ಅಮೆರಿಕದ ಅರ್ಥ ವ್ಯವಸ್ಥೆ ರೇಟಿಂಗ್ ಇಳಿಕೆ: ರೇಟಿಂಗ್ಸ್ ತಗ್ಗಿಸಿದ್ದಕ್ಕೇನು ಕಾರಣ?
Team Udayavani, Aug 4, 2023, 12:22 AM IST
ಜಗತ್ತಿನ ಪ್ರಬಲ ರಾಷ್ಟ್ರ ಅಮೆರಿಕದ ಅರ್ಥ ವ್ಯವಸ್ಥೆಗೆ ರೇಟಿಂಗ್ ಸಂಸ್ಥೆ, ಫಿಚ್ ನೀಡಿದ ಟ್ರಿಪಲ್‌ಎ (AA)ಯಿಂದ ಎಎ ಪ್ಲಸ್ (AA+)ಗೆ ಇಳಿಕೆ ಮಾಡಲಾಗಿದೆ. ನಿರ್ಧಾರದ ಹಿಂದಿನ ಕಾರಣಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನೇತೃತ್ವದ ಸರಕಾರದ ಕ್ಲಿಷ್ಟಕರವಾದ ಬಜೆಟ್ ಪ್ರಕ್ರಿಯೆ ಮತ್ತು ಹಣಕಾಸು ನೀತಿಗಳಿಂದಾಗಿ ಜಗತ್ತಿನ ಪ್ರಮುಖ ರೇಟಿಂಗ್ಸ್ ಸಂಸ್ಥೆ ಫಿಚ್ ಆ ದೇಶದ ಅರ್ಥ ವ್ಯವಸ್ಥೆಗೆ ನೀಡಿದ್ದ ಟ್ರಿಪಲ್ ಎ (AAA) ರೇಟಿಂಗ್ಸ್ನಿಂದ ಎಎ ಪ್ಲಸ್ (AA+)ಗೆ ಇಳಿಕೆ ಮಾಡಿದೆ. ಸರಕಾರದಲ್ಲಿ ಹೆಚ್ಚುತ್ತಿರುವ ಸಾಲದ ಹೊರೆ ಮುಂದಿನ 3 ವರ್ಷಗಳಲ್ಲಿ ಬಿಗಡಾಯಿಸಲಿರುವ ಅರ್ಥ ವ್ಯವಸ್ಥೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದೆ.
ಹಿಂದೆಯೂ ಆಗಿತ್ತು
ಅಂದ ಹಾಗೆ ಅಮೆರಿಕದ ಅರ್ಥ ವ್ಯವ ಸ್ಥೆಯ ರೇಟಿಂಗ್ಸ್ ತಗ್ಗಿಸಿದ್ದು ಮೊದಲಲ್ಲ. 2011ರಲ್ಲಿ ಸ್ಟಾಂಡರ್ಡ್ ಆ್ಯಂಡ್ ಪೂರ್ ಟ್ರಿಪಲ್ ಎ ರೇಟಿಂಗ್ಸ್ ಅನ್ನು ತಗ್ಗಿಸಿತ್ತು. ಆಗ ನಿರುದ್ಯೋಗ ಪ್ರಮಾಣ ಶೇ.9 ಆಗಿತ್ತು. ಪ್ರಸಕ್ತ ಸನ್ನಿವೇಶದಲ್ಲಿ ಶೇ.3.6 ಇದೆ. ಹೀಗಾಗಿ ಪರಿಸ್ಥಿತಿ ಉತ್ತಮವೇ ಎಂಬ ವಾದಗಳನ್ನು ಮುಂದಿಡಲಾಗುತ್ತಿದೆ.
22 ವರ್ಷಗಳಲ್ಲಿ ಅಧಿಕ
ಅಮೆರಿಕ ಹೊಂದುತ್ತಿರುವ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಏರಿಕೆಯಾಗುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ಫೆಡರಲ್ ರಿಸರ್ವ್ 22 ವರ್ಷಗಳಿಗೆ ಹೋಲಿಕೆ ಮಾಡಿದರೆ ಅಧಿಕವೆಂಬಂತೆ ಬಡ್ಡಿದರ ಏರಿಕೆ ಮಾಡಿತ್ತು. 2025ರ ವೇಳೆಗೆ ಅಮೆರಿಕದ ಸಾಲ ಪ್ರಮಾಣ ಅಲ್ಲಿನ ಜಿಡಿಪಿಯ ಶೇ.118ರ ವರೆಗೆ ಜಿಗಿಯಬಹುದು ಎಂದಿದೆ ಫಿಚ್.
ಅದರ ಪ್ರಭಾವ ಏನು?
ಅಂದಾಜು ಮಾಡಿದಂತೆ ಅತ್ಯಂತ ಕಳವಳಕಾರಿ ಎನ್ನಬಹುದಾದ ಪ್ರಭಾವ ಅಮೆರಿಕ ಮತ್ತು ಜಗತ್ತಿನ ಅರ್ಥ ವ್ಯವಸ್ಥೆಯ ಮೇಲೆ ಸದ್ಯಕ್ಕೆ ಬೀರಲಾರದು ಎಂಬ ವಾದಗಳು ಕೇಳಿ ಬಂದಿವೆ. ಆದರೆ ಅಮೆರಿಕ, ಯು.ಕೆ. ಸಹಿತ ಪ್ರಬಲ ಅರ್ಥ ವ್ಯವಸ್ಥೆಗಳ ಮೇಲೆ ಇರುವ ಆತಂಕದ ಛಾಯೆ ಇನ್ನೂ ಸರಿದಿಲ್ಲ ಎನ್ನುವುದು ಮತ್ತಷ್ಟು ಸ್ಪಷ್ಟವಾಗಿದೆ. ಹೀಗಾಗಿಯೇ ಭಾರತ ಸಹಿತ ಜಗತ್ತಿನ ಹಲವು ರಾಷ್ಟ್ರಗಳ ಷೇರು ಮಾರುಕಟ್ಟೆಗಳಲ್ಲಿ ಪದೇ ಪದೆ ಏರಿಳಿತಗಳು ಉಂಟಾಗುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.