್ನದ ಪದಕ, ಎಂಎ ರಾಜಕೀಯ ವಿಜ್ಞಾನದಲ್ಲಿ ಮೇಘಾ ಹವಣಗಿ, ಎಂಎಸ್‌ಸಿ ಗಣಿತದಲ್ಲಿ ಸ್ವಾತಿ ಜೋಶಿ, ರಸಾಯನಶಾಸ್ತ್ರದಲ್ಲಿ ಸಹನಾ ನಾಗೇಶ ಶೇಟ್‌ ತಲಾ 6 ಚಿನ್ನದ ಪದಕ, ಎಂಎ ಇಂಗ್ಲಿಷ್‌ದಲ್ಲಿ ಮೈದಿನಿ ನಾಯಕ, ಅರ್ಥಶಾಸ್ತ್ರದಲ್ಲಿ ತೇಜಸ್ವಿನಿ ತಳವಾರ, ಎಂಎಸ್ಸಿ ಸಸ್ಯಶಾಸ್ತ್ರದಲ್ಲಿ ನಮ್ರತಾ ಉದಯ ಶೆಟ್ಟಿ, ಎಂಬಿಎ ವಿಭಾಗದಲ್ಲಿ ರಹೇಲಾ ಅಜುಮ್‌, ಎಲ್‌ಎಲ್‌ಬಿಯಲ್ಲಿ
ಅಖೀಲ್‌ ಬಿ.ಎಸ್‌. ತಲಾ 5 ಚಿನ್ನದ ಪದಕ, ಬಿಎಂಯಲ್ಲಿ ಜೋತಿ ಗೋನವಾರ, ಸುಧಾ ಎಂ. ತಲಾ 4 ಚಿನ್ನದ ಪದಕ ಪಡೆದಿದ್ದಾರೆ.

ವಾಟರ್‌ಮ್ಯಾನ್‌ ಆಗಿರುವ ತಂದೆ ಕಷ್ಟದ ದಿನಗಳಲ್ಲಿಯೂ ಅಧ್ಯಯನಕ್ಕೆ ಯಾವುದಕ್ಕೂ ಕೊರತೆ ಆಗದಂತೆ ಓದಿಸಿದ್ದಾರೆ. ಓದಿಗೆ ನೀರೆರೆದ ತಂದೆಯ ಹಿಂದಿನ ಶ್ರಮ ಹಾಗೂ ಕಷ್ಟಪಟ್ಟು ಅಧ್ಯಯನ ಮಾಡಿದ ಫಲದಿಂದ 9 ಚಿನ್ನದ ಪದಕ ಲಭಿಸಿದ್ದು, ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಪಿಎಚ್‌ಡಿ
ಮಾಡಿ, ಮಾಧ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಗುರಿ ಇದೆ.
*ಸುಜಾತಾ ಜೋಡಳ್ಳಿ, 9 ಚಿನ್ನದ ಪದಕ ವಿಜೇತೆ

ಚಿಕ್ಕೋಡಿ ತಾಲೂಕಿನ ಜಾಗನೂರು ನಮ್ಮೂರು. ತಂದೆ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪೋಷಕರ ಆಸೆಯಂತೆ ಈ ಸಾಧನೆ ಮಾಡಿದ್ದೇನೆ. ಈಗಾಗಲೇ ಕೆ-ಸೆಟ್‌, ಗೇಟ್‌ ಪರೀಕ್ಷೆ ಪಾಸಾಗಿದ್ದು, ಮುಂದೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡುವ ಗುರಿ ಇದೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ಸಂಪಾದಿಸುವ ಇಚ್ಚೆ ಹೊಂದಿದ್ದೇನೆ.
*ಲಕ್ಷ್ಮಣ ಹಂಜಿ, 8 ಚಿನ್ನದ ಪದಕ ವಿಜೇತ, ಎಂಎಸ್ಸಿ ಪ್ರಾಣಿಶಾಸ

ಮನೆಯಲ್ಲಿ ತಾಯಿಯ ಸಹಕಾರ-ಉಪನ್ಯಾಸಕರ ಮಾರ್ಗದರ್ಶನ ಇತ್ತು. ಮುಂದಿನ ದಿನಗಳಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತೇನೆ.
*ಪವಿತ್ರಾ ಗುಳ್ಳಣ್ಣವರ, ಬಾಗಲಕೋಟೆ,
8 ಚಿನ್ನದ ಪದಕ ವಿಜೇತೆ, ಲೈಬ್ರರಿ ಆ್ಯಂಡ್‌ ಇನ್ಫಾರ್ಮೇಷನ್‌ ಸೈನ್‌

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.