Belman: ದಾರಿ ದೀಪ, ರಸ್ತೆ, ರುದ್ರಭೂಮಿ ದುರಸ್ತಿಗೆ ಆಗ್ರಹ

ಉದಯವಾಣಿ ವರದಿ ಮಾಡಿದ್ದ ಜಾರಿಗೆಕಟ್ಟೆ ಬಸ್ಸು ನಿಲ್ದಾಣ ಬಳಿಯ ಚರಂಡಿ ರಿಪೇರಿಗೆ ಆಗ್ರಹ

Team Udayavani, Jul 30, 2024, 4:00 PM IST

light

ಬೆಳ್ಮಣ್‌: ಮುಂಡ್ಕೂರು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಸೋಮವಾರ ಪಂಚಾಯತ್‌ನ ಸಭಾಭವನದಲ್ಲಿ ಅಧ್ಯಕ್ಷ ದೇವಪ್ಪ ಸಪಳಿಗರ ಅಧ್ಯಕ್ಷತೆಯಲ್ಲಿ ನಡೆದು ದಾರಿ ದೀಪ ಅಳವಡಿಕೆ, ಚರಂಡಿ ಅವ್ಯವಸ್ಥೆ, ರಸ್ತೆಗಳ ದುರಸ್ತಿಯ ಬಗ್ಗೆ ಭಾರೀ ಆಗ್ರಹ ಕೇಳಿಬಂತು.

ಮೋಕ್ಷಧಾಮಕ್ಕೆ ಮುಕ್ತಿ ನೀಡಿ
30 ವರ್ಷಗಳ ಹಿಂದೆ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿಯ ನೇತೃತ್ವದಲ್ಲಿ ಪ್ರಾರಂಭಗೊಂಡ ಮೋಕ್ಷ ಧಾಮ ಹೆಸರಿನ ಹಿಂದೂ ರುದ್ರಭೂಮಿ ಅವ್ಯವಸ್ಥೆಗಳಿಂದ ಕೂಡಿದೆ, ಮಳೆ ನೀರು ಗಾಳಿಗೆ ಒಳ ಹರಿಯುತ್ತಿದೆ ಅದನ್ನು ದುರಸ್ತಿಪಡಿಸಿ ಎಂದು ಪಂಚಾಯತ್‌ ಮಾಜಿ ಸದಸ್ಯ ಸೋಮನಾಥ ಪೂಜಾರಿ ಆಗ್ರಹಿಸಿದಾಗ ಪ್ರತ್ಯುತ್ತರಿಸಿದ ಪಂಚಾಯತ್‌ ಅಧ್ಯಕ್ಷ ದೇವಪ್ಪ ಸಪಳಿಗ ಹಾಗೂ ಪಿಡಿಒ ಸತೀಶ್‌ ಆ ರುದ್ರಭೂಮಿ ಸಮಿತಿಯ ಅಡಿಯಲ್ಲಿದ್ದು ಇನ್ನೂ ಪಂಚಾಯತ್‌ಗೆ ಹಸ್ತಾಂತರವಾಗಿಲ್ಲ ಎಂದರು. ಈ ಬಗ್ಗೆ ಸಮಿತಿಗೆ ತಿಳಿಸಿ ಕಾಯಕಲ್ಪ ನೀಡುವಂತೆ ಒತ್ತಾಯಿಸಲಾಯಿತು.

ಜಾರಿಗೆಕಟ್ಟೆ ಬಸ್‌ ನಿಲ್ದಾಣ ಬಳಿಯ ಚರಂಡಿ ಬಿಡಿಸಲು ಆಗ್ರಹ
ಜಾರಿಗೆಕಟ್ಟೆ ಬಸ್‌ ನಿಲ್ದಾಣ ಹತ್ತಲು ದೋಣಿಯೇ ಬೇಕು ಎಂಬ ಶೀರ್ಷಿಕೆಯಡಿ ಉದಯವಾಣಿ ಸುದಿನ ವರದಿ ಕಂಡಿದ್ದ ಪ್ರಕರಣವನ್ನು ಗ್ರಾಮಸ್ಥ ಅವಿಲ್‌ ಡಿ’ಸೋಜಾ ಪಂಚಾಯತ್‌ ಗಮನಕ್ಕೆ ತಂದಾಗ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಬರೆಯಲಾಗಿದ್ದು ಶೀಘ್ರ ಗಮನ ಹರಿಸಲಾಗುವುದೆಂದರು. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಕಳೆದ ಹಲವು ಗ್ರಾಮ ಸಭೆಗಳಿಗೆ ಗೈರಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು.

ವಿವಿಧ ಬೇಡಿಕೆಗಳೊಂದಿಗೆ ರಾಜಮುಗುಳಿ
ವಾರ್ಡ್‌ ಜನ ಮುಂಡ್ಕೂರಿನ ಅತೀ ಎತ್ತರದ ಪ್ರದೇಶವಾಗಿರುವ ರಾಜಮುಗುಳಿಯಲ್ಲಿ ಮಳೆಗಾಲದಲ್ಲೂ ನೀರಿನ ಸಮಸ್ಯೆ ಇರುವ ಬಗ್ಗೆ ದೂರು ಕೇಳಿ ಬಂತು.ಇಲ್ಲಿ ದಾರಿ ದೀಪ ಸಮಸ್ಯೆ, ಮಂಜುರಾದ ಸೈಟುಗಳಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟದಿರುವುದು ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಯಿತು.

ಗ್ರಾಮೀಣ ರಸ್ತೆ ದುರಸ್ತಿಪಡಿಸಿ
ಇಳಿಜಾರು ಭಾಗಗಳ ರಸ್ತೆಗಳು ಅಪಾಯಕಾರಿಯಾಗಿವೆ. 15ನೇ ಹಣಕಾಸು ಯೋಜನೆಯಡಿ ಸಮರ್ಪಕ ಆನುದಾನ ನೀಡಿ ಈ ರಸ್ತೆ ದುರಸ್ತಿಪಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಜೆಜೆಎಂ ಪೈಪ್‌ ಲೈನ್‌ನಿಂದ ರಸ್ತೆ ಬದಿ ಹಾಳು
ಪಂಚಾಯತ್‌ನ ಎಲ್ಲೆಡೆ ರಸ್ತೆ ಬದಿಗಳಲ್ಲಿ ಜೆಜೆಎಂ ಪೈಪ್‌ ಲೈನ್‌ ಅಳವಡಿಕೆ ನಡೆದಿದ್ದು ರಸ್ತೆಯ ಪಕ್ಕ ವಾಹನಗಳು ಹೂತು ಹೋಗಿ ಅಪಾಯ ಎದುರಾಗಿದೆ ಎಂದೂ ದೂರು ಕೇಳಿ ಬಂದು ಈ ಬಗ್ಗೆ ಎಂಜಿನಿಯರ್‌ ರಂಜಿತ್‌ ತಂದರೆಗಳಾಗಿದ್ದಲ್ಲಿ ಕೂಡಲೇ ತಿಳಿಸಿ ಎಂದರು.

ಅಂಗನವಾಡಿ ಸ್ಥಳಾಂತರಕ್ಕೆ ಬೇಡಿಕೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ಮಾಹಿತಿ ನೀಡಿದಾಗ ಈಗಿರುವ ಆಂಗನವಾಡಿಗೆ ಆವರಣ ಗೋಡೆ ಇಲ್ಲ , ಮಕ್ಕಳಿಗೆ ಭದ್ರತೆ ಇಲ್ಲ ಎಂದು ಉದಯವಾಣಿ ವರದಿ ಮಾಡಿದ್ದು ಈ ಬಗ್ಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲ ವ್ಯವಸ್ಥೆಗಳಿದ್ದು ಅಲ್ಲಿ ಅಂಗನವಾಡಿ ನಡೆಸಿ ಎಂದು ಪಂಚಾಯತ್‌ ಅಧ್ಯಕ್ಷ ದೇವಪ್ಪ ಸಪಳಿಗ ಮನವಿ ಮಾಡಿದರು. ಈ ಬಗ್ಗೆ ಇಲಾಖೆಗೆ ತಿಳಿಸುವುದಾಗಿ ಶ್ರೀಮತಿ ತಿಳಿಸಿದರು

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ| ಸತೀಶ್‌, ಮೆಸ್ಕಾಂನ ಸೋಮಯ್ಯ, ಕೃಷಿ ಇಲಾಖೆಯ ರಮೇಶ್‌ ಉಳ್ಳಾಗಡ್ಡಿ, ಕಂದಾಯ ಇಲಾಖೆಯ ಹಣಮಂತ, ತೋಟಗಾರಿಕಾ ಇಲಾಖೆಯ ಶ್ರೀನಿವಾಸ ರಾವ್‌, ಪೊಲೀಸ್‌ ಇಲಾಖೆಯ ಪ್ರಕಾಶ್‌ ಮತ್ತಿತರರು ಮಾಹಿತಿ ನೀಡಿದರು.

ಹಿರ್ಗಾನ ಪಶು ವೈದ್ಯಾಧಿಕಾರಿ ಸುನಿಲ್‌ ಕುಮಾರ್‌ ನೋಡೆಲ್‌ ಆಧಿಕಾರಿಯಾಗಿದ್ದು ಪಂಚಾಯತ್‌ ಉಪಾಧ್ಯಕ್ಷೆ ಸುಶೀಲಾ ಬಾಬು, ಕಾರ್ಯದರ್ಶಿ ಸಾಧು, ಪಂಚಾಯತ್‌ ಸದಸ್ಯರಿದ್ದರು. ಪಿಡಿಒ ಸತೀಶ್‌ ನಿರೂಪಿಸಿದರು.

ರಸ್ತೆ ಬದಿ ಮರ ತೆರವು ಮಾಡಿ
ಪೇರೂರು ಸಹಿತ ಗ್ರಾಮದ ವಿವಿಧ ಭಾಗಗಳಲ್ಲಿ ಬೃಹತ್‌ ಮರಗಳು ರಸ್ತೆಗೆ ಬಾಗಿದ್ದು ಬೀಳುವ ಸ್ಥಿತಿಯಲ್ಲಿದೆ ಅದನ್ನು ಕೂಡಲೇ ತೆರವು ಮಾಡಿ ಎಂದು ಅರಣ್ಯ ಇಲಾಖೆಗೆ ಸಾಯಿನಾಥ
ಶೆಟ್ಟಿ ವಿನಂತಿಸಿದರೆ ಅರಣ್ಯ ಇಲಾಖೆಯ ಆಧಿಕಾರಿ ಮನೀಶ್‌ ಲಕ್ಷ್ಮಣ್‌ ಖಾಸಗಿ ಜಮೀನಿನ ಮರಗಳನ್ನು ತೆರವುಗೊಳಿಸಲು ಜಮೀನು ಮಾಲಕರು ದಾನಿಗಳ ನೆರವು ಪಡೆಯಬೇಕಾಗಿದೆ ಎಂದರು.

ಅನುದಾನ ಸಾಲುತ್ತಿಲ್ಲ
ಅನುದಾನ ಸಾಲುತ್ತಿಲ್ಲ ಎಂದು ಪಂಚಾಯತ್‌ ಸದಸ್ಯ ಲೋಕೇಶ್‌, ಸಚ್ಚೇರಿಪೇಟೆ, ಮುಂಡ್ಕೂರಿನಲ್ಲಿ ಮಟ್ಕಾ ಹಾವಳಿ ಜೋರಿದೆ ಎಂದು ಇನ್ನೋರ್ವ ಸದಸ್ಯ ಸಂದೀಪ್‌ ಶೆಟ್ಟಿ ಸಚ್ಚರಪರಾರಿ, ಅಂಚೆ ಇಲಾಖೆಯ ರಸ್ತೆ ಕೆಟ್ಟು ಹೋಗಿದೆ ಎಂದು ಹಿರಿಯ ಸದಸ್ಯ ಕರಿಯ ಪೂಜಾರಿ, ಗ್ರಾಮಸ್ಥರು ಯಾವುದೇ ದೂರುಗಳು ಫಾಲೋಅಪ್‌ ಆಗುತ್ತಿಲ್ಲ ಎಂದು ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಭಾಸ್ಕರ ಶೆಟ್ಟಿ ಆರೋಪಿಸಿದರು. ಗ್ರಾಮಸ್ಥರ ಪರವಾಗಿ ಜೋಸೆಫ್‌, ಡೆಂಜಿಲ್‌, ಅವಿಲ್‌ ಡಿಸೋಜಾ, ಪ್ರಭಾಕರ ಶೆಟ್ಟಿ , ಸೋಮನಾಥ ಪೂಜಾರಿ, ಅನಿಲ್‌ ಜೋಗಿ ಮತ್ತಿರರು ಮಾತನಾಡಿದರು.

ಟಾಪ್ ನ್ಯೂಸ್

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.