Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು
Team Udayavani, Jul 27, 2024, 1:19 AM IST
ಉಪ್ಪುಂದ: ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟ ಘಟನೆ ಜು. 26ರಂದು ನಾವುಂದದಲ್ಲಿ ಸಂಭವಿಸಿದೆ.
ಗಂಗೊಳ್ಳಿ ನಾಯಕವಾಡಿ ನಿವಾಸಿ ಸಂದೀಪ್ (40) ಮೃತರು.
ಅವಿವಾಹಿತರಾಗಿರುವ ಅವರು ವಾಹನಗಳ ಚೇಸಿಗೆ ಪೈಂಟಿಂಗ್ ಮಾಡುವ ಕೆಲಸ ಮಾಡಿಕೊಂಡಿದ್ದರು. ವರ್ಷಕ್ಕೆ ಒಂದೆರಡು ತಿಂಗಳು ನಾವುಂದಕ್ಕೆ ಬಂದು ವಾಹನಗಳ ಚೇಸಿಗೆ ಪೈಂಟಿಂಗ್ ಮಾಡುವ ಕೆಲಸ ಮಾಡುತ್ತಾರೆ. ಅವರು ಜು. 25ರಂದು ಕೆಲಸಕ್ಕೆ ಬಂದಿದ್ದರು.
ಕೆಲಸ ಪ್ರಾರಂಭ ಮಾಡುವ ಹೊತ್ತಿಗೆ ಪೈಂಟಿಂಗ್ ಮಾಡೋ ಕಂಪ್ರಷರ್ ಮೆಷಿನ್ ಕೈ ಕೊಟ್ಟಿತ್ತು. ಬಳಿಕ ದುರಸ್ತಿ ಮಾಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದರು. ಜು. 26ರಂದು ಬೆಳಗ್ಗೆ ಮಿಷನ್‌ನೊಂದಿಗೆ ಬಂದಿದ್ದ ಅವರು ವಿದ್ಯುತ್ ಇಲ್ಲದೆ ಇರುವುದರಿಂದ ವಾಪಸ್ ಹೋಗಿದ್ದರು.
ಮಧ್ಯಾಹ್ನ ಕೆಲಸ ಮಾಡಲು ಕಂಪ್ರಷರ್ ಮಷಿನ್‌ಗೆ ವಯರ್ ಅಳವಡಿಸಿಕೊಂಡು ಕೆಲಸ ಮಾಡುವಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ. ಅವರು ಮಿಷನ್ ಎಳೆದುಕೊಂಡು ಬರುತ್ತಿರುವಾಗ ವಿದ್ಯುತ್ ಶಾಕ್ ತಗಲಿತ್ತು. ಈ ಸಂದರ್ಭ ಹೊರಗಡೆ ಇಬ್ಬರು ವಾಹನ ಚಾಲಕರು ನಿಂತಿದ್ದರು. ಅವರಿಗೆ ಯಾವುದೇ ಶಬ್ದ, ಕಿರುಚಾಟ ಕೂಡ ಕೇಳಿಸಲಿಲ್ಲ. ಸಂದೀಪ್ ಹೊರಗೆ ಬಾರದಿದ್ದನ್ನು ನೋಡಲು ಹೋದಾಗ ಅವಘಡ ಸಂಭವಿಸಿರುವುದು ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.