US: ಅಮೆರಿಕ ವೀಸಾ ಸಂದರ್ಶನ ಈಗ ಸುಲಭ: ಸಂದರ್ಶನಕ್ಕೆ ತಿಂಗಳಲ್ಲೇ ಸ್ಲಾಟ್ ಈಗ ಲಭ್ಯ !
Team Udayavani, Nov 2, 2023, 8:37 PM IST
ನವದೆಹಲಿ: ಅಮೆರಿಕದ ಬಿ1, ಬಿ2 ವೀಸಾಗಳಿಗೆ ಮೊದಲಬಾರಿಗೆ ಅರ್ಜಿ ಸಲ್ಲಿಸಿರುವ ಭಾರತೀಯರು ಅಥವಾ ಈಗಾಗಲೇ 4 ವರ್ಷದ ಹಿಂದೆಯೇ ವೀಸಾಗಳ ಗಡುವು ಮುಗಿದು ಅರ್ಜಿಸಲ್ಲಿಕೆ ಮಾಡಿರುವ ಭಾರತೀಯರು ಇನ್ನುಮುಂದೆ ಇಂಟರ್ವ್ಯೂ ಸ್ಲಾಟ್ಗಳಿಗೋಸ್ಕರ ವರ್ಷಗಟ್ಟಲೇ ಕಾಯುವ ಅಗತ್ಯವಿಲ್ಲ! ಏಕೆಂದರೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಇಂಟರ್ವ್ಯೂ ಸ್ಲಾಟ್ಗಳ ವೈಟಿಂಗ್ ಟೈಮ್ ಅನ್ನು 542 ದಿನಗಳಿಂದ ಕೇವಲ 37 ದಿನಗಳಿಗೆ ಇಳಿಕೆ ಮಾಡಲಾಗಿದೆ.
ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ 2.5 ಲಕ್ಷ ವೀಸಾ ಇಂಟರ್ವ್ಯೂ ಸ್ಲಾಟ್ಗಳನ್ನು ತೆರೆದಿದೆ ಈ ಮೂಲಕ ಅರ್ಜಿದಾರರು ಕಾಯುವಂಥ ಸಮಯ ಗಣನೀಯವಾಗಿ ಕಡಿಮೆಯಾಗಿದೆ. ವೀಸಾ ಅರ್ಜಿಗಳ ತೆರವು ಕಾರ್ಯಾಚರಣೆ ತೀವ್ರವಾಗಿ ಬಾಕಿ ಉಳಿದಿದ್ದ ಹಿನ್ನೆಲೆಯಲ್ಲಿ ರಾಯಭಾರ ಕಚೇರಿ ಕಾಯುವ ಸಮಯವನ್ನು ಕಡಿಮೆಗೊಳಿಸಿ ಸಂದರ್ಶನದ ಸ್ಲಾಟ್ಗಳನ್ನು ತೆರೆದಿದೆ. ಈ ಮೂಲಕ ಭಾರತೀಯರಿಗೆ ಹೆಚ್ಚನ ಅನುಕೂಲವಾದಂಥಾಗಿದೆ.
ಇನ್ನು ನವದೆಹಲಿ ಮಾತ್ರವಲ್ಲದೆ, ದೇಶದ ವಿವಿಧೆಡೆ ಕೂಡ ಇಂಟರ್ವ್ಯೂ ಸ್ಲಾಟ್ಗಳಿಗಾಗಿ ಕಾಯುವ ಸಮಯವನ್ನು ಕಡಿಮೆಗೊಳಿಸಲಾಗಿದೆ. ಕೋಲ್ಕತ್ತಾದಲ್ಲಿ ಈ ಹಿಂದೆ 539 ದಿನಗಳಿದ್ದ ಸಮಯ ಇದೀಗ 126 ದಿನಗಳಿಗೆ, ಮುಂಬೈನಲ್ಲಿ 596 ದಿನಗಳಿಂದ 322 ದಿನಗಳಿಗೆ, ಚೆನ್ನೈನಲ್ಲಿ 526 ದಿನಗಳಿಂದ 341 ದಿನಗಳಿಗೆ ಇಳಿಕೆಯಾಗಿದ್ದರೆ, ಹೈದರಾಬಾದ್ನಲ್ಲಿ ಮಾತ್ರವೇ 506 ದಿನವಿದ್ದ ಇಂಟರ್ವ್ಯೂ ಸ್ಲಾಟ್ ವೈಟಿಂಗ್ ಟೈಮ್ 511 ದಿನಗಳಿಗೆ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.