ಅಮೆರಿಕ: ಹಲವು ರಾಜ್ಯಗಳೀಗ ಹೊಸ ಹಾಟ್‌ಸ್ಪಾಟ್‌ಗಳು
Team Udayavani, May 10, 2020, 6:06 PM IST
ಮಣಿಪಾಲ : ಅಮೆರಿಕದ 12 ಕ್ಕೂ ಹೆಚ್ಚು ರಾಜ್ಯಗಳು ಕೋವಿಡ್-19 ವೈರಸ್ ಬಿಕ್ಕಟ್ಟಿನ ಕಾರಣದಿಂದ ವಿಧಿಸಲಾಗಿದ್ದ ಲಾಕ್‌ಡೌನ್ ತೆರವುಗೊಳಿಸುತ್ತಿವೆ. ಇದರೊಂದಿಗೆ ಈ ರಾಜ್ಯಗಳಲ್ಲಿನ ಎಲ್ಲ ರೆಸ್ಟೋರೆಂಟ್, ಅಂಗಡಿಗಳು ಹಾಗೂ ಇನ್ನಿತರ ವ್ಯಾಪಾರ ಚಟುವಟಿಕೆಗಳು ಎಂದಿನಂತೆ ಪುನಾರಂಭವಾಗಲಿವೆ. ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಹೇಗಾದರೂ ಮಾಡಿ ಸರಿದಾರಿಗೆ ತರಲು ರಾಜ್ಯಗಳು ಈ ಕ್ರಮ ಕೈಗೊಂಡಿದ್ದು, ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಆದೇಶಿಸಿವೆ. ಜತೆಗೆ ಲಾಕ್‌ಡೌನ್ ನಿಯಮಗಳು, ಸಾಮಾಜಿಕ ಅಂತರ ನಿಯಮಗಳು ಸೋಂಕು ಪ್ರಸರಣ ಮಟ್ಟ ಕಡಿತಗೊಳಿಸುವಲ್ಲಿ ಯಶಸ್ವಿಯಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆದರೆ ಕೆಲವು ಪ್ರದೇಶಗಳಲ್ಲಿ ಅರಿವಿಗೆ ಬರದಂತೆ ಸೋಂಕು ಹರಡುತ್ತಿದ್ದು, ದೇಶದ 6 ರಾಜ್ಯಗಳು ಕೊರೊನಾದ ಹೊಸ ಹಾಟ್‌ಸ್ಪಾಟ್‌ಗಳಾಗಿ ಗುರುತಿಸಿಕೊಳ್ಳುತ್ತಿವೆ.
ಈ ಕುರಿತು ಫೋರ್ಬ್ ನಿಯತಕಾಲಿಕ ವರದಿ ಮಾಡಿದ್ದು, ಸದ್ಯ ಮ್ಯಾಸಚೂಸೆಚೆಟ್ಸ್, ಜಾರ್ಜಿಯಾ, ಉತಾಹ್, ಟೆಕ್ಸಾಸ್ ಮತ್ತು ದಕ್ಷಿಣ ಡಕೋಟಾ ಹಾಟ್‌ಸ್ಪಾಟ್‌ಗಳಾಗಿ ಗುರುತಿಸಿಕೊಳ್ಳುತ್ತಿವೆ. ಅತ್ಯಂತ ವೇಗವಾಗಿ ಇಲ್ಲಿ ಸೋಂಕು ಪ್ರಸರಿಸುತ್ತಿದ್ದು, ಹೊಸ ಪ್ರಕರಣಗಳು ನಿರ್ದಿಷ್ಟ ಮಟ್ಟಕ್ಕಿಂತ ಅಧಿಕ ಮಟ್ಟದಲ್ಲಿ ದಾಖಲಾಗುತ್ತಿವೆ. ಈಗಾಗಲೇ ಹಲವು ಮಂದಿ ಸೋಂಕಿತನ ಸಂಪರ್ಕಕ್ಕೆ ಬಂದಿದ್ದು, ಪರಿಸ್ಥಿತಿ ನಿಯಂತ್ರಣ ಬಹಳ ಕಷ್ಟ ಎನ್ನಲಾಗುತ್ತಿದೆ.
ದಕ್ಷಿಣ ಡಕೋಟಾದ ಮಾಂಸ ಸಂಸ್ಕರಣಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ 3, 700 ಮಂದಿ ಉದ್ಯೋಗಿಗಳಲ್ಲಿ ಸುಮಾರು 800ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಇಂತಹದೇ ಘಟನೆ ವಾರ್ಸೆಸ್ಟರ್‌ನಲ್ಲಿರುವ ವಾಲ್-ಮಾರ್ಟ್ ಘಟಕದಲ್ಲೂ ನಡೆದಿದ್ದು, ಎರಡು ಪ್ರದೇಶಗಳಲ್ಲಿಯೂ ಸೋಂಕು ಬಂದದ್ದು ಅರಿವಿಗೇ ಬಂದಿರಲಿಲ್ಲ. ಇಡೀ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಒತ್ತಡ ಮಾಡಲಾಗುತ್ತಿದೆ.
ಈ ಮಧ್ಯೆ, ಯುಎಸ್ ಪ್ರಜೆಗಳು ಸದ್ಯ ದೇಶದೆಲ್ಲೆಡೆ ಜಾರಿಯಲ್ಲಿರುವ ಲಾಕ್‌ಡೌನ್ ನಿಬಂಧನೆಗಳನ್ನು ತೆರವುಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿ ಸುತ್ತಿದ್ದಾರೆ. ಇದು ನಿಜಕ್ಕೂ ಹಾಸ್ಯಾಸ್ಪದ ಎಂದು ಸ್ಥಳೀಯ ಮಾಧ್ಯಮಗಳು ಅರ್ಥೈಸಿವೆ.
ಪ್ರಸ್ತುತ ಅಮೆರಿಕದಲ್ಲಿ ಸೋಂಕು ಹೆಚ್ಚಾಗಿದ್ದು, ದಿನೇ ದಿನೆ ಸರಕಾರದ ಪ್ರಯತ್ನವೆಲ್ಲಾ ವಿಫಲವಾಗುತ್ತಿವೆ. ಕ್ಷಿಪ್ರ ಪರೀಕ್ಷೆಯನ್ನು ಹೆಚ್ಚು ಮಾಡಲೂ ಅಮೆರಿಕ ಗಮನಹರಿಸುತ್ತಿದೆ. ಆದರೂ ನಿರೀಕ್ಷಿತ ಪರಿಹಾರ ಸಿಗದಿರುವುದು ಸರಕಾರದ ಉತ್ಸಾಹವನ್ನೂ ಕುಗ್ಗಿಸುತ್ತಿದೆ.
ಟೆಕ್ಸಾಸ್‌ಗೂ ಮುಳುವು
ಟೆಕ್ಸಾಸ್‌ನಲ್ಲಿರುವ ಮಾಂಸ ಸಂಸ್ಕರಣಾ ಘಟಕದಲ್ಲಿಯೂ ಏಕಾಏಕಿ ಸೋಂಕು ಕಾಣಿಸಿಕೊಂಡಿದ್ದು, ಒಂದು ಅಂದಾಜು ಪ್ರಕಾರ 20 ಸಾವಿರಕ್ಕೂ ಹೆಚ್ಚು ಜನ ಸೋಂಕಿಗೆ ತುತ್ತಾಗಿದ್ದಾರೆ. ಪರಿಣಾಮ ಸಮುದಾಯ ಮಟ್ಟದಲ್ಲಿ ಸೋಂಕು ಹರಡುತ್ತಿದ್ದು. ಟೆಕ್ಸಾಸ್ ದೇಶದ ಅಧಿಕ ಸೋಂಕಿನ ಕೇಂದ್ರವಾಗಿ ಪರಿವರ್ತಿತವಾಗುತ್ತಿದೆ. ಸಲ್ಲದಕ್ಕೆ ಶೇ.70ರಷ್ಟು ರಾಜ್ಯದ ಖೈದಿಗಳಲ್ಲಿಯೂ ಸೋಂಕು ದೃಢಪಟ್ಟಿದ್ದು, ಪರಿಸ್ಥಿತಿ ನಿಭಾಯಿಸುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಈ ಎರಡು ಪ್ರಮುಖ ನಗರಗಳೊಂದಿಗೆ
ಉತಾಹ್‌ನ ಪ್ರೊವೊ, ಒರೆಮ್ ಮತ್ತು ಪೇಸನ್ ಮೂರು ನಗರಗಳು ಸೋಂಕಿನ ಹಾಟ್‌ಸ್ಪಾಟ್‌ಗಳಾಗುತ್ತಿವೆ. ಜಾರ್ಜಿಯಾದ ಕೆಲವು ನಗರಗಳೂ ಇದಕ್ಕೆ ಹೊರತಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
MUST WATCH
ಹೊಸ ಸೇರ್ಪಡೆ
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.