Karnataka: ಕೃಷಿ ಸಾಲ ಮಿತಿ ವಿಸ್ತರಣೆ ಯಾವಾಗ?
ಕೃಷಿಕರಿಗೆ ಅತ್ಯುಪಯುಕ್ತ ಅಲ್ಪಾವಧಿ, ಮಧ್ಯಮಾವಧಿ ಸಾಲ
Team Udayavani, Sep 10, 2023, 12:30 AM IST
ಮಂಗಳೂರು: ಸಣ್ಣ, ಮಧ್ಯಮ ಕೃಷಿಕರಿಗೆ ಬಹಳ ಪ್ರಯೋಜನಕಾರಿಯಾಗುವ ಅಲ್ಪಾವಧಿ ಶೂನ್ಯ ಬಡ್ಡಿದರದ ಸಾಲದ ಮಿತಿಯನ್ನು 3ರಿಂದ 5 ಲಕ್ಷ ರೂ.ಗಳಿಗೆ ಏರಿಸುವ ರಾಜ್ಯ ಸರಕಾರದ ಭರವಸೆ ಇನ್ನೂ ಕಾರ್ಯಗತಗೊಂಡಿಲ್ಲ.
ಅಷ್ಟೇ ಅಲ್ಲ ಶೇ. 3ರ ಸುಲಭ ಬಡ್ಡಿದರದಲ್ಲಿ ಕೃಷಿ ಅಗತ್ಯಗಳಿಗಾಗಿ ಪಡೆಯುವ ಸಾಲದ ಮಿತಿಯನ್ನು 10ರಿಂದ 15 ಲಕ್ಷ ರೂ.ಗಳಿಗೆ ವಿಸ್ತರಿಸುವ ಘೋಷಣೆಯೂ ಹಾಗೆಯೇ ಉಳಿದುಕೊಂಡಿದೆ.
ಈ ಕೃಷಿ ಹಂಗಾಮಿನಿಂದಲೇ ಆಶ್ವಾಸನೆ ಜಾರಿಗೊಳಿಸ ಲಾಗುವುದು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೀಡಿ 2 ತಿಂಗಳುಗಳಾಗಿವೆ. ಲಭ್ಯಮಾಹಿತಿ ಪ್ರಕಾರ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಈ ಘೋಷಣೆಗಳಾ ಗಿದ್ದು, ಹಣಕಾಸು ಇಲಾಖೆಯ ಪರಿಶೀಲನೆಯಲ್ಲೇ ಇದೆ.
ಕೃಷಿಕರಿಗೆ ಅಲ್ಪಾವಧಿಯ ಕೃಷಿ ಉಪಯೋಗಕ್ಕೆ ಸಾಲವನ್ನು 3ರಿಂದ 5 ಲಕ್ಷ ರೂ.ವರೆಗೆ ವಿಸ್ತರಣೆ ಮಾಡಿದರೆ ಉತ್ತಮ. ಹಲವು ವರ್ಷಗಳಿಂದ ಈ ಮೊತ್ತ 3 ಲಕ್ಷ ರೂ.ಗಳಲ್ಲೇ ಇದೆ, ಬೆಲೆ ಏರಿಕೆಗೆ ಅನುಗುಣವಾಗಿ ಮೊತ್ತವನ್ನೂ ಪರಿಷ್ಕರಿಸಿ ನೀಡಿದರೆ ಉತ್ತಮ ಎಂದು ಕೃಷಿಕರೊಬ್ಬರು ಹೇಳುತ್ತಾರೆ. ಕೃಷಿ ಅಭಿವೃದ್ಧಿ ಮಾಡುವುದಕ್ಕೆ ಈ ಅಲ್ಪಾವಧಿ ಸಾಲದ ವಿಸ್ತರಣೆ ಹಾಗೂ 10ರಿಂದ 15 ಲಕ್ಷ ರೂ.ಗೆ ಮಧ್ಯಮಾವಧಿ ಸಾಲ ವಿಸ್ತರಣೆ ಮಾಡುವುದು ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯ.
ಇನ್ನೂ ಕೃಷಿ ಸಾಲ ಮಿತಿ ವಿಸ್ತರಣೆ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದಿಲ್ಲ, ಶೀಘ್ರ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿದ್ದೇವೆ.
-ಆಶಾ ಕೆ.ಎಂ., ಸಹಕಾರಿ ಇಲಾಖೆಯ
ಹೆಚ್ಚುವರಿ ರಿಜಿಸ್ಟ್ರಾರ್, ಸಾಲ ವಿಭಾಗ
ಶೇ. 3 ಹಾಗೂ ಶೂನ್ಯ ಬಡ್ಡಿದರದ ಸಾಲದ ಮಿತಿ ವಿಸ್ತರಣೆ ಕುರಿತು ಸರಕಾರದ ಆದೇಶ ಶೀಘ್ರ ಆಗಲಿದೆ. ಈಗಾಗಲೇ ಇದು ಅಂತಿಮ ಗೊಂಡಿದೆ, ಆದೇಶದ ಪ್ರತಿಯೂ ಲಭ್ಯವಾಗಲಿದೆ.
-ಕ್ಯಾ| ರಾಜೇಂದ್ರ ಕೆ., ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು
~ ವೇಣುವಿನೋದ್ ಕೆ.ಎಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.