ನಾಳೆಯಿಂದ ಕೆಎಸ್‌ಆರ್‌ಟಿಸಿ ಡಿಪೋ ನವೀಕರಣ
4.5 ಕೋ.ರೂ. ವೆಚ್ಚದಲ್ಲಿ ಕಾಮಗಾರಿ; 2018ರಲ್ಲಿ ಘೋಷಣೆಯಾಗಿದ್ದ ಯೋಜನೆ
Team Udayavani, Jan 30, 2022, 5:50 AM IST
ಕುಂದಾಪುರ: ಅಂತೂ ಇಂತೂ ಕುಂದಾಪುರದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ನವೀಕರಣ ಕಾಮಗಾರಿಗೆ ಕಾಲ ಕೂಡಿ ಬಂದಿದೆ. ಇಲ್ಲಿನ ಬಸ್ ಡಿಪೋದ ಕಟ್ಟಡ ಹಾಗೂ ಎಲ್ಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 4.5 ಕೋ.ರೂ. ಮಂಜೂರಾಗಿದ್ದು, ಜ. 31ರಿಂದ ಕಾಮಗಾರಿ ಆರಂಭವಾಗಲಿದೆ.
2018ರ ನ. 16ರಂದು ಕುಂದಾಪುರಕ್ಕೆ ಭೇಟಿ ನೀಡಿದ್ದ ಆಗಿನ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು, ಕುಂದಾಪುರದ ಬಸ್ರೂರು ಮೂರುಕೈ ಬಳಿಯಿರುವ ಹಳೆಯ ಕೆಎಸ್‌ಆರ್‌ಟಿಸಿ ಘಟಕವನ್ನು ಕೆಡವಿ, ಮರು ನಿರ್ಮಾಣಕ್ಕೆ 4.5 ಕೋ.ರೂ. ಅನುದಾನವನ್ನು ಘೋಷಿಸಿದ್ದರು. ಸಚಿವರು ಅನುದಾನ ಘೋಷಿಸಿ, 3 ವರ್ಷ ಕಳೆದರೂ, ಇನ್ನೂ ನವೀಕರಣ ಕಾಮಗಾರಿ ಮಾತ್ರ ಕೈಗೂಡಿರಲಿಲ್ಲ.
ಏನೇನು ಅಭಿವೃದ್ಧಿ ?
ಈಗಿರುವ ಕೆಎಸ್‌ಆರ್‌ಟಿಸಿ ಡಿಪೋ ಇರುವ ಜಾಗದಲ್ಲಿಯೇ ಅದನ್ನು ಕೆಡವಿ ಹೊಸದಾಗಿ ಕಟ್ಟಡ, ಬಸ್ ನಿಲ್ಲಿಸುವ ಬೇ, ದುರಸ್ತಿಗೆ ಅನುಕೂಲವಾಗುವಂತಹ ಬೇಗಳು, ಹೊಸ ಜನರೇಟರ್, ಚಾಲಕ – ನಿರ್ವಾಹಕರಿಗೆ ವಿಶ್ರಾಂತಿ ಕೊಠಡಿ, ವಾಷಿಂಗ್ ರ್‍ಯಾಂಪ್, ಆವರಣ ಗೋಡೆ ಹೊಸದಾಗಿ ನಿರ್ಮಾಣವಾಗಲಿದೆ. ಇದಲ್ಲದೆ ಹೆದ್ದಾರಿಯ ಮಳೆ ನೀರು ಹರಿದು ಬರದಂತೆ ಸಹ ವ್ಯವಸ್ಥೆಯಾಗಲಿದೆ. ಈಗ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ.
103 ಬಸ್ ನಿಲುಗಡೆ
ಕುಂದಾಪುರದಿಂದ ಬೆಂಗಳೂರು, ಶಿವಮೊಗ್ಗ, ಮೈಸೂರು, ಉತ್ತರ ಕನ್ನಡ, ಹುಬ್ಬಳ್ಳಿ ಸಹಿತ ರಾಜ್ಯದ ಹೆಚ್ಚಿನ ಎಲ್ಲ ಜಿಲ್ಲೆಗಳಿಗೂ ಬಸ್ ಸಂಪರ್ಕವಿದೆ. ಪ್ರಸ್ತುತ ಇಲ್ಲಿ 103 ಬಸ್‌ಗಳ ನಿಲುಗಡೆಯಿದೆ.
ಬದಲಿ ವ್ಯವಸ್ಥೆ
ಡಿಪೋ ನವೀಕರಣ ಕಾಮಗಾರಿ ಸಲುವಾಗಿ ಈಗ ಇಲ್ಲಿರುವ ಬಸ್‌ಗಳನ್ನು ನಿಲ್ಲಿಸಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಜಾಗ ಸಮತಟ್ಟು ಮಾಡಲಾಗಿದೆ. ಇಲ್ಲಿ ಕೆಲವು ಬಸ್‌ಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
1 ವರ್ಷದವರೆಗೆ ಕಾಮಗಾರಿ
ಕುಂದಾಪುರ ಕೆಎಸ್‌ಆರ್‌ಟಿಸಿ ಘಟಕದ ನವೀಕರಣ ಕಾಮಗಾರಿ ಜ.31 ರಿಂದ ಆರಂಭವಾಗಲಿದೆ. ಈಗಿರುವ ಬಸ್‌ಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಆಗಬೇಕಿರು ವುದರಿಂದ ಸ್ವಲ್ಪ ವಿಳಂಬವಾಗಿದೆ. ಮುಂದಿನ ಒಂದು ವರ್ಷದವರೆಗೆ ಕಾಮಗಾರಿ ನಡೆಯಲಿದೆ. ಹೊಸ ಕಟ್ಟಡ, ರ್‍ಯಾಂಪ್, ಬಸ್ ಬೇ ಸಹಿತ 4.5 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
-ಸುಜಾತಾ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಪ್ರಭಾರ), ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.