US: ಬ್ಯಾಟರಿ, ಸ್ಕ್ರೂ ತಿನ್ನಿಸಿ ಸ್ನೇಹಿತನ ಮಗುವನ್ನೇ ಕೊಂದಳು!
Team Udayavani, Jan 14, 2024, 10:02 PM IST
ವಾಷಿಂಗ್ಟನ್: ಒಂದೂವರೆ ವರ್ಷದ ಮಗುವಿಗೆ ಮಹಿಳೆಯೊಬ್ಬಳು ಬ್ಯಾಟರಿ, ಸ್ಕ್ರೂ , ನೈಲ್ಪಾಲಿಶ್ ರಿಮೂವರ್ನಂಥ ವಿಷಕಾರಿ ವಸ್ತುಗಳನ್ನು ತಿನ್ನಿಸಿ ಹತ್ಯೆಗೈದಿರುವ ಅಮಾನುಷ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ವರದಿಯಾಗಿದೆ. 2023ರ ಜೂನ್ನಲ್ಲಿ ಬೈಲಿ ಜಾಕೋಬಿ ಎಂಬವರ 18 ತಿಂಗಳ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆ ಮಗು ಅಂಗಾಂಗ ವೈಫಲ್ಯದಿಂದ ಆಗಲೇ ಮೃತಪಟ್ಟಿತ್ತು. ಇದ್ದಕ್ಕಿದ್ದಂತೆ ಮಗು ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದ್ದು, ಇದೀಗ ನಿಜಾಂಶ ಬಯಲಿಗೆ ಬಂದಿದೆ. ಜಾಕೋಬಿ ಅವರ ಗೆಳತಿ ಅಲೆಸಿಯಾ ಓವನ್ಸ್ ಮಗುವನ್ನು ಕೊಲ್ಲುವ ಉದ್ದೇಶದಿಂದಲೇ ಈ ವಿಷಕಾರಿ ಅಂಶಗಳ ಬಗ್ಗೆ ಎಲ್ಲಾ ಸಂಶೋಧಿಸಿ, ಮಗುವಿಗೆ ತಿಂಗಳುಗಟ್ಟಲೆ ವಿಷ ಪ್ರಾಶನ ಮಾಡಿದ್ದಾಳೆ. ಇದರಿಂದ ಮಗುವಿನ ರಕ್ತದಲ್ಲಿ ಅಸಿಟೋನ್ ಎಂಬ ಅಂಶ ಹೆಚ್ಚಾಗಿ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.