Uppala: ಸುಮಾರು 3.5 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ: ಓರ್ವನ ಸೆರೆ

ಉಪ್ಪಳದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಅಮಲು ಪದಾರ್ಥ

Team Udayavani, Sep 20, 2024, 8:43 PM IST

\172.17.1.5ImageDirUdayavaniDaily21-09-24Daily_NewsDrugs.tif\172.17.1.5ImageDirUdayavaniDaily21-09-24Daily_NewsDrugs.tif

ಉಪ್ಪಳ: ಇತ್ತೀಚೆಗಿನ ವರ್ಷಗಳಲ್ಲಿಯೇ ಗರಿಷ್ಠ ಮೌಲ್ಯ ಎನಿಸಿರುವ 3.5 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಅನ್ನು ಕಾಸರಗೋಡು ಪೊಲೀಸರು ವಶ ಪಡಿಸಿಕೊಂಡಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.

ಕಾಸರಗೋಡಿನಲ್ಲಿ ಅಮಲುಪದಾರ್ಥ ಜಾಲ ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್‌ ನೇತೃತ್ವದಲ್ಲಿ ಮೇಲ್ಪರಂಬ ಠಾಣೆ ಇನ್ಸ್‌ಪೆಕ್ಟರ್‌ ಎ. ಸಂತೋಷ್‌ ಕುಮಾರ್‌ ಅವರ ತಂಡ ಶುಕ್ರವಾರ ಮಧ್ಯಾಹ್ನ ಮನೆಯೊಂದಕ್ಕೆ ದಾಳಿ ನಡೆಸಿ ಶೋಧ ನಡೆಸಿದಾಗ ಭಾರೀ ಪ್ರಮಾಣದ ಅಮಲು ಪದಾರ್ಥ ಪತ್ತೆಯಾಯಿತು.

ಮನೆಯ ಮಾಲಕ ಅಸ್ಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಜಾಲದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ಅವರ ಸೆರೆಗೆ ಬಲೆ ಬೀಸಿದ್ದಾರೆ.

ಬಾಯ್ಬಿಟ್ಟ ಆರೋಪಿ: ಆ. 30ರಂದು ಮೇಲ್ಪರಂಬ ಕೈನೋತ್ತ್ ರಸ್ತೆಯಲ್ಲಿ 49.33 ಗ್ರಾಂ ಎಂ.ಡಿ.ಎಂ.ಎ. ಸಹಿತ ಅಬ್ದುಲ್‌ ರಹೀಂ ಯಾನೆ ರವಿಯನ್ನು ಪೊಲೀಸರು ಬಂಧಿಸಿದ್ದರು. ಈತನಿಗೆ ಇದು ಎಲ್ಲಿಂದ ಪೂರೈಕೆಯಾಗಿದೆ ಎಂಬುದರ ಕುರಿತು ತೀವ್ರ ತನಿಖೆ ನಡೆಸಿದಾಗ ಪೊಲೀಸರಿಗೆ ಕೆಲವು ಮಾಹಿತಿ ಸಿಕ್ಕಿದ್ದು, ಅದರಂತೆ ಉಪ್ಪಳದ ಪತ್ವಾಡಿಯ ಮನೆಗೆ ಡಿವೈಎಸ್‌ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು.

ಉಪಾಯದಲ್ಲಿ ಕರೆಸಿಕೊಂಡ ಪೊಲೀಸರು
ಪೊಲೀಸರು ದಾಳಿ ನಡೆಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಅನಂತರ ಪೊಲೀಸರು ಉಪಾಯ ದಿಂದ ಆತನನ್ನು ಮನೆಗೆ ಕರೆಸಿಕೊಂಡು ಬೀಗ ತೆಗೆಸಿ ತಪಾಸಣೆ ನಡೆಸಿದಾಗಲೇ ಬೃಹತ್‌ ಜಾಲ ಬೆಳಕಿಗೆ ಬಂದದ್ದು.

ತಪಾಸಣೆ ಮಾಡಿದಾಗ ಕಾರ್ಡ್‌ ಬೋರ್ಡ್‌ ಪೆಟ್ಟಿಗೆಯಲ್ಲಿ ತುಂಬಿಸಿಟ್ಟಿದ್ದ ಸುಮಾರು ಮೂರು ಕಿಲೋ ಎಂ.ಡಿ.ಎಂ.ಎ., ಒಂದು ಕಿಲೋ ಗಾಂಜಾ ಪತ್ತೆ ಹಚ್ಚಲಾಯಿತು. ಪೇಸ್ಟ್‌ ರೂಪದಲ್ಲಿ ಅಮಲು ಪದಾರ್ಥಗಳು ಅಲ್ಲದೆ ಹಲವಾರು ಮತ್ತು ಬರಿಸುವ ಮಾತ್ರೆಗಳು ಪತ್ತೆಯಾಗಿದೆ. ಆದರೆ ಆತನಿಗೆ ಇವುಗಳೆಲ್ಲ ಎಲ್ಲಿಂದ ಬಂದಿತ್ತು ಎಂಬ ಕುರಿತಾಗಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಎಲ್ಲಿಂದ ಸರಬರಾಜು? ಡ್ರಗ್ಸ್‌ ಅನ್ನು ಎಲ್ಲಿಂದ ತರಲಾಗುತಿತ್ತು ಎಂಬ ಕುರಿತು ತನಿಖೆ ನಡೆಯುತ್ತಿದೆ. ಆದರೆ ಇದುವರೆಗೆ ಪತ್ತೆಯಾದ ಹೆಚ್ಚಿನ ಪ್ರಕರಣಗಳಲ್ಲಿ ಕರ್ನಾಟಕದಿಂದ ಬಂದಿರುವ ಮಾಹಿತಿ ಸಿಕ್ಕಿತ್ತು. ಗಡಿ ಪ್ರದೇಶದ ಮೂಲಕ ಕಾಸರಗೋಡಿಗೆ ಡ್ರಗ್ಸ್‌ ಸರಬರಾಜು ಆಗಿದ್ದನ್ನು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದರು. ಇಲ್ಲಿಗೂ ಅಲ್ಲಿಂದಲೇ ಬಂದಿರುವ ಸಂಶಯದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ.

ಡ್ರಗ್ಸ್‌ ಸಂಗ್ರಹಿಸಲೆಂದೇ ಬೃಹತ್‌ ಮನೆ ಖರೀದಿ!
ವಿಶೇಷ ಎಂದರೆ ರಸ್ತೆಯ ಬದಿಯಲ್ಲಿರುವ ಎರಡು ಮಹಡಿಯ ಈ ಬೃಹತ್‌ ಮನೆಯನ್ನು ಡ್ರಗ್ಸ್‌ ಸಂಗ್ರಹಿಸಿ ಇಡಲೆಂದೇ ಖರೀದಿಸಲಾಗಿತ್ತು ಎಂಬುದು ಗೊತ್ತಾಗಿದೆ. ಎಂಟು ವರ್ಷಗಳ ಹಿಂದೆ ಮನೆ ಖರೀದಿಸಿದವರು ಇದನ್ನು ಕೇಂದ್ರೀಕರಿಸಿ ಅಮಲು ಪದಾರ್ಥ ವ್ಯವಹಾರ ನಡೆಸುತ್ತಿದ್ದಾರೆಂದು ಮಾಹಿತಿ ಲಭಿಸಿದೆ. ಅಸ್ಕರ್‌ ಡ್ರಗ್ಸ್‌ ಅನ್ನು ಕಾರಿನಲ್ಲಿ ತಂದು ಈ ಮನೆಯಲ್ಲಿ ಇರಿಸುತ್ತಿದ್ದ. ಇಲ್ಲಿಂದ ಸಣ್ಣ ಸಣ್ಣ ಪೊಟ್ಟಣ ಮಾಡಿ ಬೇರೆ ಬೇರೆ ಕಡೆ ಸಾಗಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಅಸ್ಕರ್‌ ಕುಟುಂಬ ಸಹಿತ ವಾಸಿಸುವ ಮನೆ ಬೇರೆಯೇ ಇದ್ದು, ಇಲ್ಲಿಗೆ ಹೆಚ್ಚಾಗಿ ಹಗಲಿನ ಹೊತ್ತಿನಲ್ಲಿ ಬಂದು ಹೋಗುತ್ತಿದ್ದ. ಮನೆಯ ಸುತ್ತಮುತ್ತ ಎತ್ತರದ ಕಾಂಪಾಂಡ್‌ ಕೂಡ ಇದ್ದುದರಿಂದ ಈ ಮನೆಗೆ ಯಾರು ಬರುತ್ತಾರೆ, ಯಾರು ಇರುತ್ತಾರೆ ಎಂಬುದು ಹತ್ತಿರದವರಿಗೂ ಗೊತ್ತಿರಲಿಲ್ಲ. ಶುಕ್ರವಾರ ಪೊಲೀಸರು ದಾಳಿ ನಡೆಸಿದಾಗ ಅದನ್ನು ನೋಡುವುದಕ್ಕಾಗಿಯೂ ಹಲವಾರು ಮಂದಿ ಇಲ್ಲಿ ಜಮಾಯಿಸಿದ್ದರು.

ಟಾಪ್ ನ್ಯೂಸ್

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.