![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 1, 2022, 1:21 AM IST
ಕುಂದಾಪುರ: ಉಪ್ಪಿನಕುದ್ರು ಲವ್ ಜೆಹಾದ್ ಪ್ರಕರಣದ ಹಿಂದಿನ ಶಕ್ತಿಗಳ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಪರಾರಿಯಾದ ಆರೋಪಿಗಳು ಕೇರಳದಲ್ಲಿ ಇದ್ದರು. ಅಲ್ಲಿ ಲವ್ ಜೆಹಾದ್‌ಗೆ ತರಬೇತಿ ನೀಡುವ ಸಂಸ್ಥೆಯೇ ಕಾರ್ಯಾಚರಿಸುತ್ತಿದೆ. ಘಟನೆಯ ಹಿಂದಿನ ಸಂಘಟನೆ, ಶಕ್ತಿಗಳ ಮುಖವಾಡ ಬಯಲಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.
ಅವರು ಮಂಗಳವಾರ ಸಂಜೆ ಇಲ್ಲಿನ ಶಾಸ್ತ್ರಿ ವೃತ್ತದ ಬಳಿ ವಿಹಿಂಪ ಹಾಗೂ ಬಜರಂಗದಳ ವತಿಯಿಂದ ನಡೆದ ಲವ್ ಜೆಹಾದ್ ವಿರುದ್ಧದ ಪ್ರತಿಭಟನೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉನ್ನತ ತನಿಖೆಗೆ ಆಗ್ರಹಿಸಿ ಬುಧವಾರ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗೆ ಮನವಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಶಿಲ್ಪಾ ರೀತಿ ಬೇರೆ ಹೆಣ್ಣುಮಕ್ಕಳಿಗೆ ಅನ್ಯಾಯ ಆದರೆ ಹಿಜಾಬ್ ಘಟನೆಯಂತೆಯೇ ಆರ್ಥಿಕ ಬಹಿಷ್ಕಾರ ಹಾಕಲಾಗುವುದು. ಕುಂದಾಪುರದ ಜನ ಸೌಮ್ಯವಾದಿಗಳು. ಇಂದು ಒಂದು ಮನೆಯಲ್ಲಿ ನಡೆದುದು ನಾಳೆ ಇನ್ನೊಂದಷ್ಟು ಮನೆಗಳಿಗೆ ಹಬ್ಬದಂತೆ ಹಿಂದೂ ಸಮಾಜ ಜಾಗೃತಗೊಳ್ಳಬೇಕು. ಸಾಮಾ ಜಿಕ ಜಾಲತಾಣಗಳಿಂದ ಹೆಣ್ಮಕ್ಕಳು ದೂರ ಇರಬೇಕು ಎಂದರು.
ಪ್ರತೀ ಗ್ರಾಮದಲ್ಲಿ
ಮಹಿಳಾ ಬ್ರಿಗೇಡ್
ಬಜರಂಗದಳ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್. ಮಾತನಾಡಿ, ಲವ್ ಜೆಹಾದ್ ವ್ಯವಸ್ಥಿತವಾಗಿ ವ್ಯಾಪಿಸುತ್ತಿದೆ. ಇದು ಕೇವಲ ಪ್ರತಿಭಟನೆ ಅಲ್ಲ, ಜನಜಾಗೃತಿ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮಗಳಲ್ಲಿ ಮಹಿಳಾ ಬ್ರಿಗೇಡ್ ಆರಂಭಿಸಲಾಗುವುದು ಎಂದರು.
ವಿಹಿಂಪ ಉಡುಪಿ ಜಿಲ್ಲಾ ಕಾರ್ಯ ದರ್ಶಿ ದಿನೇಶ್ ಮೆಂಡನ್, ಸಮಾಜದ ರಕ್ಷಣೆಗೆ ತ್ರಿಶೂಲ ದೀಕ್ಷೆ ನೀಡಲಾಗಿದೆ. ಅಗತ್ಯ ಬಿದ್ದರೆ ಅದರ ಉಪಯೋಗ ನಮಗೆ ತಿಳಿದಿದೆ. ಘಟನೆಯ ಹಿಂದಿನ ಎಲ್ಲ ಷಡ್ಯಂತ್ರ ಬಯಲಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
ವಿಹಿಂಪ ಕೇಂದ್ರ ವಿಶ್ವಸ್ತ ಮಂಡಳಿ ಸದಸ್ಯ ಪ್ರೇಮಾನಂದ ಶೆಟ್ಟಿ ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಬಿಜೂರು, ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್, ಮೃತ ಶಿಲ್ಪಾಳ ಸಹೋದರ ರಾಘವೇಂದ್ರ ದೇವಾಡಿಗ, ವಿಹಿಂಪ ಜಿಲ್ಲಾ ಸಂಪರ್ಕ ಪ್ರಮುಖ್ ಗಿರೀಶ್ ಕುಂದಾಪುರ, ಬಜರಂಗದಳ ತಾಲೂಕು ಸಂಯೋಜಕ ಸುಧೀರ್ ಮೇರ್ಡಿ, ಸಂಘಟನೆ ಮುಖಂಡರಾದ ಗುರುರಾಜ್ ಸಂಗಂ, ವಸಂತ ಸಂಗಂ, ವಿಹಿಂಪ ತಾಲೂಕು ಕಾರ್ಯದರ್ಶಿ ಪ್ರದೀಪ್ ಮಾರ್ಕೋಡು ಉಪಸ್ಥಿತರಿದ್ದರು.
ಸುರೇಂದ್ರ ಕೋಟೇಶ್ವರ ನಿರ್ವಹಿಸಿದರು. ಹೊಸ ಬಸ್ ನಿಲ್ದಾಣದಿಂದ ಶಾಸ್ತ್ರಿ ವೃತ್ತದ ವರೆಗೆ ಮೆರವಣಿಗೆ ನಡೆಯಿತು. ಡಿವೈಎಸ್‌ಪಿಗೆ ಮನವಿ ನೀಡಲಾಯಿತು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.