ಇಲ್ಲಿ ಅವಿವಾಹಿತ ಹೆಣ್ಣು ಮಕ್ಕಳು ಮೊಬೈಲ್ ಬಳಸುವಂತಿಲ್ಲ!
ಅನ್ಯಮತೀಯ ಮದುವೆಗೆ ಲಕ್ಷಗಟ್ಟಲೆ ದಂಡ ವಿಧಿಸುತ್ತದೆ ಈ ಸಮುದಾಯ!
Team Udayavani, Jul 17, 2019, 10:27 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮೊಬೈಲ್ ಬಳಕೆ ನಮ್ಮ ದೈನಂದಿನ ಜೀವನಕ್ಕೆ ಎಷ್ಟು ಪೂರಕವಾಗಿದೆಯೋ ಅದಕ್ಕಿಂತ ಹೆಚ್ಚು ಮಾರಕವಾಗಿಯೂ ಪರಿಣಮಿಸುತ್ತಿರುವ ಘಟನೆಗಳು ದಿನನಿತ್ಯ ನಡೆಯುತ್ತಿರುತ್ತವೆ. ಆದರೆ ಗುಜರಾತ್ ನಲ್ಲಿರುವ ಈ ಒಂದು ಸಮುದಾಯ ಮಾತ್ರ ತನ್ನ ಅವಿವಾಹಿತ ಹೆಣ್ಣುಮಕ್ಕಳಿಗೆ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ಹೀಗೆ ಮದುವೆಯಾಗದ ಹೆಣ್ಣು ಮಕ್ಕಳಿಗೆ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿರುವ ಸಮುದಾಯವೇ ಗುಜರಾತ್ ನ ಥಾಕೋರೆ ಸಮುದಾಯ.
ಥಾಕೊರೆ ಸಮುದಾಯವು ಇತ್ತೀಚಗಷ್ಟೇ ಒಂದು ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಆ ಪಟ್ಟಿಯಲ್ಲಿ ತನ್ನ ಸಮುದಾಯದ ಸದಸ್ಯರಿಗೆ ತಾನು ಹೇರಿರುವ ನಿಷೇಧಗಳನ್ನು ಪಟ್ಟಿಮಾಡಿದೆ. ಇವುಗಳಲ್ಲಿ ಯುವತಿಯರಗೆ ಮೊಬೈಲ್ ಬಳಸದಂತೆ ಮಾಡಿರುವ ನಿಷೇಧವೂ ಒಂದು. ಗುಜರಾತ್ ನ ಬನಸ್ಕಾಂತಾ ಜಿಲ್ಲೆಯಲ್ಲಿರುವ ದಂತಿವಾಡಾ ತೆಹ್ಸಿಲ್ ನ 12 ಗ್ರಾಮಗಳಲ್ಲಿರುವ ಈ ಸಮುದಾಯದ ಜನರಿಗೆ ನಿಷೇಧಗಳ ಬಿಸಿ ತಟ್ಟಿದೆ.
ಒಂದುವೇಳೆ ಈ ಸಮುದಾಯಕ್ಕೆ ಸೇರಿರುವ ಯಾವುದೇ ಕುಟುಂಬದಲ್ಲಿರುವ ಅವಿವಾಹಿತ ಹೆಣ್ಣುಮಗಳು ಮೊಬೈಲ್ ಬಳಸುತ್ತಿರುವುದು ಕಂಡುಬಂದಲ್ಲಿ ಆಕೆಯ ಹೆತ್ತವರನ್ನೇ ಇದಕ್ಕೆ ಹೊಣೆಯಾಗಿಸಲಾಗುತ್ತದೆ.
ಇನ್ನು ಈ ನಿಷೇಧಕ್ಕೆ ನಿರ್ಧಿಷ್ಟ ಕಾರಣಗಳನ್ನು ಥಾಕೋರೆ ಸಮುದಾಯವು ನೀಡಿಲ್ಲವಾದರೂ ಆ ಸಮಾಜದಲ್ಲಿರುವ ಪದ್ಧತಿಯಂತೆ ಅವರ ಮುಖ್ಯಸ್ಥ ರೂಪಿಸುವ ನೀತಿ ನಿಯಮಾವಳಿಗಳನ್ನು ಸಮುದಾಯ ಸದಸ್ಯರು ಪ್ರಶ್ನಿಸದೇ ಒಪ್ಪಿಕೊಳ್ಳುವುದು ಅನಿವಾರ್ಯವೆನ್ನಲಾಗುತ್ತಿದೆ.
ಇದು ಮಾತ್ರವಲ್ಲದೇ ಇನ್ನೊಂದು ವಿಚಿತ್ರ ನಿಯಮವೂ ಈ ಸಮುದಾಯದಲ್ಲಿ ಪ್ರಚಲಿತದಲ್ಲಿದೆ. ಅದೆಂದರೆ, ಯಾವುದೇ ಸನ್ನಿವೇಶದಲ್ಲಿಯೂ ಈ ಸಮುದಾಯದ ಮುಖಂಡರು ಅಂತರ್ಜಾತೀಯ ವಿವಾಹಗಳನ್ನು ಮಾನ್ಯ ಮಾಡುವುದಿಲ್ಲ. ಇದಕ್ಕೂ ಮೀರಿ ಈ ಸಮುದಾಯದ ಗಂಡು ಅಥವಾ ಹೆಣ್ಣು ಅಂತರ್ಜಾತೀಯ ವಿವಾಹವಾದಲ್ಲಿ ಅವರಿಗೆ ದಂಡ ವಿಧಿಸುವ ಪದ್ಧತಿಯೂ ಇಲ್ಲಿ ಚಾಲ್ತಿಯಲ್ಲಿದೆ.
ಒಂದುವೇಳೆ ಥಾಕೋರೆ ಸಮುದಾಯದ ಹೆಣ್ಣುಮಗಳು ಬೇರೆ ಜಾತಿಯ ಗಂಡನ್ನು ವರಿಸಿದಲ್ಲಿ ಆಕೆಯ ಕುಟುಂಬವು 1.5 ಲಕ್ಷ ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ಇದೇ ಸಮುದಾಯದ ಗಂಡು ಬೇರೆ ಜಾತಿಯ ಹೆಣ್ಣನ್ನು ವರಿಸಿದ್ದೇ ಆದಲ್ಲಿ ಆಗ ಆತನ ಕುಟುಂಬವು 2 ಲಕ್ಷ ರೂಪಾಯಿಗಳ ದಂಡವನ್ನು ತೆರಬೇಕಾಗುತ್ತದೆ.
ಇನ್ನು ಸಮುದಾಯದ ಎಲ್ಲಾ ಸಮಾರಂಭಗಳಲ್ಲಿ ಡಿಜೆ ನೃತ್ಯಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮತ್ತು ವರದಕ್ಷಿಣೆ ಕೊಡುವುದು ಅಥವಾ ಪಡೆದುಕೊಳ್ಳುವುದಕ್ಕೂ ಈ ಸಮುದಾಯವು ಕಡ್ಡಾಯ ನಿಷೇಧವನ್ನು ಹೇರಿದೆ ಮಾತ್ರವಲ್ಲದೇ ಶುಭಸಮಾರಂಭಗಳ ಸಂದರ್ಭದಲ್ಲಿ ಸುಡುಮದ್ದುಗಳ ಬಳಕೆಯನ್ನೂ ಸಹ ನಿಷೇಧಿಸಲಾಗಿದೆ.
ಭಾರತೀಯ ಕುಟುಂಬ ವ್ಯವಸ್ಥೆಗೆ ಹೆಚ್ಚಿನ ಒತ್ತುಕೊಟ್ಟಂತೆ ಕಾಣುತ್ತಿರುವ ಥಾಕೋರೆ ಸಮುದಾಯವು ತನ್ನ ಸಮುದಾಯದಲ್ಲಿರುವ ಯಾವುದೇ ಕುಟುಂಬದಲ್ಲಿ ಸಹೋದರ ಕಲಹವಿದ್ದಲ್ಲಿ ಅಂತಹ ಕುಟುಂಬಕ್ಕೆ ನಿಷೇಧ ಹೇರುವ ಪದ್ಧತಿಯೂ ಈ ಸುಮದಾಯದಲ್ಲಿ ಚಾಲ್ತಿಯಲ್ಲಿದೆ. ಈ ಸಮುದಾಯದ ಮದುವೆ ಸಮಾರಂಭಗಳಲ್ಲಿ ಮದುಮಗ ಕುದುರೆ ಮೇಲೆ ಬರುವುದಕ್ಕೂ ನಿಷೇಧವಿದೆ.
ಒಟ್ಟಾರೆಯಾಗಿ ಕೌಟುಂಬಿಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ತಮ್ಮ ಸಮುದಾಯದ ಸದಸ್ಯರಲ್ಲಿ ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳುವ ಸಲುವಾಗಿ ಥಾಕೋರೆ ಸಮುದಾಯವು ಈ ಎಲ್ಲಾ ನಿರ್ಬಂಧಗಳನ್ನು ತನ್ನ ಸಮುದಾಯ ಸದಸ್ಯರ ಮೇಲೆ ಹೇರಿದಂತೆ ಮೇಲ್ನೋಟಕ್ಕೆ ಗೋಚರವಾಗುತ್ತಿದೆಯಾದರೂ ಇಂದಿನ ಆಧುನಿಕ ಯುಗದಲ್ಲಿ ಇವುಗಳ ಪಾಲನೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೊಳ್ಳುತ್ತದೆ ಎಂಬುದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.