ಉ.ಪ್ರ.ದಿಂದ ಸಮಾಜವಾದಿ ಧೂಳೀಪಟ; ಬಿಜೆಪಿಗೆ ಮತ್ತೆ ಅಧಿಕಾರ ಸಿಗುವ ವಿಶ್ವಾಸ
ಮೈನ್‌ಪುರಿ ರ್‍ಯಾಲಿಯಲ್ಲಿ ಸಚಿವ ಅಮಿತ್ ಶಾ ಭವಿಷ್ಯ
Team Udayavani, Feb 16, 2022, 6:40 AM IST
ಲಕ್ನೋ: ಉತ್ತರ ಪ್ರದೇಶದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಧೂಳೀಪಟವಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.
ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಬೃಹತ್ ಚುನಾವಣ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ಉತ್ತರ ಪ್ರದೇಶದಲ್ಲಿ ಈಗಾಗಲೇ ಎರಡು ಸುತ್ತಿನ ಮತದಾನ ನಡೆದಿದೆ. ಆ ಎರಡು ಸುತ್ತುಗಳಲ್ಲಿ ಸಮಾಜವಾದಿ ಪಕ್ಷ ನಿರ್ಮೂಲನೆಗೊಂಡಿದೆ.
ಇದೇ ಚುನಾವಣೆಯಲ್ಲಿ ಆ ಪಕ್ಷ ಧೂಳೀಪಟವಾಗುತ್ತದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದ ಜನ ಈಗಾಗಲೇ ಬಿಜೆಪಿಗೆ ಮಣೆ ಹಾಕಿದ್ದಾರೆ’ ಎಂದು ಹೇಳಿದ್ದಾರೆ. ಕಾನ್ಪುರದಲ್ಲಿಯೂ ಚುನಾ ವಣ ಪ್ರಚಾರ ನಡೆಸಿದ ಅಮಿತ್ ಶಾ, ಅಲ್ಲಿ ರೋಡ್‌ಶೋ ನಡೆಸಿದರು.
2ನೇ ಹಂತದಲ್ಲಿ ಶೇ. 64.42ರಷ್ಟು ಮತದಾನ: ಫೆ. 14ರಂದು ಉತ್ತರ ಪ್ರದೇಶದಲ್ಲಿ ನಡೆದಿರುವ 2ನೇ ಹಂತದ ಮತದಾನದಲ್ಲಿ ಶೇ. 64.42 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಕೇಂದ್ರ ಚುನಾವಣ ಆಯೋಗ ತಿಳಿಸಿದೆ.
ಸಹರನ್‌ಪುರದಲ್ಲಿ ಶೇ. 71.13, ಬಿಜ್ನೋರ್‌ನಲ್ಲಿ ಶೇ. 65.91, ಮೊರಾದಾಬಾದ್‌ನಲ್ಲಿ ಶೇ. 67.26, ಸಂಭಾಲ್‌ನಲ್ಲಿ ಶೇ. 62.87, ರಾಂಪುರದಲ್ಲಿ ಶೇ. 64.26, ಅನ್ರೋಹಾದಲ್ಲಿ ಶೇ. 71.98, ಬದೌನ್‌ನಲ್ಲಿ ಶೇ.59.24, ಬರೇಲಿಯಲ್ಲಿ ಶೇ. 61.67, ಶಹಜಹಾನ್‌ಪುರದಲ್ಲಿ ಶೇ. 59.34ರಷ್ಟು ಮತದಾನ ನಡೆದಿದೆ ಎಂದು ಆಯೋಗ ತಿಳಿಸಿದೆ.
ಉಚಿತ ಪಡಿತರ, 11 ಲಕ್ಷ ಉದ್ಯೋಗ: ಎಸ್‌ಪಿ ಆಶ್ವಾಸನೆ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಆಡಳಿತಕ್ಕೆ ಬಂದರೆ, ಬಡವರಿಗೆ ಮುಂದಿನ ಐದು ವರ್ಷಗಳವರೆಗೆ ಉಚಿತ ದಿನಸಿ ನೀಡ ಲಾಗುತ್ತದೆ. ಜತೆಗೆ ಪ್ರತೀ ತಿಂಗಳು 1 ಕೆ.ಜಿ. ತುಪ್ಪವನ್ನೂ ಉಚಿತವಾಗಿ ಕೊಡಲಾಗುವುದು ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ಆಶ್ವಾಸನೆ ನೀಡಿದ್ದಾರೆ.
ಫತೇಪುರ್‌ನಲ್ಲಿ ನಡೆದ ತಮ್ಮ ಪಕ್ಷದ ಚುನಾವಣ ಪ್ರಚಾರದ ವೇಳೆ ಮಾತನಾಡಿದ ಅವರು, “ನಮ್ಮ ಪಕ್ಷ ಈ ಹಿಂದೆ ಆಡಳಿತದಲ್ಲಿದ್ದಾಗಲೂ ಉಚಿತ ದಿನಸಿ ಕೊಟ್ಟಿದೆ. ಈ ಬಾರಿ ದಿನಸಿ ಜತೆ ತುಪ್ಪ, ಹಾಗೂ ಸಾಸಿವೆ ಎಣ್ಣೆಯನ್ನೂ ಕೊಡಲಿದ್ದೇವೆ. ವರ್ಷಕ್ಕೆ 2 ಸಿಲಿಂಡರ್‌ನ್ನೂ ಉಚಿತವಾಗಿಸಲಿದ್ದೇವೆ’ ಎಂದಿದ್ದಾರೆ. ಅಲ್ಲದೆ ಬಿಜೆಪಿ ಸರಕಾರ ಚುನಾವಣೆ ಮುಗಿಯುವವರೆಗೆ ಮಾತ್ರ ಉಚಿತ ದಿನಸಿ ಕೊಡುತ್ತದೆ ಎಂದೂ ಅವರು ದೂರಿದ್ದಾರೆ.
11 ಲಕ್ಷ ಉದ್ಯೋಗ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ 11 ಲಕ್ಷ ಮಂದಿಗೆ ಸರಕಾರಿ ಉದ್ಯೋಗ ನೀಡುವ ಮತ್ತೂಂದು ಆಶ್ವಾಸನೆಯನ್ನು ಪಕ್ಷದ ನಾಯಕ ಅಖಿಲೇಶ್ ಯಾದವ್ ನೀಡಿದ್ದಾರೆ.
ಬಿಜೆಪಿಯಿಂದ ಮುಂದಿದ್ದೇವೆ: ಉತ್ತರ ಪ್ರದೇಶದಲ್ಲಿ ಈಗ ಮುಕ್ತಾಯವಾಗಿರುವ ಎರಡು ಸುತ್ತಿನ ಮತದಾನದಲ್ಲಿ ಸಮಾಜವಾದಿ ಪಕ್ಷವು, ಬಿಜೆಪಿಗಿಂತ ಮುನ್ನಡೆ ಸಾಧಿಸಿದೆ ಎಂದು ಅಖೀಲೇಶ್ ಯಾದವ್ ತಿಳಿಸಿದ್ದಾರೆ.
12 ಗಂಟೆಗೆ ಏಳುವವರಿಂದ ಪ್ರಯೋಜನವೇನು?
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ “ಮಧ್ಯಾಹ್ನ ಎದ್ದೇಳುವ ನಾಯಕ’ ಎಂದು ಯೋಗಿ ಆದಿತ್ಯನಾಥ್ ಛೇಡಿಸಿದ್ದಾರೆ. ಫಿರೋಜಾಬಾದ್‌ನಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ಉತ್ತರ ಪ್ರದೇಶದ ಎರಡು ಹಂತದ ಮತದಾನ ಪೂರ್ಣಗೊಂಡ ಅನಂತರ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬುದು ಸ್ಪಷ್ಟವಾಗಿದೆ.
ರಾಜ್ಯದ ಜನತೆಗೆ ಬಿಜೆಪಿ ಮಾತ್ರ ಭದ್ರತೆ ಹಾಗೂ ಅಭಿವೃದ್ಧಿಯನ್ನು ಕಲ್ಪಿಸಬಲ್ಲದು. ಮಧ್ಯಾಹ್ನ 12 ಗಂಟೆಗೆ ಏಳುವ ನಾಯಕರಿಂದ ನಾವು ಏನನ್ನು ನಿರೀಕ್ಷಿಸಬಹುದು’ ಎಂದು ಕೇಳಿದರು. ಅಖಿಲೇಶ್ ಯಾದವ್ ಅವರು ಲಸಿಕೆಯನ್ನು ಪಡೆದಿಲ್ಲ. “ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಅನೇಕ ಜನರು ಕೊರೊನಾಕ್ಕೆ ತುತ್ತಾಗಲಿ ಎಂದು ಹಾರೈಸುತ್ತಿದ್ದರು. ಅವರು ಕೇವಲ ತಮ್ಮ ಕುಟುಂಬದ ಅಭಿವೃದ್ಧಿಯನ್ನು ಮಾತ್ರ ಪರಿಗಣಿಸುತ್ತಾರೆ’ ಎಂದು ಆರೋಪಿಸಿದರು.
ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷ
ಪಂಜಾಬ್‌ನ ಲಾರ್ಲುವಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ರ್‍ಯಾಲಿಯಲ್ಲಿ ಮಾತನಾಡಿದ ರಕ್ಷಣ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸಿನಲ್ಲಿ ಆಂತರಿಕ ಸಂಘರ್ಷವಿದೆ. ಅಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಆರೋಪ, ಪ್ರತ್ಯಾರೋಪಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಸರಕಾರದ ಮುಖ್ಯಮಂತ್ರಿ ಕೈಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಮಾಡಲಾಗಿದೆ. ಅಂಥ ಮುಖ್ಯಮಂತ್ರಿಯಿಂದ ರಾಜ್ಯದ ಹೇಗೆ ತಾನೇ ಅಭಿವೃದ್ಧಿಯಾದೀತು ಎಂದು ಪ್ರಶ್ನಿಸಿದರು. ಯಾವುದೇ ಪಕ್ಷ, ಮೊದಲು ತಮ್ಮ ಕಾರ್ಯಕರ್ತರನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಆದರೆ ಕಾಂಗ್ರೆಸ್ ಪಕ್ಷ ಪಂಜಾಬ್‌ನಲ್ಲಿರುವ ಲಿಕ್ಕರ್ ಮಾಫಿಯಾವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದೆ ಎಂದು ಅವರು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.